Breaking News

ಹನೂರು ಪಟ್ಟಣದ ಪೆಟ್ರೊಲಿಯಂ ಬಂಕ್ ಪಕ್ಕದ ವೃತ್ತಕ್ಕೆ ನಾಡು ಪ್ರಭು ಕೆಂಪೇಗೌಡ ಹೆಸರುಅನುಮೋದಿಸಿರುವುದು ಸಂತೋಷದ ವಿಷಯ :ನಾಗೇಂದ್ರ ಎಲ್

It is a pleasure that Nadu Prabhu Kempegowda’s name has been approved for the circle next to the petroleum bank in Hanur town: Nagendra L

ಜಾಹೀರಾತು


ವರದಿ :ಬಂಗಾರಪ್ಪ ಸಿ ಹನೂರು .
ಹನೂರು : ಪಟ್ಟಣದ ಎಲ್ಲೆಮಾಳ,ರಾಮಪುರಕ್ಕೆ ಹಾದು ಹೋಗುವ ವೃತ್ತಕ್ಕೆ ಹನೂರು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಈ ವೃತ್ತಕ್ಕೆ ನಾಡ ಪ್ರಭು ಕೆಂಪೇಗೌಡರ ಹೆಸರನ್ನು 30/7/2022 ರಲ್ಲಿ ಅಂದಿನ ಶಾಸಕರಾದ ಆರ್ ನರೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದ ಸಾಮನ್ಯ ಸಭೆಯಲ್ಲಿಯು ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ.ಹಾಗೆಯೆ ಇಂದು ದಿನಾಂಕ 18/1/2022ರಂದು ಇಂದಿನ ಶಾಸಕರಾದ ಎಮ್ ಆರ್ ಮಂಜುನಾಥ್ ರ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇದೇ ವೃತ್ತಕ್ಕೆ ಅನುಮೋದನೆ ಮಾಡಿರುವುದು ಸಂತೋಷದ ವಿಷಯ ನಾಡ ದೊರೆ ಕೆಂಪೇಗೌಡರ ಹೆಸರನ್ನು ಶಿಪಾರಸು ಮಾಡಿದ್ದಾರೆ ಅವರಿಗೆ ನಮ್ಮ ಒಕ್ಕಲಿಗ ಸಮಾಜದಿಂದ ಅಭಿನಂದನೆಗಳು ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ಎಲ್ ನಾಗೇಂದ್ರ ತಿಳಿಸಿದರು .

ಕಾಂಗ್ರೆಸ್ ಮುಖಂಡರಾದ ಉದ್ಯಮಿ ಪೊನ್ನಾಚಿ ರಂಗಸ್ವಾಮಿ ಮಾತನಾಡಿ ಹನೂರು ಪಟ್ಟಣದಿಂದ ಎಲ್ಲೆಮಾಳಕ್ಕೆ ಹಾದು ಹೋಗುವ ವೃತ್ತಕ್ಕೆ ನಾಡ ಪ್ರಭುಗಳ ಹೆಸರು ಇಟ್ಟಿರುವುದು ಹೆಮ್ಮೆಯ ವಿಷಯ. ಖಾಸಗಿ ಬಸ್ ನಿಲ್ದಾಣದ ವೃತ್ತಕ್ಕೆ ದಿವಂಗತರಾದ ನಾಗಪ್ಪರ ಹೆಸರನ್ನು ಈಗಾಗಲೆ ನಾಮಕರಣ ಮಾಡಲಾಗಿದೆ ಹಾಗೆಯೆ ಹನೂರು ಕ್ಷೇತ್ರಕ್ಕೆ ತನ್ನದೆ ದೃಷ್ಟಿಕೊನದಲ್ಲಿ ಅಭಿವೃದ್ಧಿ ಮಾಡಿ ನೂತನ ತಾಲ್ಲೂಕು ಕೇಂದ್ರ ಮಾಡಲು ಸರ್ಕಾರದ ಗಮನ ಸೆಳೆದು ಯಶಸ್ವಿಯಾಗಿರುವ ದಿವಂಗತ ರಾಜೂಗೌಡರ ಹೆಸರನ್ನು ಒಂದು ವೃತ್ತಕ್ಕೆ ನಾಮಕರಣ ಮಾಡಿ ನಮಗೆ ಈ ಕ್ಷೇತ್ರಕ್ಕೆ ದುಡಿದ ಮಹನೀಯರನ್ನು ಸ್ಮರಣೆ ಮಾಡಲು ಸಹಕಾರಿಯಾಗುತ್ತದೆ ಎಂದು ಜನಪ್ರತಿನಿಧಿಗಳಿಗೆ ಕಿವಿ ಮಾತು ಹೇಳಿದರು .

ಸದ್ಭಾವ ಸೇವ ಸಮಿತಿಯ ಅಧ್ಯಕ್ಷರಾದ ಗಂಗರಾಜು
ಮಾತನಾಡಿ ನಮ್ಮ ನಾಡು ಕಂಡ ಅಪರೂಪದ ರಾಜರಲ್ಲಿ ಒಬ್ಬರಾದ ನಾಡದೊರೆ ಕೆಂಪೇಗೌಡರ ಹೆಸರನ್ನು ನಮ್ಮ ಹನೂರು ಪಟ್ಟಣ ಎಲ್ಲೆಮಾಳ ವೃತ್ತಕ್ಕೆ ನಾಮಕರಣ ಮಾಡಿರುವುದು ಹೆಮ್ಮೆಯ ವಿಷಯ ಎಂದರು .. ಇದೇ ಸಂದರ್ಭದಲ್ಲಿ ಸದ್ಭಾವ ಸೇವ ಸಮಿತಿಯ ಕಾರ್ಯದರ್ಶಿ ಶಶಿಕುಮಾರ್ ,ಕೊಳ್ಳೆಗಾಲ ಯಳಂದೂರು ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಶ್ , ಸಂತೋಷ್ ,ಸುರೇಶ್ ,ಸೇರಿದಂತೆ ಇನ್ನಿತರರು ಹಾಜರಿದ್ದರು

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.