Bharat Sankalpa Yatra developed by SBI

ತಿಪಟೂರು : ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಶ್ರೀ ಮಲ್ಲಿಕಾರ್ಜುನ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಅಂಗವಾಗಿ ಆರ್ಥಿಕ ಸುಸ್ತಿರತೆ ,ಮಕ್ಕಳಾ ಉಳಿತಾಯ ಖಾತೆಯ ನಿರ್ವಹಣೆಯ ಬಗ್ಗೆ ಮತ್ತು ಅವರ ಕುಟುಂಬದ ತಂದೆ ತಾಯಿಗಳಿಗೆ ಬ್ಯಾಂಕಿನಿಂದ ಸಿಗುವ ಕೆಸಿಸಿ ಸಾಲ ಹಾಗೂ ಹಲವಾರು ರೈತ ಪರ ಯೋಜನೆಗಳ ಬಗ್ಗೆ ಎಸ್ ಎಲ್ ಓ ರೇಖಾ ಮೇಡಂ ರವರು ಸಮಗ್ರ ಮಾಹಿತಿ ನೀಡಿದರು.
ಎಸ್ ಬಿ ಐ ತಿಪಟೂರು ಕೇಂದ್ರ ಶಾಖೆ ವ್ಯವಸ್ಥಾಪಕರಾದ ಶ್ರೀ ಹರ್ಷರವರು ನಮ್ಮ ಬ್ಯಾಂಕ್ನಿಂದ ದೊರೆಯುವ ಸಕಲ ಯೋಜನೆಗಳ ಸೌಲಭ್ಯ ಪಡೆದುಕೊಳ್ಳ ಬೇಕೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೈತಕವಿ ಡಾ.ಪಿ. ಶಂಕರಪ್ಪಬಳ್ಳೇಕಟ್ಟೆರವರು ಅತಿಥಿ ನುಡಿಗಳಾಡುತ್ತಾ ವಿದ್ಯಾರ್ಥಿಗಳು ಭವ್ಯ ಭಾರತದ ಭವಿಷ್ಯದ ಆರ್ಥಿಕ ರೂವಾರಿಗಳು ,ಆದ್ದರಿಂದ ಪ್ರತಿಯೊಬ್ಬರೂ ಬ್ಯಾಂಕುಗಳಲ್ಲಿ ಖಾತೆ ತೆರೆದು ಉಳಿತಾಯ ಹಾಗೂ ಸಾಲ ಸೌಲಭ್ಯಗಳನ್ನು ಪಡೆದು ಸಕಾಲದಲ್ಲಿ ಮರುಪಾವತಿಸಿದರೆ ದೇಶಾ ಭಿವೃದ್ಧಿಯ ಜೊತೆಗೆ ನಿಮ್ಮ ಭವಿಷ್ಯ ಬಂಗಾರವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಎಸ್ ವಿ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿ ಬ್ಯಾಂಕ್ ನ ವ್ಯವಹಾರ ಜ್ಞಾನ ವಿದ್ಯಾರ್ಥಿಗಳಿಗೆ ಹಾಗು ಅವರ ಕುಟುಂಬಕ್ಕೆ ಇದ್ದರೆ ಆರ್ಥಿಕ ವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು ಅದ್ಯಕ್ಷಿಯ ನುಡಿಗಳಾಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿ ಸೋಮಶೇಖರ್ ಮುಖ್ಯ ಶಿಕ್ಷಕಿ ಬಾಲ ನಾಗಮ್ಮ ಕೃಷಿ ಸಂಜೀವಿನಿ ಒಕ್ಕೂಟದ ಎಂ ಬಿ ಕೆ ರುಬಿನಾ ಕೃಷಿ ಸಖಿ ಮಂಜುಳ ಶಾಲ ಶಿಕ್ಷಕ ಸಿದ್ಬಂದಿವರ್ಗ, ಪಕೃತಿ ಸಂಜೀವಿನಿ ಒಕ್ಕೂಟದ ಸದಸ್ಯರು ,ಹಾಗು ಶಾಲಾ ಮಕ್ಕಳು ಉಪಸ್ಥಿತರಿದ್ದರು.