Poor drinking water supply to people in Astur village Corruption in clean water works: AAP leader Harish alleges.
ಹನೂರು :ಪ್ರತಿ ಹಳ್ಳಿಯ ಕಟ್ಟಕಡೆಯ ಮನೆಗೂ ಶುದ್ದಜಲ ತಲುಪಿಸಬೇಕೆಂಬ ಆಶಯದೋಂದಿಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಯವರ ಕನಸಿನ ಯೋಜನೆಗಳಲ್ಲೋಂದಾದ ಮನೆ ಮನೆಗೆ ಶುದ್ದ ಗಂಗೆ ಯೋಜನೆಗೆ ಕಾಮಗಾರಿಗಳು ನಡೆಯುತ್ತಿದ್ದು , ಹನೂರು ತಾಲ್ಲೋಕಿನಾದ್ಯಂತ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಭೀತಾದಂತೆ ಕಾಣುತ್ತಿದೆ ಅಲ್ಲದೆ ಸಣ್ಣ ಉದಾಹರಣೆ ಎಂದರೆ ತಾಲ್ಲೂಕು ಸಮೀಪದ ಕಾಡಂಚಿನ ಗ್ರಾಮವಾದ ಪೊನ್ನಾಚಿ ಪಂಚಾಯತಿಯ ಅಸ್ತೂರು ಗ್ರಾಮದಲ್ಲಿ ಇತ್ತೀಚೆಗೆ ಕೆಲವೇ ದಿನಗಳಲ್ಲಿ ಶುದ್ದಜಲ ನೀಡುವ ಕಾಮಗಾರಿ ಪ್ರಾರಂಭಿಸಿ ತರಾತುರಿಯಲ್ಲಿ ಮುಗಿಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಎ ಎಪಿ ಮುಖಂಡರಾದ ಹರೀಶ್ ತಿಳಿಸಿದರು .
ಹನೂರು ಪಟ್ಟಣದಲ್ಲಿ ಮಾತನಾಡಿದ ಅವರು ಅಸ್ತೂರು ಗ್ರಾಮವೊಂದಕ್ಕೆ ಶುದ್ದಜಲ ನೀಡುವ ಸಲುವಾಗಿ ಅಂದಾಜು ಮೋತ್ತ ೯೯ಲಕ್ಷದ ಅರವತ್ತು ಸಾವಿರ ರೂಗಳು ಆದರೆ ಇಲ್ಲಿ ಖರ್ಚಾಗಿರುವ ಹಣ ಮಾತ್ರ ಅಂದಾಜು ವೆಚ್ಚ ಕೇವಲ ಇಪ್ಪತ್ತರಿಂದ ಇಪ್ಪತೈದು ಲಕ್ಷ ರೂಗಳು ಮಾತ್ರ ಇದರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಮೆಲ್ನೋಟಕ್ಕೆ ಕಾಣುತ್ತದೆ ,ಇದರ ಪರವಾಗಿ ಗ್ರಾಮಸ್ಥರ ಜೊತೆಗೂಡಿ ,ಎ ಎ ಪಿ ಪಕ್ಷವು ಧ್ವನಿ ಎತ್ತಿದ್ದು, ಕಾಮಗಾರಿಯನ್ನು ೯೯ ಲಕ್ಷಕ್ಕೆ ಎಸ್ಟಿಮೆಟ್ ಮಾಡಿದ ಕಂಪನಿಯು ಅಧಿಕಾರಿಗಳು ಹಾಗೂ ಕೆಲವು ಜನಪ್ರತಿನಿಧಿಗಳ ಜೊತೆಯಲ್ಲಿ ಶಾಮಿಲಾಗಿ ಕಳಪೆ ಗುಣಮಟ್ಟದ ಪೈಪುಗಳು ,ಅಲ್ಪ ಪ್ರಮಾಣದ ಸಿಮೆಂಟ್ ,ಮರಳಿನ ಜೊತೆಯಲ್ಲಿ ಮಣ್ಣನ್ನು ಸೇರಿಸಿಕೊಂಡು ಕಾಮಗಾರಿ ಮಾಡಲಾಗಿದೆ ಅಲ್ಲದೆ ಕಾಮಗಾರಿ ಸ್ಥಳದಲ್ಲೇ ನಾಮ ಪಲಕ ಅಳವಡಿಸಿಲ್ಲ , ಎಸ್ಟಿಮೆಟ್ ನಂತೆ ಕಾಮಗಾರಿ ನಡೆದಿಲ್ಲ ಯಾರು ಕೆಳುವವರಿಲ್ಲ ಎಂಬಂತೆ ಕೆವಲ ಕಣ್ಣೊರೆಸುವ ತಂತ್ರ ಅನುಸರಿಸಿ ಕಳಪೆ ಕಾಮಗಾರಿ ಮಾಡಲಾಗಿದೆ , ಸರ್ಕಾರದ ಹಣವನ್ನು ಪೊಲಾಗಲು ಸಹಾಯ ಮಾಡಿದವರಿಗೆ ಕಾನೂನು ಪ್ರಕಾರ ದೂರು ದಾಖಲು ಮಾಡಿ ಶಿಕ್ಷೆಗೆ ಒಳಪಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹರೀಶ್ ರವರು ಆಗ್ರಹ ಮಾಡಿದ್ದಾರೆ.
ಹನೂರು ಕ್ಷೇತ್ರದ ಕೊಳ್ಳೇಗಾಲ ವ್ಯಾಪ್ತಿಯ ಪ್ರದೇಶಗಳಿಗೆ ಚುನಾಯಿತರಾದ ನಂತರ ಬೇಟಿ ನೀಡದ ಹನೂರು ಶಾಸಕರು ನಮ್ಮ ಕ್ಷೇತ್ರದಲ್ಲಿ ಅವರ ಕೆಲವು ಬೆಂಬಲಿಗರು ಚುನಾಯಿತರಾಗಿರುವ ಗ್ರಾಮಗಳಲ್ಲಿಯು ಇಂತಹ ಅನೇಕ ಕಳಪೆ ಕಾಮಗಾರಿ ನಡೆದರು ಚಕಾರವೆತ್ತದೆ ಅವರಿಗೆ ಸಹಕಾರ ನೀಡುತ್ತಿರುವುದು ಬೇಸರದ ಸಂಗಾತಿಯಾಗಿದೆ , ಈ ಕೂಡಲೆ ಸಂಬಂದಿಸಿದ ಅಧಿಕಾರಿಗಳು ಕ್ರಮಜರುಗಿಸಬೇಕು ಎಂದು ಆಗ್ರಹಿಸಿದರು .