Breaking News

ಹವಲ್ದಾರ್ ನಿರ್ದೇಶನ: ತಮಿಳು, ತೆಲುಗು, ಹಿಂದಿ ನಟರ ಸಮ್ಮೀಲನ ಅಯೋಧ್ಯರಾಮಪ್ಯಾನ್ ಇಂಡಿಯಾ ಮೂವಿ ನಾಳೆ ಅಂಜನಾದ್ರಿಯಲ್ಲಿ ಚಿತ್ರೀಕರಣ

Havaldar Directed: Tamil, Telugu, Hindi Actors Amalgamation Ayodhya Rampan India Movie Shooting Tomorrow in Anjanadri

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಗಂಗಾವತಿ: ತೆಲುಗು, ತಮಿಳು, ಹಿಂದಿ ಚಿತ್ರಗಳ ಖ್ಯಾತ ನಟರ ಸಮ್ಮಿಲದೊಂದಿಗೆ ಅಯೋಧ್ಯರಾಮ ಚಲನಚಿತ್ರಕ್ಕೆ ನಾಳೆ ಜ.೨೨ ರಂದು ಮಧ್ಯಾಹ್ನ ೧೨:೨೦ಕ್ಕೆ ಅಂಜನಾದ್ರಿಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿಯಿಂದ ಚಾಲನೆ ದೊರೆಯಲಿದೆ ಎಂದು ಚಿತ್ರದ ನಿರ್ಮಾಪಕ ಹಾಗು ನಿರ್ದೇಶಕ ಮಧುಸೂದನ ಹವಲ್ದಾರ್ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಪುತ್ರ ವಿಕ್ರಮ್ ಶ್ರೀರಾಮನಾಗಿ, ಶ್ರೀಲತಾ ಸೀತೆಯಾಗಿ ನಟಿಸಲಿದ್ದಾರೆ, ತೆಲುಗು ನಟ ಸುಮನ್, ಹಿಂದಿ ನಟ ಸಿಯಾಜಿ ಸಿಂಧೆ, ತಮಿಳು ನಟ ನಾಜೀರ್, ಕನ್ನಡದ ಅವಿನಾಶ್, ಮಾಳವೀಕಾ, ಪ್ರಮೋದ್ ಶೆಟ್ಟಿ, ವಿಜಯಾನಂದ ನಾಯಕ ಹಾಗು ಸ್ಥಳೀಯ ಕಲಾವಿದರಾದ ವಿಷ್ಣುತೀರ್ಥ ಜೋಷಿ, ಶರದ ದಂಡೀನ್, ನಾಗರಾಜ್ ಇಂಗಳಗಿ, ರಾಮಮೂರ್ತಿ ನವಲಿ ಹಾಗು ಪುರಷೋತ್ತಮ ರೆಡ್ಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವಿವರಸಿದ್ದಾರೆ.
ಶ್ರೀರಾಮನು ಸೀತೆಯನ್ನು ಹುಡುಕುತ್ತಾ ಕಿಷ್ಕಿಂಧೆಗೆ ಅಗಮಿಸಿದ ಕಥಾ ಹಂದರ ಹೊಂದಿದ್ದು ಭಿನ್ನವಾಗಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ, ಖಂಡಿತ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಳ್ಳುವ ಚಿತ್ರ ಇದಾಗಲಿದೆ. ಈಗಾಗಲೆ ಜಗನ್ನಾಥ ದಾಸರು, ಪ್ರಸನ್ನ ವೆಂಕಟ ದಾಸರು ಹಾಗು ವಿಜಯದಾಸರು ಚಿತ್ರ ಸೇರಿ ಸುಮಾರು ೧೫ ಕ್ಕು ಹೆಚ್ಚು ಯಶಸ್ವಿ ಚಿತ್ರ ನಿರ್ದೇಶನ ಮಾಡಿದ್ದು, ಎಲ್ಲವೂ ತೆರೆಕಂಡಿವೆ, ಮಾತಾಂಬುಜಾ ಮೂವಿಸ್ ಬ್ಯಾನರ್ ಹಾಗು ತೀರ್ಥರಾಜು ಬೆಂಗಳೂರು ನಿರ್ಮಾಣದ ಸಹಭಾಗಿತ್ವ ಈ ಚಿತ್ರ ಹೊಂದಿದ್ದು, ಪ್ರಶಾಂತ್ ಕುಷ್ಟಗಿ ಸಹಕಾರ ನೀಡಲಿದ್ದಾರೆ. ಸಿ.ನಾರಾಯಣ ಛಾಯಗ್ರಹಣ, ಡಿ. ವಿಜಯ್ ಕೃಷ್ಣ ಸಂಗಿತ, ಸಹಾಯಕ ಮುಖ್ಯ ನಿರ್ದೇಶಕರಾಗಿ ಭೀಮ್‌ಸೇನ್ ಬಾಗಲ್‌ಕೋಟೆ (ಬಾಬಿ), ಸಹಾಯಕ ನಿರ್ದೇಶಕರಾಗಿ ಕೆ.ಅಕ್ಷಯ್ ಕುಮಾರ್ ಬರಗೂರು ಕೆಲಸ ಮಾಡಲಿದ್ದಾರೆ. ಚಿತ್ರದ ಪರಿಕಲ್ಪನೆ ನಿರ್ದೇಶನ ನನ್ನದೇ ಆಗಿದ್ದು ಭಕ್ತಿ ಪ್ರಧಾನ ಚಿತ್ರಗಳಲ್ಲಿ ಯಶಸ್ಸು ಕಂಡಿರುವ ನನಗೆ ಈ ಚಿತ್ರ ೧೨ ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವುದರಿಂದ ಬಿಗ್ ಬಜೆಟ್ ಚಿತ್ರ ಇದಾಗಿದೆ. ಗಂಗಾವತಿ ಸುತ್ತಮುತ್ತಲಿನ ಲೊಕೇಷನ್‌ನಲ್ಲೇ ಚಿತ್ರ ಸಂಪೂರ್ಣ ಚಿತ್ರೀಕರಣಗೊಳ್ಳಲಿದೆ ಎಂದು ಹವಲ್ದಾರ್ ತಿಳಿಸಿದ್ದಾರೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *