Breaking News

ಸರಕಾರ ಪತ್ರಕರ್ತರಿಗೆ ಬಸ್ ಸೌಲಭ್ಯದ ಕ್ರಮ ಶ್ಲಾಘನೆ:ಜರಕುಂಟಿ

Appreciation of the government’s bus facility for journalists: Jarakunti

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಲಬುರ್ಗಾ.ಫೆ.: ರಾಜ್ಯದಲ್ಲಿ ಅತ್ಯಂತ ಕಡಿಮೆ ಗೌರವ ಧನ ಪಡೆಯುವ ಎಲ್ಲಾ ಪತ್ರಕರ್ತರು ಸಂಕಷ್ಟದ ಜೀವನ ಸಾಗಿಸುತ್ತಿದ್ದು ಪತ್ರಕರ್ತರು ವರದಿ ಮಾಡಲು ವಿವಿಧ ಗ್ರಾಮಗಳಿಗೆ ತೆರಳಲು ತಮ್ಮ ಸ್ವಂತ ಕರ್ಚಿನಲ್ಲಿ ಪ್ರಯಾಣ ಮಾಡುತ್ತಿದ್ದು ಇದನ್ನು ತಪ್ಪಿಸಲು ಕರ್ನಾಟಕ ರಾಜ್ಯದ ಈಗಿನ ಮುಖ್ಯಮಂತ್ರಿಗಳಾದ ಸಿದ್ರಾಮಯ್ಯನವರು ವಿಧಾನ ಸಭೆಯಲ್ಲಿ ಗ್ರಾಮೀಣ ಸೇರಿ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಸೌಲಭ್ಯ ಕುರಿತು ಬಜೆಟ್ ನಲ್ಲಿ ಅನುಮೋದನೆ ಮಾಡಿದ್ದು ಈ ಕಾರ್ಯ ಶ್ಲಾಘನಿಯ ಎಂದು ಯಲಬುರ್ಗಾ ತಾಲೂಕ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಖಾಜಾವಲಿ ಎಫ್ ಜರಕುಂಟಿ ಹೇಳಿದರು.

ಯಲಬುರ್ಗಾ ಪಟ್ಟಣದಲ್ಲಿ ಈ ಕುರಿತಂತೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸುಮಾರು ವರ್ಷಗಳ ಹಿಂದೆ ಪತ್ರಕರ್ತರಿಗೆ ಬಸ್ ಸೌಲಭ್ಯ ನೀಡುವಲ್ಲಿ ಸರಕಾರ ಮುಂದಾಗಿತ್ತು ಆದರೆ ಕೆಲವೆ ತಿಂಗಳಲ್ಲಿ ಸ್ಥಗಿತವಾಗಿತ್ತು ಆದರೆ ಈಗಿನ ಮುಖ್ಯಮಂತ್ರಿಯಾದ ಸಿದ್ರಾಮಯ್ಯನವರು ಸದನದಲ್ಲಿ 2024-25ನೆ ಸಾಲಿನ ಬಜೆಟ್ ನಲ್ಲಿ ಪತ್ರಕರ್ತರಿಗೆ ಬಸ್ ಸೌಲಭ್ಯ ಕಲ್ಪಿಸಲು ಅನುದಾನ ನೀಡಿದ್ದು ಪತ್ರಕರ್ತರಿಗೆ ಅನುಕೂಲ ವಾಗಲಿದ್ದು ಸರಕಾರದ ಈ ಕ್ರಮ ತಕ್ಷಣವೆ ಜಾರಿಗೆ ಬರಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *