Signature collection campaign by CITU against Center for forgetting Vivekananda

ಗಂಗಾವತಿ: ಹಲವು ವರ್ಷಗಳ ಕಾಲ ಸ್ವಾಮಿವಿವೇಕಾನಂದರನ್ನು ಜಪ ಮಾಡಿದ ಬಿಜೆಪಿ ಅವರ ತತ್ವಾರ್ದಶಗಳನ್ನು ಅನುಷ್ಠಾನ ಮಾಡದೇ ಇದೀಗ ಶ್ರೀರಾಮನ ಜಪದಲ್ಲಿ ದೇಶದ ಜನರ ಭಾವನೆಯ ಜತೆಗೆ ಚುನಾವಣಾ ನಾಟಕವಾಡುತ್ತಿದೆ. ಆದ್ದರಿಂದ ಸಿಐಟಿಯು ಸಂಘಟನೆ ಉದ್ಯೋಗ, ರೈತರ ಸಾಲ ಮನ್ನಾ, ಮನೆ ನಿರ್ಮಾಣಕ್ಕಾಗಿ ಜನರಿಂದ ಸಹಿ ಸಂಗ್ರಹ ಮಾಡಿ ಪ್ರಧಾನಮಂತ್ರಿಗಳಿಗೆ ಕಳಿಸುವ ಹೋರಾಟಕ್ಕೆ ಚಾಲನೆ ನೀಡಿದೆ ಎಂದು ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ನಿರುಪಾದಿ ಬೆಣಕಲ್ ಹೇಳಿದರು.
ಅವರು ನಗರದ ಜಗಜೀವನರಾಂ ವೃತ್ತದಲ್ಲಿ ಜನರಿಂದ ಸಹಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಶೋಷಿತರು,ದಲಿತರು ದಮನಿತರ ಪರವಾಗಿರ ಧರ್ಮವನ್ನು ಆಚರಣೆ ಮಾಡಿರಲಿಲ್ಲ. ಬಿಜೆಪಿ ಸಂಘ ಪರಿವಾರದವರು ಸ್ವಾಮಿ ವಿವೇಕಾನಂದರನ್ನು ಹೈಜಾಕ್ ಮಾಡಿ ಚುನಾವಣೆಯಲ್ಲಿ ಮತಗಳನ್ನಾಗಿ ಪರಿವರ್ತಿಸಿದ ಬಹಳ ದೊಡ್ಡ ಜಾಣರಾಗಿದ್ದಾರೆ. ಇದೀಗ ಶ್ರೀರಾಮನ ಭಜನೆ ಮಾಡುತ್ತ ದೇಶದ ಜನರ ಭಾವನೆಗಳ ಜತೆ ಆಟವಾಡಿ ಪುನಹ ೨೦೨೪ ಲೋಕಸಭಾ ಚುನಾವಣೆ ಗೆಲ್ಲುವ ತಂತ್ರ ಮಾಡಿದ್ದಾರೆ. ಈ ಎಲ್ಲಾ ನಿಜ ಅಂಶಗಳನ್ನು ಮನೆ ಮನೆಗೆ ತೆರಳಿ ಜನತೆಗೆ ಮನವರಿಕೆ ಮಾಡಲು ಜನರ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ಯುವಕರಿಗೆ ಉದ್ಯೋಗ, ಕೃಷಿಕೂಲಿಕಾರರಿಗೆ ನೆರವಾಗುವ ನರೇಗಾ ಯೋಜನೆ ಹೆಚ್ಚಿನ ಮಟ್ಟದಲ್ಲಿ ಅನುಷ್ಠಾನ ಮತ್ತು ರೈತರ ಸಾಲ ಮನ್ನಾ ಮಾಡಬೇಕು. ಶ್ರೀಮಂತರ ಉದ್ಯಮಿಗಳ ಸಾಲ ವೇ ಆಫ್ ಮಾಡಿದ್ದನ್ನು ರದ್ದು ಮಾಡುವಂತೆ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಚಂದ್ರಪ್ಪ ಹೊಸ್ಕೇರಾ, ಮಂಜುನಾಥ ಡಗ್ಗಿ, ರಮೇಶ, ಕೃಷ್ಣ, ಲಕ್ಷಿö್ಮದೇವಿ ಸೋನಾರ ಸೇರಿ ಸಿಐಟಿಯು ಸಂಘಟನೆಯ ಮುಖಂಡರು ಕಾರ್ಯಕರ್ತರಿದ್ದರು.