Basapatna: Coordinating Gram Sabha of the Handicapped
ಗಂಗಾವತಿ: ವಿಕಲಚೇತನರಿಗೆ ಅನುಕೂಲಕ್ಕಾಗಿ ಸರಕಾರದ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದು, ಯೋಜನೆ ಸದುಪಯೋಗ ಪಡೆದಕೊಳ್ಳಿ ಎಂದು ಗ್ರಾ.ಪಂ ಅಧ್ಯಕ್ಷ ಆಂಜನೇಯ ಹೇಳಿದರು.
ತಾಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಕಲಚೇತನರಿಗೆ ಸರಕಾರದಿಂದ ಸಾಲ ಸೌಲಭ್ಯ, ಸಲರಣೆ ವಿತರಣೆ, ಬೈಕ್ ವಿತರಣೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇದರ ಉಪಯೋಗವನ್ನು ಪಡೆದು ಸ್ವಾಲಂಬಿ ಜೀವನ ನಡೆಸಲು ಮುಂದಾಗಬೇಕು. ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ಮಾಡಲು ಅನುಕೂಲ ಕಲ್ಪಿಸಿದ್ದು, ಇನ್ನೂ ಯಾರ ಯಾರ್ ಕಾರ್ಡ್ಗಳನ್ನು ಪಡೆದಿಲ್ಲ ಅವರಿಗೆ ವಿತರಣೆ ಮಾಡಲು ಮುಂದಾಗಬೇಕು. ಹಾಗೂ ಸರಕಾರದ ಸೌಲಭ್ಯಗಳನ್ನು ವಿಕಲಚೇತನರಿಗೆ ದೊರೆಕಿಸಿ ಕೊಡುವಲ್ಲಿ ಎಲ್ಲರೂ ಸಹಕರಿಸಬೇಕು ಎಂದರು. ನಂತರ ವಿಕಲಚೇತನರಿಗೆ ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು.
ಈ ವೇಳೆ ಅಭಿವೃದ್ಧಿ ಅಧಿಕಾರಿ ವಿದ್ಯಾವತಿ, ಎಂ.ಆರ್.ಡಬ್ಲೂö್ಯ, ಮಂಜುಳಾ ಪುರಾಣಿಕ್, ವಿಕಲಚೇತನರ ಪಾಲಕರ ಒಕ್ಕೂಟದ ತಾಲೂಕಾ ಅಧ್ಯಕ್ಷ ಬಸವರಾಜ ಗೋನಾಳ, ಬಸಾಪಟ್ಟಣ ವಿ.ಆರ್.ಡಬ್ಲೂö್ಯ ಭಾಷಾ, ಗ್ರಾಮ ಪಂಚಾಯತಿ ಸದಸ್ಯರಾದ ಕನಕಪ್ಪ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.