Women gladly accept family management- Yogini Akka
ಕೊಪ್ಪಳ ಡಿ ೩೧: ಸಮಾಜದಲ್ಲಿ ಮಹಿಳೆಗೆ ಕುಟುಂಬವೇ ಸರ್ವಸ್ವವಾಗಿದೆ. ಕುಟುಂಬದ ನಿರ್ವಹಣೆಯನ್ನು ಸಂತೋಷದಿAದ ಸ್ವೀಕರಿಸಬೇಕೆಂದು ಈಶ್ವರೀಯ ವಿಶ್ವವಿದ್ಯಾಲಯದ ಯೋಗೀನಿ ಅಕ್ಕ ಹೇಳಿದರು.
ಅವರು ಕೊಪ್ಪಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಹಿಳೆಯರಲ್ಲಿ ಧೈರ್ಯ. ಕುಟುಂಬ. ಉದ್ಯೋಗ ಕುರಿತು ಮಾತನಾಡಿದರು.
ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಕೊ ಗಣೇಶ್ ಬಿ ಉದ್ಘಾಟಿಸಿ ಮಹಿಳೆಯರು ಯೋಜನೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬದಲಾವಣೆ ಜೊತೆಗೆ ಸುಧಾರಣೆಯಾಗಿದ್ದಾರೆ ಹಾಗೂ ಕಾಲ ಕಾಲಕ್ಕೆ ಸಿಗುವ ಮಾಹಿತಿಯಿಂದ ಉತ್ತಮ ಶಿಸ್ತು ಹಾಗೂ ಕುಟುಂಬ ನಿರ್ವಹಣೆಯನ್ನು ಅರಿತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಪ್ಪಳ ನಗರ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಮತಿ ಉಮೇರಾ ಬಾನು ಅವರು ಮೊಬೈಲ್ ಬಳಕೆ ಬಗ್ಗೆ ಹಾಗೂ ಮಹಿಳೆಯರು ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸುವ ಬಗ್ಗೆ ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಶ್ರೀಮತಿ ಸರೋಜಾ ಬಾಕಳೆ ಇವರು ಮಕ್ಕಳಲ್ಲಿ ಮೊಬೈಲ್ ಬಳಕೆಯ ದುಷ್ಪರಿಣಾಮದ ಬಗ್ಗೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಜಗದೀಶ್ ಕೆ ಎಚ್ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ವಲಯದ ಮೇಲ್ವಿಚಾರಕಿ ಶ್ರೀಮತಿ ಲಕ್ಷ್ಮಿ ಹಾಗೂ ಸೇವಾ ಪ್ರತಿನಿಧಿ ಇದ್ದರು.