Inauguration of Karnataka State Farmers Association village unit in Ericadu village.

ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ತಾಲೂಕಿನ ಮಾರ್ಟಳ್ಳಿ ಗ್ರಾ. ಪಂ ವ್ಯಾಪ್ತಿಯ ಏರಿಕಾಡು ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘ ಘಟಕವನ್ನು ರೈತ ಮುಖಂಡರ ನೇತೃತ್ವದಲ್ಲಿ ಉದ್ಘಾಟನೆ ಮಾಡಲಾಯಿತು.
ಗ್ರಾಮ ಘಟಕ ಉದ್ಘಾಟಿಸಿ
ನಂತರ ಮಾತನಾಡಿದ ಜಿಲ್ಲಾ ಘಟಕದ ಉಪಾಧ್ಯಕ್ಷ ಗೌಡೇಗೌಡರು ಏರಿಕಾಡು ರೈತ ಸಂಘ ಉದ್ಘಾಟನೆ ಆಗಿರುವುದು ಸಂತೋಷದ ವಿಷಯ. ಇಲ್ಲಿನ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗಿದೆ. ಸರಿಯಾದ ವ್ಯಕ್ತಿಯನ್ನ ಗೆಲ್ಲಿಸಿದರೆ ಈ ಗ್ರಾಮಗಳು ಅಭಿವೃದ್ಧಿ ಕಾಣುತ್ತಿದ್ದವು, ಮತದಾನ ಮಾಡುವ ಸಂದರ್ಭದಲ್ಲಿ ಸರಿಯಾಗಿ ಯೋಚಿಸಿ ಮತದಾನ ಮಾಡಿದರೆ ಅಭಿವೃದ್ಧಿಯಲ್ಲಿ ಮುಂದೆ ಸಾಗುತ್ತೆವೆ .ನಮ್ಮಲಿ ಗೆದ್ದಂತ ವ್ಯಕ್ತಿಯನ್ನು ನಮ್ಮ ಗ್ರಾಮಗಳ ಅಭಿವೃದ್ಧಿ ಮಾಡಿಲ್ಲ ಎಂದು ಕೇಳುವ ಶಕ್ತಿ ನಿಮ್ಮಲ್ಲಿದೆ. ನಾವು ಬದಲಾವಣೆಯಾದರೆ ಮಾತ್ರ ಗೆದ್ದಂತ ವ್ಯಕ್ತಿಗಳು ಅಭಿವೃದ್ಧಿ ಕಡೆ ಗಮನ ಹರಿಸುತ್ತಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ಬೇಡ, ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿ ಎಂದು ಹೇಳಿದ್ದೀರಾ . ಕೇಂದ್ರ ಸರ್ಕಾರ ಬಂಡವಾಳ ಶಾಹಿ ಪರವಾಗಿ 7 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುತ್ತದೆ. ಆದರೆ ರೈತರು ಬೆಳೆದಂತಹ ಬೆಳೆಗೆ ಸರಿಯಾದ ರೀತಿಯಲ್ಲಿ ಬೆಲೆ ಸಿಗದೇ ಕಂಗಲಾಗಿದ್ದಾರೆ, ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರು ಬೆಳೆದ ಬೆಳಗೆ ಬೆಂಬಲ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ
ನೂತದ ಘಟಕದ ಗೌರವಧ್ಯಕ್ಷ ದ್ರಾವಿಡ್ , ಅಧ್ಯಕ್ಷ ಡೇವಿಡ್ ಅಂತೋನಿ , ಉಪಾಧ್ಯಕ್ಷ ಮರಿಯಾ ಜೋಸೆಫ್, ಕಾರ್ಯದರ್ಶಿ ಅರುಣ್ ಕುಮಾರ್ ಹಾಗೂ 20 ಕ್ಕೂ ಹೆಚ್ಚು ರೈತ ಮುಖಂಡರು ಹಸಿರು ಶಾಲು ಪಡೆದು ಸದಸ್ಯರಾಗಿ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಹನೂರು ತಾಲೂಕು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್, ಸಂಘಸ್ಟ ಕಾರ್ಯದರ್ಶಿ ಬಸವರಾಜ್ ಕೊಳ್ಳೇಗಾಲ ತಾಲೂಕು ಘಟಕದ ಅಧ್ಯಕ್ಷ ಶಿವಮಲ್ಲು, ಹನೂರು ತಾಲೂಕು ಗೌರವಾಧ್ಯಕ್ಷ ರಾಜೇಂದ್ರ, ಮಾರ್ಟಳ್ಳಿ ಗ್ರಾಮ ಘಟಕದ ಗೌರವಾಧ್ಯಕ್ಷ ಅರ್ಪುದರಾಜ್, ಕಾಶಿ ಗೌಡ, ಪುಟ್ಟಣ್ಣ, ರಾಜ್,ನಾಗರಾಜು,ಜೋಸೆಫ್, ಹಾಗೂ ವಿವಿಧ ಗ್ರಾಮ ಘಟಕದ ಪದಾಧಿಕಾರಿಗಳು, ರೈತ ಮುಖಂಡರು ಹಾಜರಿದ್ದರು.
ರೈತರ ಸಮಸ್ಯೆಗಳು :-
ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ.
ಮಾರ್ಗದಲ್ಲಿ ಅಂತೋನಿಯರ್ ಕೋವಿಲ್, ವಡ್ಡರದೊಡ್ಡಿ, ವೆಟ್ಟು ಕಾಡು ಗ್ರಾಮಗಳಿಗೆ ಸರಿಯಾದ ಸಂಪರ್ಕಕಲ್ಪಿಸುವ ರಸ್ತೆ ಇಲ್ಲ.
ದಂಟಳ್ಳಿ ಮಾರ್ಗವಾಗಿ ಕಾವೇರಿ ನದಿಯಿಂದ ಏತವರಿ ನೀರಿನನ್ನ ವ್ಯವಸಾಯಕ್ಕೆ ಕಲ್ಪಿಸಿ ಕೊಡಬೇಕು.
ನಮ್ಮ ಗ್ರಾಮಕ್ಕೆ ಹಾಲಿನ ಡೈರಿ ಅವಶ್ಯಕತೆ ಇದೆ.
ಪಡಿತರ ವಿತರಣೆಗಾಗಿ ನ್ಯಾಯಬೆಲೆ ಅಂಗಡಿ ಒದಗಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.