Breaking News

ಮುಕ್ತಶೈಕ್ಷಣಿಕಸಂಪನ್ಮೂಲಗಳು ಭಾರತೀಯ ಉಪಕ್ರಮಗಳು

Open educational resources are Indian initiatives

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಗಂಗಾವತಿ,: ನಗರದ ಎಸ್‌ಕೆಎನ್‌ಜಿ ಕಾಲೇಜಿನಲ್ಲಿ ನೈತಿಕತೆ ಮತ್ತು ನೈತಿಕ ಮೌಲ್ಯಗಳಲ್ಲಿ ಬಲವಾಗಿ ನೆಲೆಗೊಂಡಿರುವ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಡಿಪಾಯ ಹಾಕಬೇಕು ಪ್ರತಿಯೊಬ್ಬ ವಿದ್ಯಾರ್ಥಿ ನಿರಂತರ ಅಧ್ಯಯನ ಮಾಡುವ ಮೂಲಕ ನಿಮ್ಮ ಜ್ಞಾನ ಗ್ರಂಥಾಲಯದಲ್ಲಿ ಹೆಚ್ಚಿಸಿಕೊಳ್ಳಿ ಎಂದು ಎಸ್ ಕೆ ಎನ್ ಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ದೇವೇಂದ್ರಪ್ಪ ಜಾಜಿ ಅವರು ವಿದ್ಯರ‍್ಥಿಗಳಿಗೆ ಕಿವಿ ಮಾತು ಹೇಳಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಿಶೇಷ ಉಪನ್ಯಾಸ ಕರ‍್ಯಕ್ರಮದಲ್ಲಿ ಆಗಮಿಸಿರುವ ಡಾ. ಮಲ್ಲಿಕಾರ್ಜುನ ಕಪ್ಪಿ ಆಯ್ಕೆ ಶ್ರೇಣಿ ಗ್ರಂಥಪಾಲಕರು, ಶ್ರೀ ಶಂಕರ್ ಆನಂದ್ ಸಿಂಗ್ ರಾಯ್ಕರ್ ಪ್ರಥಮ ದರ್ಜೆ ಕಾಲೇಜ್ ಹೊಸಪೇಟೆ ವಿಜಯನಗರ ಜಿಲ್ಲಾ ರವರು ತಮ್ಮ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಭಾರತೀಯ ಉಪಕ್ರಮಗಳು ವಿಶೇಷ ಉಪನ್ಯಾಸದಲ್ಲಿ ತಮ್ಮ ಅನುಭವದ ಮಾತುಗಳಲ್ಲಿ ಸಾಕಷ್ಟು ಅಂತರಜಾಲದಲ್ಲಿ ವಿಶೇಷತೆಯನ್ನು ಪಡೆದಿವೆ ಅದನ್ನು ಸರ‍್ಪಕವಾಗಿ ಬಳಕೆ ಮಾಡಿ ವಿವಿಧ ಆಯಾಮಗಳಲ್ಲಿ ಪ್ರಾಧ್ಯಾಪಕರ ಸಹಾಯದಿಂದ ವಿದ್ಯರ‍್ಥಿಗಳು ಉತ್ತಮ ಸಾಧನೆಗೆ ಸಾಧಕರು ಆಗಬೇಕು ಎನ್ನುವ ತಮ್ಮ ಮರ‍್ಮಿಕ ನುಡಿಯಲ್ಲಿ ವಿದ್ಯರ‍್ಥಿಗಳಿಗೆ ಪ್ರೋತ್ಸಾಹಿಸಿದರು. ಈ ಸಂರ‍್ಭದಲ್ಲಿ ಗೌರವಾನ್ವಿತ ಕರ್ನಾಟಕ ರಾಜ್ಯ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರನ್ನು ಆಚರಿಸಲು ಹೇಳಿದೆ ಆದ್ದರಿಂದ ನಾವು ಕಾಲೇಜಿನಲ್ಲಿ ಘೋಷಿಸಿದ್ದೇವೆ
ಡಾ.ಸೆಲ್ವರಾಜ್ ಸಿ ಮುಖ್ಯಸ್ಥರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಪ್ರಸ್ತಾವಿಕ ನುಡಿಯಲ್ಲಿ ಗ್ರಂಥಾಲಯ ಒಳ್ಳೆಯ ಸ್ನೇಹಿತರು ಹೊಂದಿರುವ ಸ್ಥಳ, ವಿದ್ಯಾರ್ಥಿಗಳು ಓದುವ ಶಕ್ತಿಯ ನೆಲೆಯನ್ನು ಕಂಡುಕೊಳ್ಳಬೇಕು ಇರದಿದ್ದರೆ ಸ್ರ‍್ಧಾತ್ಮಕ ಯುಗದಲ್ಲಿ ಮೂಲೆಗುಂಪಾಗುವ ಪರಿಸ್ಥಿತಿ ಉಂಟಾಗಬಹುದು ಎಂದರು. ಶಿಕ್ಷಣವೆಂದರೆ ಓದುವುದು ಬರೆಯುವುದು ಅಲ್ಲದೆ ಅದರ ಜೊತೆಗೆ ನಡೆ-ನುಡಿ ಆಚಾರ ವಿಚಾರ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಂಯೋಜಕರು ಡಾ. ವೈ.ಎಸ್ ವಗ್ಗಿ ಮತ್ತು ಸಹ- ಸಂಯೋಜಕರಾದ ಶ್ರೀ ಅಕ್ಕಿ ಮಾರುತಿ ತಮ್ಮ ನುಡಿಯಲ್ಲಿ ಹೇಳಿದರು, ಪ್ರಾಧ್ಯಾಪಕರು, ವಿದ್ಯರ‍್ಥಿ ಗಳು ಇತರರು ಇದ್ದರು. ಕರ‍್ಯಕ್ರಮ ನಿರೂಪಣೆಯನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ ಶ್ರೀ. ಬಸವರಾಜ ಮತ್ತು ಕುಮಾರಿ ಸಂಪದ ವಂದಿಸಿದರು.

About Mallikarjun

Check Also

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ಬಹಳ ಪ್ರಾಮುಖ್ಯತೆಇದೆ ಕಾರಣಕ್ಕೆ  ಪತ್ರಕರ್ತರು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕಾಗಿರುತ್ತದೆ : ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ನಿಂಗಜ್ಜ

  Journalists must be socially responsible because the press is very important in a democratic …

Leave a Reply

Your email address will not be published. Required fields are marked *