Sukshetra Nandihala Math Parampujya Shri Lim. 15th Year Punyatithi of Sharan Hanumesh Grandfather”
ಲಿಂಗೈಕ್ಯ ಶರಣ ಹನುಮೇಶ ತಾತನವರ ಕೃತ ಗದ್ದುಗೆ ಪೂಜೆ ಕಾರ್ಯಕ್ರಮ
ಈಗಿರುವ ಪರಮಪೂಜ್ಯ ಶ್ರೀ ಜಯೇಂದ್ರ ತಾತಾ ಅವರು ನೇತೃತ್ವದಲ್ಲಿ
“೨೭ & ೨೮ ಎರಡು ದಿನಗಳ ಕಾರ್ಯಕ್ರಮ ಜರುಗಲಿವೆ.”
ಮುದಗಲ್ : ಸಮೀಪದ ನಂದಿಹಾಳ ಗ್ರಾಮದ ಪರಮಪೂಜ್ಯ ಶ್ರೀ ಲಿಂಗೈಕ್ಯ ಶರಣ ಹನುಮೇಶ ತಾತನವರ ೧೫ ನೇ ವರ್ಷದ ಪುಣ್ಯತಿಥಿ ಅಂಗವಾಗಿ
ಶ್ರೀಮನೃಪ ಶಾಲಿವಾಹನ ಶಕೆ ೧೯೪೫ನೇ ಶುಭಕೃತನಾಮ ಸಂವತ್ಸರ, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಿನಾಂಕ ೨೭-೧೨-೨೦೨೩ ರ ಸಂಕವಾರದಂದು ಪ್ರತಿಪದ ರಾತ್ರಿ ೮-೦೦ ಗಂಟೆಗೆ ಪರಮಪೂಜ್ಯ ಶ್ರೀ ಹನುಮೇಶ ತಾತನವರ ಕತೃ ಗದ್ದುಗೆಗೆ ರುದ್ರಾಭೀಷೇಕ ನಂತರ ತೀರ್ಥ, ಪ್ರಸಾದ ರಾತ್ರಿ ೧೦-೦೦ ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಸಲಾಗುವುದು.
ಮರುದಿನ ದಿನಾಂಕ-೨೮-೧೨-೨೦೨೩ ಸ್ವಗಳನ್ಯ ದ್ವಿತೀಯ ಪುಣ್ಯತಿಥಿ, ಬೆಳಿಗ್ಗೆ ೬-೦೦ ಗಂಟೆಗೆ ಧ್ವಜಾರೋಹಣ ನಂತರ ಬೆಳಿಗ್ಗೆ ೮-೦೦ ಗಂಟೆಗೆ ಹೋಮ ಮಾಡಲಾಗುವುದು.
ತದನಂತರ ಬೆಳಿಗ್ಗೆ ೧೦-೦೦ ಗಂಟೆಗೆ ಕತೃ ಗದ್ದುಗೆಗೆ ಹೂವಿನ ಅಲಂಕಾರ, ಪೂಜೆಯೊಂದಿಗೆ ಪರಮಪೂಜ್ಯ ಶ್ರೀ ಜಯಂದ್ರ ತಾತನವರಿಂದ ಪೂಜೆ ನಡೆಸಲಾವುದು.
ನಂತರ ಶ್ರೀಗಳಿಂದ ತೀರ್ಥ ಕೊಡಲಾಗುವುದು.
ಮಧ್ಯಾಹ್ನ ೧೨-೦೦ ಗಂಟೆಯಿಂದ ಸಕಲ ಭಕ್ತಾಧಿಗಳಿಗೆ ಆಶೀರ್ವಾದ (ವಚನ) ಮಾಡಲಾಗುವುದು. ಮಧ್ಯಾಹ್ನ ೧-೦೦ ಗಂಟೆಯಿಂದ ಪ್ರಸಾದ ನಡೆಸಲಾಗುವುದು.
ಸುಕ್ಷೇತ್ರ ನಂದಿಹಾಳಮಠದ ಪರಮಪೂಜ್ಯ ಶ್ರೀ ಹನುಮೇಶ ತಾತನವರ ಕೃತ ಗದ್ದುಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಳ್ಳಿ ಎಂದು ಪರಮಪೂಜ್ಯ ಶ್ರೀ ಜಯೇಂದ್ರ ತಾತಾ ತಿಳಿಸಿದರು.
ಉಪ್ಪಾರನಂದಿಹಾಳ ಗ್ರಾಮದ ಗುರು-ಹಿರಿಯರು, ಸಕಲ ಸದ್ಭಕ್ತ ಮಂಡಳಿ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಇರುವ ಭಕ್ತಾದಿಗಳು, ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಂದರು
ಸುಕ್ಷೇತ್ರ ನಂದಿಹಾಳಮಠದ ಪರಮಪೂಜ್ಯ ಹನುಮೇಶ ತಾತನವರ ಟ್ರಸ್ಟ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.