Samagara Haralaiya Jayantyutsava

ಗಂಗಾವತಿ: ಸಮಗಾರ ಹರಳಯ್ಯ ಶ್ರಮಿಕ ವರ್ಗದ ಸಂಕೇತವಾಗಿದ್ದು ಹರಳಯ್ಯನವರಂತೆ ಕಾಯಕ ನಿಷ್ಠೆಯಿಂದ ಕಾಯಕ ಮತ್ತು ದಾಸೋಹ ತತ್ವ ಪಾಲನೆ ಮಾಡುವಂತೆ ಆದರ್ಶ ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ ಹೇಳಿದರು.
ಅವರು ನಗರದ ಸಮಗಾರ ಓಣಿಯಲ್ಲಿ ಸಮಗಾರ ಹರಳಯ್ಯ ಜಯಂತ್ಯುತ್ಸವದ ನಿಮಿತ್ತ ಹರಳಯ್ಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.
ಎಸ್ಸಿ, ಎಸ್ಟಿ ಹಿಂದುಳಿದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಮುಖ್ಯವಾಹಿನಿಗೆ ಬರಲು ನೆರವಾಗಬೇಕು. ದುಶ್ಚಟಗಳಿಂದ ಸರ್ವನಾಶವಾಗುತ್ತದೆ. ದುಶ್ಚಟಗಳನ್ನು ಬಿಟ್ಟು ಕಾಯಕ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಆರ್‌ಪಿ ಪಾರ್ಟಿ ಜುಬೇರ್, ಬಾಷಾ, ಹುಲಿಗೇಶ, ಮಹಾದೇವ , ಬಾಬು, ಹುಚ್ಚಮ್ಮ, ಶಿವಪ್ಪ ಸೇರಿ ಸಮಗಾರ ಸಮಾಜದವರಿದ್ದರು.
Kalyanasiri Kannada News Live 24×7 | News Karnataka
