Tehsildar Guruprasad requested to make good use of Janata Darshan program.

ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ರೈತರು,ಸಾರ್ವಜನಿಕರು ಸರ್ಕಾರದಿಂದಲೆ ರೂಪಿಸಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಿ ಸೌಲಭ್ಯಗಳನ್ನು ಸಕಾಲದಲ್ಲಿ ಸಾರ್ವಜನಿಕರು ಪಡೆದುಕೊಳ್ಳಲು ತಹಶಿಲ್ದಾರರಾದ ಗುರುಪ್ರಸಾದ್ ಮನವಿ ಮಾಡಿದರು .
ನಂತರ ಮಾತನಾಡಿದ ಅವರು
ಹನೂರು ಪಟ್ಟಣದ ಅಂಬೇಡ್ಕರ್ ಪಟ್ಟಣದಲ್ಲಿ ಇದೇ ತಿಂಗಳು ೧೩ ನೆ ತಾರೀಖಿನಂದು ಜನತಾ ದರ್ಶನ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಭಾಗಿಯಾಗಿ ಎಲ್ಲಾ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಪ್ರಯತ್ನಿಸಲಾಗುವುದು ಇ ಸಂಬಂದವಾಗಿ ಸಾರ್ವಜನಿಕರು ಸೂಕ್ತ ದಾಖಲೆಯನ್ನು ನೀಡಿ ಸಮಸ್ಯೆ ಇಥ್ಯಾರ್ತ ಮಾಡಿಕೊಳ್ಳಬೇಕಾಗಿದೆ . ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ,ರಾಜಸ್ವ ನಿರೀಕ್ಷಕರಾದ ಮಾದೇಶ್ ,ಶಿರಸ್ದಾರ್ ರಾದ ನಾಗೇಂದ್ರ, ಗ್ರಾಮ ಆಡಳಿತಾಧಿಕಾರಿಗಳಾದ ಶೇಷಣ್ಣ ,ಇನ್ನು ಮುಂತಾದವರು ಹಾಜರಿದ್ದರು .