Gowde Gowda will protest against Central Govt’s atrocities on farmers.

ವರದಿ: ಬಂಗಾರಪ್ಪ ಸಿ .
ಹನೂರು :ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ , ಆದರೆ ರೈತರು ನಡೆಸುತ್ತಿರುವ ಶಾಂತಿಯುತ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಮ್ಮ ರೈತ ಭಾಂದವರ ಮೇಲೆ ಪೋಲಿಸ್ ಹಾಗೂ ಸಶಸ್ತ್ರ ಭದ್ರತಾ ಪಡೆಗಳನ್ನು ಛೂ ಬಿಟ್ಟಿರುವುದಲ್ಲದೇ ಲಾಠಿ ಪ್ರಹಾರ, ರಬ್ಬರ್ ಬುಲೆಟ್ ಆಶ್ರುವಾಯು ಸಿಡಿಸಿ ದಂತಹ ಪೈಶಾಚಿಕ ಕೃತ್ಯದಂತಹ ದೌರ್ಜನ್ಯವನ್ನು ರೈತರ ಮೇಲೆ ಎಸಗಿರುವುದನ್ನು ಖಂಡಿಸಿ ಹಾಗೂ ಸಮಸ್ತ ರೈತರ ಬೇಡಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಖಂಡಿಸುತ್ತದೆ ಹಾಗೂ ಶುಕ್ರವಾರ ಬೆಳಿಗ್ಗೆ ಹತ್ತು ಘಂಟೆ ಮೂವತ್ತು ನಿಮಿಷಕ್ಕೆ ಹನೂರು ಪಟ್ಟಣದಲ್ಲಿ ರೈತಸಂಘವು ಕೇಂದ್ರ ಸರ್ಕಾರ ವಿರೋಧವಾಗಿ ರಸ್ತೆ ತಡೆ ಚಳುವಳಿಯನ್ನು ಹಮ್ಮಿಕೊಂಡಿರುವುದರಿಂದ ಎಲ್ಲಾ ರೈತರು ಆಗಮಿಸಬೇಕಾಗಿ ಕರ್ನಾಟಕ ರಾಜ್ಯ ರೈತ ಸಂಘದ ಚಾಮರಾಜನಗರ ಜಿಲ್ಲೆಯ ಉಪಾಧ್ಯಕ್ಷರಾದ ಗೌಡೆಗೌಡ ತಿಳಿಸಿದರು .