Breaking News

ರಸ್ತೆ ಕಾಮಗಾರಿ ವಿಳಂಬ ಸವಾರರಿಗೆಕಿರಿಕಿರಿಜನಪ್ರತಿನಿಧಿಗಳ ನಿರ್ಲಕ್ಷ-ಎಎಪಿಮುಖಂಡಹರೀಶ್ ಆರೋಪ.

AAP leader Harish accuses MPs of neglecting road works, causing annoyance to commuters.

ಜಾಹೀರಾತು


ಚಾಮರಾಜನಗರ,: ಪ್ರಸಿದ್ಧ ಯಾತ್ರ ಸ್ಥಳಕ್ಕೆ ಸಂಚಾರಿಸುವ ಮಹದೇಶ್ವರಬೆಟ್ಟದ ರಸ್ತೆಯಲ್ಲಿ ಪಗತಿಯಲ್ಲಿರುವ ಕಿರು ಸೇತುವೆ ಕಾಮಗಾರಿಗಳು ಮಂದಾಗತಿಯಲ್ಲಿ ಸಾಗುತ್ತಿರುವುದರಿಂದ ಕಬ್ಬಿಣ ಸರಳುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇದರಿಂದ ದಿನ ನಿತ್ಯ ಸಂಚಾರ ಮಾಡುವ ನೂರಾರು ವಾಹನಗಳ ಸವಾರರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು.
ಮಾದಪ್ಪನ ಬೆಟ್ಟಕ್ಕೆ ತೆರಳುವ ಎಲ್ಲೇಮಾಳ ಮತ್ತು ಹನೂರು ಮಾರ್ಗ ಮಧ್ಯೆ ಕಾಮಗಾರಿ ಪಗತಿಯಲ್ಲಿರುವ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಯ ನಿರ್ಮಾಣದಡಿಯಲ್ಲಿ ನಡೆಯುತ್ತಿದ್ದು ಪಕ್ಕದಲ್ಲಿ ತಾತ್ಕಾಲಿಕವಾಗಿ
ವ್ಯವಸ್ಥೆ ಮಾಡಿರುವ ರಸ್ತೆಯು ತುಂಬಾ ಚಿಕ್ಕದಾಗಿದ್ದು ಹಾಗೂ ತೀರ ಹದಗೆಟ್ಟಿದ್ದು ವಾಹನ ಚಾಲಕರು ಹಾದು ಹೋಗಲು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಹರಸಾಹಸ ಪಡುತ್ತಿರುತ್ತಾರೆ. ಇದೇ ಮಾರ್ಗವಾಗಿ ಮಲೆ ಮಾದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನ ಪಡೆಯಲು ಕಾಲ್ನೆಡಿಗೆಯಲ್ಲಿ ಭಕ್ತಾದಿಗಳು ಸಂಚಾರಮಾಡುತ್ತಾರೆ. ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ . ಕಾಮಗಾರಿ ಸ್ಥಳದಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲದ ಕಾರಣ ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಇದು ಗುತ್ತಿಗೆದಾರ ಮತ್ತು ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ , ಆದ್ದರಿಂದ ಸೇತುವೆಯ ಕಾಮಗಾರಿ ಬೇಗ ಕಾಮಗಾರಿ ಮಾಡಬೇಕು ಹಾಗೂ
ರಾತ್ರಿ ಸಮಯದಲ್ಲಿ ಸಂಚಾರ ಮಾಡುವ ವಾಹನಗಳಿಗೆ ಅಪಘಾತಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಸಂಕ್ರಾಂತಿ ,ಶಿವರಾತ್ರಿ, ಯುಗಾದಿ ಹಬ್ಬಗಳು ಬರುವುದರಿಂದ ಮಾದಪ್ಪನ ಭಕ್ತರಿಗೆ ಬಹಳ ತೊಂದರೆ ಯಾಗುತ್ತಿದೆ. ಹಾಗೂ ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ಈ ಕೂಡಲೇ ಎಚ್ಚೆತ್ತು ಸಂಬಂಧಪಟ್ಟ ಇಲಾಖೆಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಕೂಡಲೇ ಕಾರ್ಯವನ್ನು ನಿರ್ವಹಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಹರೀಶ್ ರವರು ಆಗ್ರಹಿಸಿದರು

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.