Koppal District Vishwakarma Samaj Board of Directors Election: Rudrappa Badigera faction wins big

ಕೊಪ್ಪಳ : ತೀವ್ರ ಕುತೂಹಲ ಕೆರಳಿಸಿದ್ದ
ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ರುದ್ರಪ್ಪ ಬಡಿಗೇರ ಅವರ ಬಣಕ್ಕೆ ಭರ್ಜರಿ ಜಯವಾಗಿದೆ.
ಇಲ್ಲಿನ ಶಾಸಕರ ಮಾದರಿ ಶಾಲಾ ಆವರಣದಲ್ಲಿ ರವಿವಾರ ನಡೆದ ಜಿಲ್ಲಾ ವಿಶ್ವಕರ್ಮ ಸಮಾಜದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಡೆದು ರುದ್ರಪ್ಪ ಬಡಿಗೇರ ಅವರ ಬಣಕ್ಕೆ ಭರ್ಜರಿ ಜಯವಾಗಿದೆ.
ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ರವಿವಾರ ಬೆಳಿಗ್ಗೆ ೯ ಗಂಟೆಯಿಂದ ೪ ಗಂಟೆಯವರೆಗೆ ನಡೆಯಿತು. ೧೦೪ ಮತದಾರರಲ್ಲಿ ೧೦೩ ಮತದಾರರು ಮತಗಳನ್ನು ಚಲಾಯಿಸಿದರು. ಒಟ್ಟು ೨೦ ಅಭ್ಯರ್ಥಿಗಳಲ್ಲಿ ರುದ್ರಪ್ಪ ಬಡಿಗೇರ ಅವರ ಬಣದ ೧೧ ಅಭ್ಯರ್ಥಿಗಳನ್ನು ಜಯಶಾಲಿಯಾಗಿ ಮಾಡಲಾಯಿತು. ಇನ್ನೊಂದು ಬಣದಲ್ಲಿ ೯ ಜನ ಇದ್ದು ಕೇವಲ ೨ ಅಭ್ಯರ್ಥಿಗಳು ಜಯಗಳಿಸಿದರು.
ಜಯಶಾಲಿಯಾದವರು (ರುದ್ರಪ್ಪ ಬಣದ) ಮತ್ತು ಪಡೆದ ಮತಗಳು: ಅಂಬ್ರೇಶ್ ಕೆ.ವಿಶ್ವಕರ್ಮ (೭೪), ಈಶಪ್ಪ ಈ.ಬಡಿಗೇರ (೬೯), ಎ.ಪ್ರಕಾಶ (೭೬), ಕಾಳಪ್ಪ ಬಡಿಗೇರ ಕಾರಟಗಿ (೭೨), ದೇವೇಂದ್ರಪ್ಪ ವೈ.ಬಡಿಗೇರ (೭೬) ನಾಗೇಶಕುಮಾರ ಎಂ.ಕಂಸಾಲಿ (೭೨), ಬಸವರಾಜ ಎಸ್.ಕೊಡೆಕಲ್ (೭೨), ಮಂಜುನಾಥ ಎಸ್.ಪತ್ತಾರ ಗಂಗಾವತಿ (೭೩), ಯಮನೂರಪ್ಪ ಎಂ.ಬಡಿಗೇರ, (೬೭), ರಾಮಚಂದ್ರಪ್ಪ ಜಿ.ಬಡಿಗೇರ (೭೪), ವಿರೇಶ ಪತ್ತಾರ ಕಾರಟಗಿ (೭೪).
ಇನ್ನೊಂದು ಬಣದಲ್ಲಿ ಮಹದೇವಪ್ಪ ಕಮ್ಮಾರ (೫೧) ಹಾಗೂ ದೇವೇಂದ್ರಪ್ಪಾ ದೊಡ್ಡಬಸಪ್ಪ ಬಡಿಗೇರ್ (೪೩) ಜಯಗಳಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ
ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.