Breaking News

ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ಮತ್ತು “ಜೀನಿಯಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್”ನಲ್ಲಿ ವಿಶ್ವದಾಖಲೆ ಮಾಡುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹರ್ಷ

Nekkanti Suribabu Harsha, founder president of the organization, said that by making world records in “Wonder Book of World Record” and “Genius Book of World Record”, Nadi has attracted national attention.

ಜಾಹೀರಾತು

ಗಂಗಾವತಿ,08:ತಾಲೂಕಿನ ಸಮೀಪದ ಶ್ರೀರಾಮನಗರದ ಪ್ರತಿಷ್ಠಿತ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು

ರಾಸಾಯನಿಕ ಶಾಸ್ತ್ರದ ಪಿರಿಯಾಡಿಕ್ ಎಲಿಮೆಂಟ್ (ರಾಸಾಯನಿಕ ಆವರ್ತಕ ಅಂಶ) ಗಳ ವಿಷಯಕ್ಕೆ ಸಂಬಂಧಿಸಿದಂತೆ “ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ಮತ್ತು “ಜೀನಿಯಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್”ನಲ್ಲಿ ವಿಶ್ವದಾಖಲೆ ಮಾಡುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹರ್ಷ

ವ್ಯಕ್ತಪಡಿಸಿದ್ದಾರೆ.ತಾಲೂಕಿನ ಶ್ರೀರಾಮನಗರದ ಶಾಲೆಯಲ್ಲಿ ಇಂದು ನಡೆದ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಅಪ್ರತಿಮ ಪ್ರತಿಭೆ ತೋರುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಶಾಲೆಯ 1062 ವಿದ್ಯಾರ್ಥಿಗಳು “ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ಮತ್ತು “ಜೀನಿಯಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್”ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕೇವಲ ಒಂದು ನಿಮಿಷ ನಲವತ್ನಾಲ್ಕು ಸೆಕೆಂಡುಗಳಲ್ಲಿ (1.44 ಸೆಕೆಂಡ್‌ಗಳಲ್ಲಿ) 118 ರಾಸಾಯನಿಕ ಪಿರಿಯಾಡಿಕ್ ಎಲಿಮೆಂಟ್‌ಗಳನ್ನು ಹೇಳುವ ಮೂಲಕ ವಿಜಯಶಾಲಿಗಳಾಗಿ ವಿಶ್ವದಾಖಲೆಯನ್ನು ಮಾಡಿದ್ದಾರೆ. “ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ಮತ್ತು “ಜೀನಿಯಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್”ನ ಸಂಸ್ಥೆಯ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಅಪ್ರತಿಮ ಪ್ರತಿಭೆ ತೋರುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾನೇತನ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ|| ಶ್ರೀನಿವಾಸ ಚೌದರಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ರಾಸಾಯನಿಕ ಶಾಸ್ತ್ರದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

About Mallikarjun

Check Also

ಗಂಗಾವತಿ-ದರೋಜಿ ರೇಲ್ವೆ ಲೈನ್ ಅನುದಾನಕ್ಕೆ ಮನವಿ.

Appeal for Gangavathi-Daroji railway line grant. ಗಂಗಾವತಿ: ನಗರದಿಂದ ದರೋಜಿ ಗ್ರಾಮಕ್ಕೆ ನೂತನವಾಗಿ ರೇಲ್ವೆ ಲೈನ್ ನಿರ್ಮಾಣಕ್ಕೆ ರಾಜ್ಯದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.