Breaking News

ಸಂವಿಧಾನ ಪೀಠಿಕೆ ಪಠಣ ಮಾಡಿದ ಅಂಗನವಾಡಿ ಬಾಲಕ !

Anganwadi boy recited the Preamble of the Constitution!

ಜಾಹೀರಾತು

ಎಲ್ಲರ ಗಮನಸೆಳೆದ ಹೇರೂರು ಗ್ರಾಮದ ನಾಲ್ಕು ವರ್ಷದ ಭದ್ರೇಶ

ಗಂಗಾವತಿ : ತಾಲೂಕಿನ ಹೇರೂರು ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾದಲ್ಲಿ ನಾಲ್ಕು ವರ್ಷದ ಅಂಗನವಾಡಿ ಬಾಲಕನೊಬ್ಬ ಸಂವಿಧಾನ ಪೀಠಿಕೆ ಪಠಣ ಮಾಡಿ ಎಲ್ಲರ ಗಮನಸೆಳೆದು, ಶಹಬ್ಬಾಷ್ ಎನಿಸಿಕೊಂಡಿದ್ದಾನೆ. !

ಹೌದು ನೀವು ಆಶ್ಚರ್ಯಪಟ್ಟರೂ ನಂಬಲೇಬೇಕು. ಹೇರೂರು ಗ್ರಾಮದ 4ನೇ ಅಂಗನವಾಡಿ ಕೇಂದ್ರದ ಬಾಲಕ ಭದ್ರೇಶ ತಂದೆ ವೀರೇಶ ಎಂಬ ಪೋರ ಎರಡೂವರೆ ನಿಮಿಷಗಳ ಕಾಲ ಸಂವಿಧಾನ ಪೀಠಿಕೆ ಪಠಣ ಮಾಡಿ ನೆರೆದಿದ್ದವರ ಮನಸ್ಸು ಗೆದ್ದಿದ್ದಾನೆ. ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಬುಧವಾರ ಗ್ರಾಮದ ಶಾಲಾ ಮಕ್ಕಳು ಮಹನೀಯರ ವೇಷಭೂಷಣ ಧರಿಸಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಹೇರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೇಘರಾಣಿ ಬಿ.ಮರಕುಂಬಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಹೂಮಾಲೆ ಹಾಕಿ ಜಾಥಾಗೆ ಸ್ವಾಗತಿಸಿದರು. ನಂತರ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.

ಗ್ರಾ.ಪಂ. ಉಪಾಧ್ಯಕ್ಷರಾದ ನಾಗಪ್ಪ, ಸಿಡಿಪಿಓ ಪ್ರವೀಣ್ ಹೇರೂರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರವಿಶಾಸ್ತ್ರಿ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಲಕ್ಷ್ಮೀದೇವಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶಭಾನಮೇಗಂ, ಗ್ರಾಪಂ ಸದಸ್ಯರು, ಕನ್ನಡಪರ ಸಂಘಟನೆ ಮುಖಂಡರು, ದಲಿತಪರ ಸಂಘಟನೆಗಳ ಮುಖಂಡರು ಸೇರಿ ಗ್ರಾಪಂ ಸಿಬ್ಬಂದಿಗಳು ಇದ್ದರು.

About Mallikarjun

Check Also

ಒಳಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕಾಗಿಪರಿಶಿಷ್ಟ ಜಾತಿ ಗಣತಿಯ ಜಾತಿ ಕಾಲಂ ನಲ್ಲಿ ‘ಮಾದಿಗ’ ಎಂದು ಬರೆಸಿರಿ: ಯಲ್ಲಪ್ಪ ಕಟ್ಟಿಮನಿ

For proper implementation of internal reservation, write ‘Madiga’ in the caste column of the Scheduled …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.