The labor department distributed free laptops to the children of the construction workers.
ವರದಿ : ಬಂಗಾರಪ್ಪ ಸಿ .
ಹನೂರು :ಸರ್ಕಾರದಿಂದ ಕಾರ್ಮಿಕರಿಗೆ ಹಲವಾರು ಯೋಜನೆಯನ್ನು ನೀಡುತ್ತಿದ್ದು ಅದರ ಅಂಗವಾಗಿ ಹನೂರು ಪಟ್ಟಣದ ಪಸು ಆಸ್ಪತ್ರೆಯ ಪಕ್ಕದಲ್ಲಿರುವ ಸಭಾಂಗಣದಲ್ಲಿ ಇಂದು ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು . ವಿತರಿಸಿದ ನಂತರ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಡಾಕ್ಟರ್ ಎಂ ಸವಿತ ಮಾತನಾಡಿ ಜಿಲ್ಲಾಡಾಳಿತದಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ನೀಡುತ್ತಿದ್ದು ಪ್ರತಿ ತಾಲ್ಲೂಕಿನ ನಲವತ್ತು ಮಕ್ಕಳಿಗೆ ಲ್ಯಾಪ್ ಲಾಪ್ ನೀಡಲಾಗಿದೆ.ಕೂಲಿ ಕೆಲಸದಲ್ಲಿ ಹಲವಾರು ದಿನ ಗಳಿಂದ ಕಾರ್ಯ ನಿರ್ವಹಿಸುವ ಕಾರ್ಮಿಕರ ಮಕ್ಕಳನ್ನು ಗುರುತಿಸಿ ನೀಡಲಾಗಿದೆ ಇಂತಹ ಕಾರ್ಯವನ್ನು ಶಾಸಕರ ಮುಖಾಂತರ ನೀಡುತ್ತಿರುವುದು ಮಕ್ಕಳಿಗೆ ಖುಷಿಯ ವಿಚಾರ ನಿಮ್ಮ ಬೆಳವಣಿಗೆ ಉನ್ನತಮಟ್ಟಕ್ಕೆರಲೆಂದು ಮಕ್ಕಳಿಗೆ ತಿಳಿಸಿದರು .
ಇದೇ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಎಮ್ ಆರ್ ಮಂಜುನಾಥ್ ಮಾತನಾಡಿ ಈಗಾಗಲೇ ಇಲಾಖೆಯವರು ಕಾಲೇಜು ಮಟ್ಟದಲ್ಲಿ ಮೂರು ವಿಭಾಗಗಳಾದ ಆರ್ಟ್ಸ್ ,ಕಾಮರ್ಸ್ ,ಸೈನ್ಸ್ ವಿಭಾಗಗಳಿಗೆ ಪ್ರತ್ಯೇಕವಾಗಿ ಗುರುತಿಸಿ .ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ನೀಡುತ್ತಿರುವುದು ಶ್ಲಾಘನೀಯ ಕಾರ್ಮಿಕರ ಮಕ್ಕಳು ಸಹ ಇನ್ನೂಳಿದ ಮಕ್ಕಳಿಗೆ ಕಡಿಮೆಯಿಲ್ಲದಂತೆ ಬೆಳವಣಿಗೆ ಕಾಣುತ್ತಿರುವುದು ಬಹಳ ಉತ್ತಮವಾದದ್ದು ಇವತ್ತಿನ ದಿನದಲ್ಲಿ ಸ್ಪರ್ಧಾತ್ಮಕಯುಗವಾಗಿ ಏರ್ಪಟ್ಟಿದೆ ನಿವುಗಳು ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆದು ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ರಲು ಅನುಕೂಲವಾಗುತ್ತದೆ. ಈ ಲ್ಯಾಪ್ ಟಾಪ್ ನಿಂದ ನಿಮ್ಮ ಭವಿಷ್ಯವನ್ನು ಉಜ್ವಲವಾದ ವಾತವರ್ಣ ನಿರ್ಮಾಣ ಮಾಡಿಕೊಳ್ಳಲು ಸಹಕಾರಿಯಾಗಲಿ ಎಂದರು .ಇದೇ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರಾದ ವಿ ಎಲ್ ಪ್ರಸಾದ್ . ತಾಲ್ಲೂಕು ಇ ಒ ಉಮೇಶ್ , ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಸುನಿಲ್ ,ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮದ ಕಾರ್ಮಿಕರು ಹಾಜರಿದ್ದರು .