Navali Veerabhadreshwar Swami who fulfills the wishes of true devotees: Kartikotsava
ನವಲಿ : ಕೊಪ್ಪಳ ಜಿಲ್ಲಾ ಕನಕಗಿರಿ ತಾಲೂಕಿನ ಸುಕ್ಷೇತ್ರ ನವಲಿ ಗ್ರಾಮದಲ್ಲಿ ಭಕ್ತರ ಉದ್ದರಿಸಲು ನೆಲೆ ನಿಂತ ವೀರಭದ್ರೇಶ್ವರ ಸ್ವಾಮಿ ಶಕ್ತಿ ಅಪಾರವಾಗಿದ್ದು ಪ್ರತಿ ಅಮವಾಸೆ ಮತ್ತು ಹುಣ್ಣೆಮೆ ಹಾಗೂ ವಿಶೇಷ ದಿನಗಳಲ್ಲಿ ಸಾಕಷ್ಟು ಜನ ಭಕ್ತರು ಆಗಮಿಸಿ ತಮ್ಮ ಸಂಕಷ್ಟ ನೀವೇದನೆ ಮಾಡಿಕೊಂಡು ಸ್ವಾಮಿ ಕೃಪೆಗೆ ಪಾತ್ರರಾಗಿದ್ದಾರೆ, ಶ್ರಾವಣ ಮಾಸದಲ್ಲಿ ನಿರಂತರ ಅಭೀಷೇಕ ಮತ್ತು ವಿವಿಧ ಪೂಜಾ ಕ್ರಿಯೆಗಳು ಜರಗುತ್ತಿದ್ದು, ಕಾರ್ತಿಕ ಮಾಸದಲ್ಲಿ ದೇವಸ್ಥಾನದಲ್ಲಿ ವೀರಭದ್ರೇಶ್ವರ ಸ್ವಾಮಿ ದರ್ಶನಕ್ಕೆ ಬಂದು ಅಲ್ಲೆಯೆ ಸ್ವಲ್ಪ ದಿನಗಳ ಕಾಲ ವಾಸವಿದ್ದ ಲೋಕ ಸಂಚಾರಿ ಮಹಾನ್ ತಪಸ್ವಿ ಶ್ರೀ ಎಮ್ಮಿಗನೂರ ಜಡಿಸಿದ್ದ ಶೀವಯೋಗಿಗಳವರ ಪುರಾಣ ಕಾರ್ಯವನ್ನು ಸಂಸ್ಥಾನ ಗವಿಮಠ ಕೊಪ್ಪಳದ ಪರಮ ಪೂಜ್ಯರಾದ 17ನೇ ಪೀಠಾಧಿಪತಿಗಳು ಲಿಂಗೈಕ್ಯ ಶಿವಶಾಂತವೀರ ಮಹಾ ಸ್ವಾಮಿಗಳವರು ಪ್ರಾರಂಭಿಸಿ ಮುನ್ನಡೆಯಿಂದ ಸತತವಾಗಿ 46 ವರ್ಷಗಳ ಪರ್ಯಂತ ನೆಡೆಯುತ್ತಾ ಬಂದಿದ್ದು ಕಾರ್ತಿಕ ಮಾಸದ ಕೊನೆಯದಿನ ಅಂದರೆ ಹೊಸ್ತಿಲ ಹುಣ್ಣಿಮೆಯ ನಂತರದ ಶುಕ್ರವಾರ ಕಾರ್ತಿಕ ದೀಪೋತ್ಸವ ಹಾಗೂ ಪುರಾಣ ಮಹಾ ಮಂಗಲ ಪೂಜ್ಯರ ಆರ್ಶೀವಚನ ಜರುಗತ್ತದೆ. ನಂತರ ಶನಿವಾರ ಬೆಳಗ್ಗೆ ಅಗ್ನಿಕೊಂಡ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಉತ್ಸವ ಜರುಗುತ್ತದೆ. ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ, ಸಂತಾನ ಭಾಗ್ಯ, ಮದುವೆ ಭಾಗ್ಯ, ವ್ಯಾಪಾರ ಅಭಿವೃದ್ದಿ, ಉದ್ಯೋಗ ದೋರೆಯುವಿಕೆ, ಮನ ನೆಮ್ಮದಿ ಇಗೆ ಅನೇಕ ಸಮಸ್ಯಗಳಿಗೆ ಪರಿಹಾರ ಸ್ವಾಮಿಯ ಸನ್ನಿದಾನದಲ್ಲಿ ಮುಕ್ತಿ ದೊರೆಯುತ್ತದೆ ಎಂಬುದು ಮತ್ತು ಮನದಲ್ಲಿ ನೆನೆದವ ಮನೆ ಮನಗಳ್ಲಿ ಸದಾ ನೆಲೆ ನಿಲ್ಲುತ್ತೇನೆ ಎನ್ನುವ ಶ್ರೀ ನವಲಿ ವೀರಭದ್ರೇಶ್ವರ ಸ್ವಾಮಿಯ ಪವಾಡ ಇಂದಿಗೂ ಜಿವಂತವಾಗಿರುವದು ವಿಶೇಷವಾಗಿದೆ,
ಇದೆ ಡಿಸೆಂಬರ 29 ಮತ್ತು 30 2023 ರಂದು ಸ್ವಾಮಿಯ ಜಾತ್ರೋತ್ಸವದ ಕಾರ್ಯಕ್ರಮಗಳು ಜರಗುತ್ತಿರುವದು, ಭಕ್ತರು ದೀಪೊತ್ಸವ ಕಾರ್ಯದಲ್ಲಿ ಪಾಲ್ಗೊಂಡು ಪುನಿತರಾಗಲು ಕಾತುರರಾಗಿದ್ದಾರೆ,