State Level Kayak Yogi Awarded to Karnataka Competitive Training Centre: Praveena Naika
ಬೆಳಗಾವಿ ನಗರದ ಕರ್ನಾಟಕ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಶೈಲ ತಲ್ಲೂರ ಅವರ 37 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ
ಶ್ರೀ ಸ್ವಾಮಿ ವಿವೇಕಾನಂದ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆ ವತಿಯಿಂದ ರಾಜ್ಯಮಟ್ಟದ ಕಾಯಕ ಯೋಗಿ ಪ್ರಶಸ್ತಿಯನ್ನು ಶ್ರೀಶೈಲ ತಾಲ್ಲೂರ ಹಾಗೂ ವಿನಯ ಲಾಸೆ ಅವರಿಗೆ ನೀಡಿ ಗೌರವಿಸಿದರು
ಶ್ರೀ ಸ್ವಾಮಿ ವಿವೇಕಾನಂದ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆ ಅಧ್ಯಕ್ಷರಾದ ಪ್ರವೀಣ ನಾಯಿಕ ಮಾತನಾಡಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ಮದ್ಯ ಏನಾದರು ಮಾಡಿ ಒಳ್ಳೆಯ ಸಾಧನೆ ಮಾಡಿ.
ಮಠಾಧಿಶರು ಮಾತ್ರ ಗುರು ಅಲ್ಲ ಒಬ್ಬ ವ್ಯಕ್ತಿಯನ್ನು ಒಳ್ಳೆಯ ಮಟ್ಟಕ್ಕೆ ಬೆಳೆಸಿ ಗುರಿಮುಟ್ಟಿಸುವನೆ ನಿಜವಾದ ಗುರು.
ಗುರು ಅನ್ನುವ ಪದ ವ್ಯಕ್ತಿ ಅಲ್ಲ ಒಂದು ಶಕ್ತಿ ಎಂದು ಮಾತನಾಡಿದರು ಕೆ ಸಿ ಸಿ ಸಂಸ್ಥೆ ಜಿಲ್ಲೆಯ ಎಲ್ಲ ಕಡೆ ಒಳ್ಳೆಯ ಹೆಸರು ಪಡೆದೆದಿ ಸಂಸ್ಥೆ ಪ್ರಶಸ್ತಿ ಹಿಂದೆ ಬಂದಿಲ್ಲ ಪ್ರಶಸ್ತಿ ಸಂಸ್ಥೆಯನ್ನು ಹುಡಿಕಿಕೊಂಡು ಬಂದಿದೆ ಅದರಿಂದ ಆಯ್ಕೆ ಮಾಡಿ ನಮ್ಮ ಸಂಸ್ಥೆ ವತಿಯಿಂದ ರಾಜ್ಯಮಟ್ಟದ ಕಾಯಕ ಯೋಗಿ ಪ್ರಶಸ್ತಿ ನೀಡಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಶಿಕ್ಷಕರಾದ ಜಿನೇಂದ್ರ ಪಾಟೀಲ ಆಗಮಿಸಿ ಇವತ್ತಿನ ಜಗತ್ತು ಸ್ಪರ್ಧಾತ್ಮಕ ಯುಗ ಇದೆ ವಿದ್ಯಾರ್ಥಿಗಳು ಗುರುಗಳು ಹೇಳಿದ ಪ್ರತಿಯೊಂದು ವಿಷಯವನ್ನು ತಿಳಿದುಕೊಂಡು ಒಳ್ಳೆಯ ಸ್ಥಾನಮಾನ ಪಡೆದು ಸಂಸ್ಥೆಗೆ ಹೆಸರನ್ನು ತರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆನಂದ ತಾಲ್ಲೂರ, ರೂಪೇಶ ದಳವಿ, ನಾಗರಾಜ್ ಮಜ್ಜಗಿ, ಸಿಂಗಾಡಿ ಪೂಜಾರಿ, ಮಹಾಲಿಂಗರಾಯ ರಾಯಚೂರು, ರೇಖಾ ಪಾಟೀಲ, ಗುರು ಹಿರೇಮಠ, ಸಂತೋಷ ಮಾದರಿ, ಮೋಹನ ದಲ್ಲಾಳಿ, ಕಲ್ಪನಾ, ರಾಮನಿಂಗ ಹಾಗೂ ಎಲ್ಲಾ ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.