Social activist Raghavendra Dharwad is given the chairmanship of the corporation: Krishna Agraha
ಗದಗ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಉತ್ತರ ಕರ್ನಾಟಕದ ಜನರ ಹಾಗೂ ನಾಯಕರ ಪ್ರಯತ್ನ ಸಿಂಹಪಾಲಿದ್ದು ಆದರೆ ನಿಗಮ ಸ್ಥಾಪನೆಯದಾ ವರ್ಷದಿಂದ ಇಲ್ಲಿವರೆಗೂ ಉತ್ತರ ಕರ್ನಾಟಕ ಒಬ್ಬ ವ್ಯಕ್ತಿಯು ಒಂದು ಬಾರಿಯೂ ನಿಗಮ ಅಧ್ಯಕ್ಷರಾಗಲಿ ಅಥವಾ ನಿರ್ದೇಶಕರಾಗಲಿ ಆಗದೇ ಇರುವುದು ದುರಷ್ಟಕರ ಸಂಗತಿ.
ಚಿಕ್ಕ ವಯಸ್ಸಿನಲ್ಲೇಯುವ ಘಟಕದ ಉತ್ತರ ಕರ್ನಾಟಕ ಅಧ್ಯಕ್ಷರಾಗಿ ಸಮಾಜ ಸಂಘಟನೆ ಮಾಡಿದ್ದು ಈಗಿರುವ ಎಷ್ಟೋ ನಾಯಕರನ್ನು ಸಂಘಟನಾತ್ಮಕವಾಗಿ ಬೆಳಕಿಗೆ ತಂದವರು. ಸಮಾಜದ ಪರವಾಗಿ ಅನೇಕ ಹೋರಾಟಗಳನ್ನು ಮಾಡಿದ್ದು 2012ರ ಸದಾಶಿವ ಆಯೋಗದ ಸಲುವಾಗಿ ಗದಗ ಜಿಲ್ಲೆಯಲ್ಲಿ ಉಗ್ರ ಹೋರಾಟ ಮಾಡಿ ಮತ್ತು ಉತ್ತರ ಕರ್ನಾಟಕದ ಅನೇಕ ಜನರು ರಕ್ತ ಹರಿಸಿದರು. ಅದರಲ್ಲಿ ಒಬ್ಬರಾದ ಇವರು ಸಮಾಜದ ಪರವಾಗಿ ನಡೆಯುವ ಹೋರಾಟಗಳಿಗೆ ತಮ್ಮ ಭಾಗದ ಜನರಿಗೆ ಆರ್ಥಿಕವಾಗಿ ಸಹಾಯ ನೀಡುತ್ತಾ ಹಾಗೂ ಅನೇಕ ಸಮಾಜ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ.
IIMS ಸಂಸ್ಥೆಯ ವತಿಂದ ಕಂಪ್ಯೂಟರ್ ಸೆಂಟರ್ ೧೫ ಕಡೆ ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಹಾಗೂ ೨೫ ಬೇಡ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಸೇವೆ ಕೂಡ ನೀಡಿರುತ್ತಾರೆ. ಹಲವಾರು ಸಮುದಾಯದ ಏಳಿಗೆಗೆ ಮಾತ್ರವಲ್ಲದೆ, ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜ ಸೇವೆ ಸಲ್ಲಿಸಿದ್ದಾರೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದಲ್ಲಿ ಬ್ರಹ್ಮಾಂಡದ ಭ್ರಷ್ಟಾಚಾರ ನಡೆದಾಗ ಈ ಬಗ್ಗೆ ರಾಜ್ಯದಲ್ಲಿ ಧ್ವನಿ ಎತ್ತಿದ ನಾಯಕ ಇವರಾಗಿದ್ದು ಈ ಬಗ್ಗೆ ಅನೇಕ ಹೋರಾಟಗಳನ್ನು ಮಾಡಿದ್ದಾರೆ.
ರಾಜಕೀಯವಾಗಿ ಹಾಗೂ ಸಂಘಟನಾತ್ಮಕವಾಗಿ ಭೋವಿ ಸಮುದಾಯದ ಇತಿಹಾಸವನ್ನು ಮೆಲಕು ಹಾಕಿದಾಗ ಉತ್ತರ ಕರ್ನಾಟಕದ ನಾಯಕರ ಹಾಗೂ ಜನರ ಪರಿಶ್ರಮ ಬಹಳವಿದೆ. ಉತ್ತರ ಕರ್ನಾಟಕದವರು ಆರ್ಥಿಕವಾಗಿ ಹಿಂದುಳಿದ ನಾಯಕರುಗಳು ಇರಬಹುದು ಆದರೆ ಜನಶಕ್ತಿ ಪ್ರದರ್ಶಿಸುವವಲ್ಲಿ ಯಾವತ್ತು ಮುಂದೆ ಇರುತ್ತಾರೆ. ನಿಗಮದ ಹಾಗೂ ಸಮಾಜದ ಸಲುವಾಗಿ ಹೋರಾಟ ಮಾಡುವುವಲ್ಲಿ ಉತ್ತರ ಕರ್ನಾಟಕದ ನಾಯಕ ಹಾಗೂ ಜನರ ಸಿಂಹಪಾಲಿದ್ದರು ಅಧಿಕಾರ ಅನುಭವಿಸುವ ಭಾಗ್ಯ ಇರುವುದಿಲ್ಲ.
ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕಾಂಗ್ರೆಸ ಸರ್ಕಾರ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಈ ಬಾರಿ ನಿಗಮದ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದ ಹಾಗೂ ಯುವ ನಾಯಕರಾದ ಗದಗಿನ ರಾಘವೇಂದ್ರ ಹ ಧಾರವಾಡ ಅವರಿಗೆ ನೀಡಬೇಕೆಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ವಿಜಯಕುಮಾರ ಲಕ್ಷ್ಮಿಗುಡಿ. ಶ್ರೀನಿವಾಸ್ ಧಾರವಾಡ. ಈರಪ್ಪ ಹೊಸಳ್ಳಿ.ವೆಂಕಟೇಶ ಬಾದಾಮಿ ಆಗ್ರಹಿಸಿದ್ದಾರೆ.