First Year Celebration of Tipatur Health Centers
ತಿಪಟೂರು, ತಾಲ್ಲೂಕಿನ ಗ್ರಾಮೀಣ ಸಮುದಾಯದ ಮಹಿಳೆಯರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ನಿಟ್ಟಿನಲ್ಲಿ ತನ್ನದೇ ಆದ ವಿಶಿಷ್ಟತೆ ಹೊಂದಿರುವ ನಮ್ಮ ಆರೋಗ್ಯ ಕೇಂದ್ರ ಫೆಬ್ರವರಿ 4 ರಂದು ತನ್ನ ಪ್ರಥಮ ವರ್ಷಾಚರಣೆ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ವಿಶೇಷ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ತಾಲ್ಲೂಕಿನ ಕೆ.ಬಿ.ಕ್ರಾಸ್ ಮತ್ತು ಹಾಲ್ಕುರಿಕೆ ಗ್ರಾಮಗಳಲ್ಲಿ ಡಾ.ಹೇಮಾ ದಿವಾಕರ್ ಹಾಗೂ ನುರಿತ ವೈದ್ಯರುಗಳ ನೇತೃತ್ವದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಡೆದ ಈ ಆರೋಗ್ಯ ಶಿಬಿರದಲ್ಲಿ ಹೆಚ್ಚಾಗಿ ಮಹಿಳೆಯರು ಅಗತ್ಯ ವೈದ್ಯಕೀಯ ಸೇವೆ ಮತ್ತು ಸಮಾಲೋಚನೆ ಪಡೆದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಮ್ಮ ಆರೋಗ್ಯ ಕೇಂದ್ರದ ಸಂಸ್ಥಾಪಕ ಹಾಗೂ ಕಾಂಗ್ರೆಸ್ ಮುಖಂಡರ C B ಶಶಿಧರ್
ಗ್ರಾಮೀಣ ಸಮುದಾಯದ ಮೇಲೆ ಈ ಶಿಬಿರವು ಪರಿಣಾಮಕಾರಿಯಾಗಿ ಪ್ರಭಾವ ಬೀರಿದೆ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವುದು ನಮ್ಮ ಸಂಸ್ಥೆಯ ಸೇವಾಪರತೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ, ನಮ್ಮ ಆರೋಗ್ಯ ಕೇಂದ್ರದ ಪ್ರಥಮ ವರ್ಷಾಚರಣೆಗೆ ನನಗೆ ಬಹಳ ಹೆಮ್ಮೆಯಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಮ್ಮ ಆರೋಗ್ಯ ಕೇಂದ್ರದ CEO ಹಾಗೂ ವ್ಯವಸ್ಥಾಪಕರಾಗಿರುವ ಶ್ರೀಮತಿ ಡಾ.ಹೇಮಾ ದಿವಾಕರ್ ಗ್ರಾಮೀಣ ಸಮುದಾಯಕ್ಕೆ ಆರೋಗ್ಯ ಸೇವೆಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ದೊರಕುತ್ತಿರುವುದು ನಮ್ಮ ಆರೋಗ್ಯ ಸಖಿಯರ ಸೇವಾ ಮತ್ತು ಸಮರ್ಪಣಾ ಮನೋಭಾವದಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಸಹ ಸಂಸ್ಥಾಪಕ ಎಂ.ಜೆ ಶ್ರೀಕಾಂತ್ ಮಾತನಾಡಿ ಗ್ರಾಮ ಸಮುದಾಯದ ಹೆಚ್ಚಿನ ಬೆಂಬಲ ಸಿಗುತ್ತಿರವುದಕ್ಕೆ ನಾನು ಎಂದಿಗೂ ಆಭಾರಿಯಾಗಿದ್ದೇನೆ, ನಮ್ಮ ಗ್ರಾಮೀಣ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದೇ ನಮ್ಮ ಮುಂದಿನ ಗುರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅರೋಗ್ಯ ಸಖಿ ಯರು ಕಾರ್ಯಕರ್ತರು ಹಾಜರಿದ್ದರು.