We will not do the work of laying siege in front of the Chief Minister’s house – Cauvery Action Struggle Committee
ಮೈಸೂರು , ಹಿರಿಯ ರಾಜಕಾರಣಿಗಳು ಎರಡನೇ ಬಾರಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಕಾವೇರಿ ನೀರಿನ ವಿಷಯದಲ್ಲಿ ಕಾವೇರಿ ಕ್ರಿಯಾ ಸಮಿತಿಯು ನಡೆಸುತ್ತಿರುವ ಹೋರಾಟವನ್ನು ಮಾಧ್ಯಮಗಳಲ್ಲಿ ನೋಡಿರುತ್ತಾರೆ, ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ರಾಜಕೀಯ ಇಚ್ಛಾ ಶಕ್ತಿ ಇದ್ದರೆ ಅವರೇ ಧರಣಿ ನಿರತರನ್ನು ಭೇಟಿ ಮಾಡುತ್ತಾರೆ ಹಾಗಾಗಿ ಅವರ ಮನೆಗೆ ಮುತ್ತಿಗೆ ಹಾಕುವ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಸಭೆಯನ್ನು ಉದ್ದೇಶಿಸಿ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್. ಜಯಪ್ರಕಾಶ್ (ಜೆಪಿ )ಮಾತನಾಡುತ್ತಾ ತಿಳಿಸಿದರು.
79 ದಿನವಾದ ಇಂದು ಸಹ ಕಾವೇರಿ ನ್ಯಾಯ ಮಂಡಳಿ ವಿರುದ್ಧ ಶಾಂತಿಯುತ ಧರಣಿ ಸತ್ಯಾಗ್ರಹವನ್ನು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರಾದ ಎಸ್. ಜಯ ಪ್ರಕಾಶ್ ರವರ ನೇತೃತ್ವದಲ್ಲಿ ನಡೆಯಿತು .ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಕನ್ನಡ ಹೋರಾಟಗಾರರು ಸ ರ ಸುದರ್ಶನ್ ರವರು ಮುಖ್ಯಮಂತ್ರಿಗಳು ಕಾವೇರಿ ಧರಣಿಯನ್ನು ಕಡೆಗಣಿಸಿರುವುದನ್ನು ಖಂಡಿಸಿದರು ಕದಂಬ ಸೈನ್ಯದ ಸಹ ಕಾರ್ಯದರ್ಶಿ ಕುಮಾರ್ ಬಸಪ್ಪ ಮಾತನಾಡಿ ಕಾವೇರಿ ಕ್ರಿಯಾ ಸಮಿತಿಯಿಂದ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಬೇಕೆಂದು ಆಗ್ರಹಿಸಿದರು. ಇಂದಿನ ಪ್ರತಿಭಟನೆಯಲ್ಲಿ ಕಾವೇರಿ ಕ್ರಿಯಾ ಸಮಿತಿ ಪ್ರಧಾನ ಸಂಚಾಲಕರಾದ ಮೂಗು ನಂಜುಂಡಸ್ವಾಮಿ, ಗೌರವ ಕಾರ್ಯದರ್ಶಿ ಮೆಲ್ಲಳ್ಳಿ ಮಹದೇವಸ್ವಾಮಿ, ಉಪಾಧ್ಯಕ್ಷರಾದ ಎಂ .ಜೆ ಸುರೇಶ್ ಗೌಡ ಹಿರಿಯ ಕನ್ನಡ ಹೋರಾಟಗಾರರಾದ ಸ ರ ಸುದರ್ಶನ್, ಬೋಗಾದಿ ಸಿದ್ದೇಗೌಡರು, ರೈತ ಹೋರಾಟಗಾರರಾದ ವರ ಕೊಡು ಕೃಷ್ಣೆಗೌಡ್ರು ,ಸಿಂಧುವಳ್ಳಿ ಶಿವಕುಮಾರ್, ಗಾಣಿಗನಕೊಪ್ಪಲು ನಾಗರಾಜು, ಮೇಗಳ ಕೊಪ್ಪಲು ಯಾಲಕ್ಕಿ ರಂಗಸ್ವಾಮಿ, ಗೊರವನಳ್ಳಿ ರಾಜಗೋಪಾಲ್ ,ಬಿದರಹಳ್ಳಿ ಹುಂಡಿ ನಾಗಣ್ಣ, ದೇಬೂರು ರವಿಶಂಕರ್, ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷರಾದ ತೇಜಸ್ ಲೋಕೇಶ್ ಗೌಡ ಮುಖಂಡರಾದ ಕೃಷ್ಣಪ್ಪ, ಪ್ರಭಾಕರ್ ಕದಂಬ ಸೇನೆಯ ಕುಮಾರ್ ಬಸಪ್ಪ, ಎಂ ಬಿ ಮಹಾದೇವ ಮೂರ್ತಿ ಲಿಂಗಯ್ಯ ಕಾವೇರಿ ಸಮಿತಿ ಹೋರಾಟಗಾರರಾದ ಶ್ರೀಮತಿ ಕೆ ಮಂಜುಳಾ, ಬಿಳಿಕೆರೆ ಭಾಗ್ಯಮ್ಮ, ಭೈರಪ್ಪ, ಆಟೋ ಮಹಾದೇವ ,ಪೈಲ್ವಾನ್ ಬಾಲಾಜಿ ,ಪೈಲ್ವಾನ್ ಬಲರಾಮ್, ಲಕ್ಕನ್ ನಾಯಕ್ ,ಭಾನುಪ್ರಕಾಶ್, ಹನುಮಂತೇಗೌಡ ,ಸಾಕಣ್ಣ,ಉದ್ಬೂರು ಸೋಮಶೇಖರ್, ವೆಂಕಟೇಶ್ ಗೌಡ, ಪ್ರಮೋದ್, ಕೆ .ಮಹೇಶ್ ,ಅಶೋಕ, ಕರ್ನಾಟಕ ಜನಪರ ವೇದಿಕೆಯ ಗೌರವಾಧ್ಯಕ್ಷರಾದ ಹೊನ್ನೇಗೌಡ, ಡಾ. ರಾಜಕುಮಾರ್ ಸಂಘದ ಮಹಾದೇವ ಸ್ವಾಮಿ, ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭದ ಶಿವಲಿಂಗಯ್ಯ ಭಾಗವಹಿಸಿದ್ದರು.