Breaking News

ನಾಲ್ಕು ದಿನಗಳ ಕಾಲ ಶ್ರೀ ಅಂಬಾಭವಾನಿ ದೇವಿಜಾತ್ರಾಮಹೋತ್ಸವ

Sri Ambabhavani Devi Jatra Mahotsav for four days

ಜಾಹೀರಾತು

ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಆರಾದ್ಯ ದೈವ ಶ್ರೀ ಅಂಬಾಭವಾನಿ ದೇವಿ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಫೆ 16 ರಿಂದ ಫೆ 19 ರವರೆಗೆ ನಡೆಯಲಿದೆ.

ಶುಕ್ರವಾರ ಫೆ 16 ರಂದು ಸಾವಳಗಿ ಪೋಲಿಸ್ ಠಾಣೆ ಇವರ ವತಿಯಿಂದ ಹೋಮ ಹವನ ದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭಗೊಳ್ಳಲಿದೆ, ರಾತ್ರಿ 8 ಗಂಟೆಗೆ ಗೋಂಧಳಿ ಕಾರ್ಯಕ್ರಮ ಮತ್ತು ಭಜನಾ ಕಾರ್ಯಕ್ರಮ ನಡೆಯಲಿವೆ.

ಶನಿವಾರ ಫೆ 17 ರಂದು ಹೋಮಹವನ ಗಳೊಂದಿಗೆ ಮಂಗಳಾರತಿ ಕಾರ್ಯಕ್ರಮ ರಾತ್ರಿ 8 ಗಂಟೆಗೆ ಗೋಂಧಳಿ ಕಾರ್ಯಕ್ರಮ ನಡೆಯಲಿವೆ.

ರವಿವಾರ ಫೆ 18 ರಂದು ಬೆಳಿಗ್ಗೆ 9.00 ಗಂಟೆಗೆ ಸಕಲ ಜನಪದ ವಾದ್ಯ ಮೇಳಗಳೊಂದಿಗೆ ಕುಂಭಮೇಳ ಮಹೋತ್ಸವ ಕಾರ್ಯಕ್ರಮ ಜರುಗಲಿದೆ ರಾತ್ರಿ 8 ಗಂಟೆಗೆ ಗೋಂಧಳಿ ಕಾರ್ಯಕ್ರಮ ನಡೆಯಲಿವೆ.

ಸೋಮವಾರ ಫೆ 19 ರಂದು ಬೆಳಗ್ಗೆ 10 ಗಂಟೆಗೆ ಧರ್ಮಸಭೆ ಮತ್ತು ಒಂದು ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬ ಕಾರ್ಯಕ್ರಮ ಇದೆ ಎಲ್ಲರೂ ಬರಬೇಕು ಹಾಗೇಯೇ ಈ ನಾಲ್ಕು ದಿನಗಳ ಕಾಲ ಜಾತ್ರೆ ಅತಿ ಸರಳವಾಗಿ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಜಾತ್ರಾ ಕಮಿಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

ಸತ್ತೇಗಾಲ: ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮ

Sattegala: Kannada Month Festival 2024′ programme ಕೊಳ್ಳೇಗಾಲ, ನ.೨೨:ಕನ್ನಡದ ಯುಗಪ್ರವರ್ತಕ ಬಿಎಂ ಶ್ರೀಕಂಠಯ್ಯನವರು’ ಎಂದು ದೊಡ್ಡಿಂದುವಾಡಿ ಸರ್ಕಾರಿ ಶಾಲೆಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.