Breaking News

ವಿದ್ಯಾನಗರದ ಚರ್ಚ್ನಲ್ಲಿ ಕ್ರಿಸ್‌ಮಸ್ ಹಾಗೂ ಹೊಸವರ್ಷದಆಚರಣೆ.

Christmas and New Year celebration in Vidyanagar church.

ಜಾಹೀರಾತು

ಗಂಗಾವತಿ: ಗಂಗಾವತಿ ನಗರದ ಸಮೀಪದ ವಿದ್ಯಾನಗರದಲ್ಲಿರುವ ಬೆಥೆಸ್ದಾ ಎಟರ್ನಲ್ ಫೆಲೋಶಿಪ್ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ, ಕರ್ನಾಟಕ ಆರೋಗ್ಯ ಸಂವರ್ಧನಾ ಸಂಸ್ಥೆ ಮತ್ತು ನವಜ್ಯೋತಿ ನೆಟ್‌ವರ್ಕ್ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಕ್ರಿಸ್‌ಮಸ್ ಹಬ್ಬ ಹಾಗೂ ಹೊಸವರ್ಷದ ಅಂಗವಾಗಿ ನಗರದ ವಿದ್ಯಾನಗರದಲ್ಲಿ ಹೆಚ್.ಐ.ವಿ, ಟಿ.ಬಿ ರೋಗಿಗಳ ಮಕ್ಕಳಿಗೆ ಉಚಿತ ನೊಟುಬುಕ್ ಹಾಗೂ ಪುಸ್ತಕಗಳ ವಿತರಣೆ, ಮಹಿಳೆಯರಿಗೆ ಸೀರೆ, ವೃದ್ಧರಿಗೆ ಶಾಲು ವಿತರಣೆ ಮಾಡಲಾಯಿತು ಎಂದು ಸಮುದಾಯ ಸಂಯೋಜಕರಾದ ಖಾಸಿಂಬಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿ. ಜೀವಪ್ರಕಾಶ ಮಾತನಾಡಿ, ನಮ್ಮ ಬೆಥೆಸ್ದಾ ಟ್ರಸ್ಟ್ ಕಳೆದ ೨೧ ವರ್ಷಗಳಿಂದ ಸಮಾಜದಲ್ಲಿನ ದೀನ, ದಲಿತರ, ವಿಕಲಾಂಗರ ಹಾಗೂ ಅನಾಥ ಮಕ್ಕಳಿಗೆ ಹಾಗೂ ಅವರ ಜೀವನಕ್ಕೆ ಅವಶ್ಯವಾದ ಸಾಮಾಗ್ರಿಗಳನ್ನು ಉಚಿತವಾಗಿ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದೆ. ಆ ಮೂಲಕ ನಮ್ಮ ಟ್ರಸ್ಟ್ನ ಸಹಕಾರದೊಂದಿಗೆ ವಿವಿಧ ಸಂಘ-ಸAಸ್ಥೆಗಳು ಸಮಾಜ ಸೇವೆಯಲ್ಲಿ ತೊಡಗಿರುವುದು ಸಂತಸದಾಯಕ ವಿಷಯವಾಗಿದೆ ಎಂದು ತಿಳಿಸುತ್ತಾ, ಸಾರ್ವಜನಿಕರು ಯೋಗ, ವ್ಯಾಯಾಮ, ಧ್ಯಾನಗಳ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
ಗಂಗಾವತಿ ವಿದ್ಯಾನಗರದ ಚರ್ಚ್ನಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಶುಭಾಷಯಗಳನ್ನು ಕೋರಿ ಕೇಕ್ ಕತ್ತರಿಸಿ, ಪ್ರಾರ್ಥನೆ ಮಾಡುವ ಮೂಲಕ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಈ ಮೇಲಿನ ಕಾರ್ಯಕ್ರಮಗಳಲ್ಲಿ ವಕೀಲರಾದ ಎಂ.ಬಿ ನದಾಫ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕಿ ಶ್ರೀಮತಿ ಶಾರದಾ, ನವಜ್ಯೋತಿ ನೆಟ್‌ವರ್ಕ್ ಸಂಸ್ಥೆಯ ನಾಗರತ್ನ, ಇತರರುಗಳಾದ ನಾಗವೇಣಿ, ಸಾಹೇರಾಬೇಗಂ, ಶೈನಾಜ್, ಅನಿತಾ, ರೇಷ್ಮಾ, ನಾಗಮ್ಮ, ಮಲ್ಲಿಕಾರ್ಜುನ, ಹುಸೇನಭಾಷಾ, ಸಂಪತ್‌ಕುಮಾರ, ಕೆ. ಸತೀಶ, ಲಕ್ಷಿö್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.