Breaking News

ಅನ್ನದಾತ ನಿಜವಾದ ದೇವರುರೈತನಿಲ್ಲದ ಜಗತ್ತನ್ನುಕಲ್ಪಿಸಿಕೊಳ್ಳುವುದು ಅಸಾಧ್ಯ- SBIವ್ಯವಸ್ಥಾಪಕ ಹರೀಶ ಸಾಲಿ

It is impossible to imagine a world without a real farmer who gives food – Harish Sali, Managing Director, SBI

ಜಾಹೀರಾತು
IMG 20231222 WA0472 300x149

ಹೊಸಪೇಟೆ: ಅನ್ನದಾತ ನಿಜವಾದ ದೇವರುರೈತನಿಲ್ಲದ ಜಗತ್ತನ್ನುಕಲ್ಪಿಸಿಕೊಳ್ಳುವುದು ಅಸಾಧ್ಯ ಹೊಸಪೇಟೆ SBIಮುಖ್ಯ ವ್ಯವಸ್ಥಾಪಕ ಹರೀಶ ಸಾಲಿ. ಹೇಳಿದರು

  *ನಮ್ಮದು ಕೃಷಿ ಪ್ರಧಾನವಾದ ದೇಶ. ದೇಶದ 58 % ಕೃಷಿ ಅವಲಂಬಿತರು ಆಗಿದ್ದಾರೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ರೈತರನ್ನು ಅನ್ನದಾತ ರನ್ನಾಗಿ ಮಾಡಿದ ಹೆಮ್ಮೆ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಇದೆ ಎಂದು ಹೊಸಪೇಟೆ ವಲಯ ಕಚೇರಿಯ ಮುಖ್ಯ ವ್ವವಸ್ಥಾಪಕ ರಾದ ಹರೀಶ್ ಸಾಲಿ ಅವರು ಇಂದು ಭಾರತೀಯ ಸ್ಟೇಟ್ ಬ್ಯಾಂಕ್ ಕೃಷಿ ವಾಣಿಜ್ಯ ಶಾಖೆ ಗಂಗಾವತಿ ಆವರಣದಲ್ಲಿ

ಎಸ್‌ ಬಿ ಐ ಅನ್ನದಾತ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ಸುಮಾರು 15000 ಶಾಖೆಗಳ ಮುಖಾಂತರ ರೈತರ ಅಭಿವೃದ್ಧಿಗೆ ಶ್ರಮಿಸಿ ,ರೈತ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಿ, ನಮ್ಮ ಬ್ಯಾಂಕ್ ರೈತರ ಜೀವನಾಡಿ ಯಾಗಿದೆ ಎಂದು ತಿಳಿಸಿದರು.
ರೈತನಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಅಸಾಧ್ಯ ನಮ್ಮ ನಿತ್ಯದ ಊಟದ ಹಿಂದೆ ರೈತರ ಶ್ರಮವಿದೆ. ಹಾಗಾಗಿ ರೈತರನ್ನು ನೆನೆಯೋಣ. ರೈತ ಅನ್ನದಾತ ನಿಜವಾದ ದೇವರು ಎಂದು ರೈತರ ತ್ಯಾಗವನ್ನು ಶ್ರಮಿಸಿದರು
ಇನ್ನೋರ್ವ ಅತಿಥಿಗಳಾದ ಹೊಸಪೇಟೆ ಎಸ್ ಬಿ ಐ ವಲಯ ಕಚೇರಿಯ ಮುಖ್ಯ ವ್ಯವಸ್ಥಾಪಕರಾದ ಭದ್ರಾಚಾರಿ ಯವರು ನಾವೀಗ ಆಧುನಿಕ ಯುಗದಲ್ಲಿ ವಿಜ್ಞಾನ ತಂತ್ರಜ್ಞಾನ ಬಳಕೆ ದಿನ ಹೆಚ್ಚುತ್ತಾ ಇದೆ. ಅದರ ಸದುಪಯೋಗಪಡಿಸಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿ ನಮ್ಮ ರೈತರು ಕೇವಲ ಬೇಸಾಯದತ್ತ ಗಮನ ಹರಿಸದೆ ಇಂದಿನ ಮಾರುಕಟ್ಟೆಯನ್ನು ಗಮನಿಸಿ ವೈವಿಧ್ಯಮಯ ಬೆಳೆ ಬೆಳೆಯುವುದನ್ನು ರೂಢಿಸಿ ಕೊಳ್ಳಲು ಕರೆ ಕರೆ ನೀಡಿದರು.
*ಪ್ರಾರಂಭದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರರ ಟಿ. ಆಂಜನೇಯರವರು ಇಂದಿನ ಕಾರ್ಯಕ್ರಮದ ಕುರಿತು *ಎಸ್‌ ಬಿ ಐ ಅನ್ನದಾತ ದಿವಸ ಆಚರಣೆ* ಮತ್ತು ಭಾರತದ ಐದನೇ ಪ್ರಧಾನಿ ಚೌದ್ರಿ ಚರಣ ಸಿಂಗ್ ಅವರ ಜನ್ಮದಿನ ರೈತರ ದಿನಾಚರಣೆ ಯಾಗಿ ಆಚರಿಸುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ದೇಶದ ಆಯ್ದ 353 ಜಿಲ್ಲೆಗಳಲ್ಲಿ ರೈತರ ಅನ್ನದಾತ ದಿವಸ್ ಕಾರ್ಯಕ್ರಮವನ್ನು ರೈತ ಸಂಪರ್ಕ, ರೈತ ಯೋಜನೆಗಳನ್ನು ಈ ದಿನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿ , ಸಾಮಾಜಿಕ ಭದ್ರತೆ ಯೋಜನೆಗಳ ಮಾಹಿತಿಯನ್ನು ರೈತರಿಗೆ ಒದಗಿಸಿದರು
ಅಧ್ಯಕ್ಷತೆ ವಹಿಸಿದ ಗಂಗಾವತಿ ಶಾಖಾಧಿಕಾರಿ ಮಂಜುನಾಥ್ ಬಿ ಎಮ್ ರವರು ನಮ್ಮ ಶಾಖೆ ಕೃಷಿ ಅಭಿವೃದ್ಧಿ ,ವಾಣಿಜ್ಯ ,ಶಾಖೆ ಯಾಗಿದ್ದು ಇದುವರೆಗೆ ನಮ್ಮ ಶಾಖೆಯಿಂದ ಅನೇಕ ರೈತರಿಗೆ ಕೃಷಿ ಉತ್ಪನ್ನ ಚಟುವಟಿಕೆ ಮತ್ತು ಅನೇಕ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಮುಂದೆಯೂ ಸಹ ರೈತರು ತಮ್ಮ ಅಭಿವೃದ್ಧಿಗಾಗಿ ಕೃಷಿಗೆ ಸಂಬಂಧಿಸಿದ ಅನೇಕ ಹೊಸ ಸಾಲ ಯೋಜನೆಗಳನ್ನು ಉಪಯೋಗಪಡಿಸಿ ಕೊಳ್ಳಲು ಉಪಸ್ಥಿತರಿದ್ದ ರೈತರಲ್ಲಿ ವಿನಂತಿಸಿದರು
ಅನ್ನದಾತ ದಿವಸ್ ಕಾರ್ಯಕ್ರಮದ ಅಂಗವಾಗಿ ರೈತರನ್ನು, ಕೃಷಿಕರನ್ನು ನೆನೆಯುವುದರ ಜೊತೆಗೆ ಗಂಗಾವತಿ ಕೃಷಿ ವಾಣಿಜ್ಯ ಶಾಖೆಗೆ ಸುಮಾರು 30-40 ವರ್ಷಗಳಿಂದ ವ್ಯವಹರಿಸಿ ಸಾಲ ಸೌಲಭ್ಯ ಪಡೆದು ಸಕಾಲದಲ್ಲಿ ಮರುಪಾವತಿಸಿ, ಉತ್ತಮ ಠೇವಣಿ ಸಂಗ್ರಹಿಸಿದ ಅತ್ಯುತ್ತಮ ಐದು ಜನ ರೈತರಾದ ಶ್ರೀ ಮಹಾಂತೇಶ್ ಗೌಡ ಹಿರೇಡಂಕನಕಲ್, ಬಸವ ಪ್ರಭು ಹೇರೂರು, ಕಾಶಿನಾಥ ಸ್ವಾಮಿ ಗಂಗಾವತಿ, ಶ್ರೀಮತಿ ಲಕ್ಷ್ಮಿ ಸಿದ್ದಾಪುರ, ಶ್ರೀಮತಿ ಪಾರ್ವತಮ್ಮ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಲ್ಲದೆ ಉತ್ತಮ ಸಾಲ ಮರುಪಾವತಿಸಿದ ರೈತರಾದ ಶ್ರೀ ಜಂಬಣ್ಣ ಮತ್ತು ಶ್ರೀ ಶರಣ ಬಸವನಗೌಡ ಇವರಿಗೆ ಕೃಷಿ ಸಾಲ ಮಂಜೂರಾತಿ ಪತ್ರವನ್ನು ನೀಡಲಾಯಿತು.
ಇಂದಿನ ಅನ್ನದಾತ ದಿವಸ ಕಾರ್ಯಕ್ರಮದಲ್ಲಿ ಅನೇಕ ಪ್ರಗತಿಪರ ರೈತರು ,ರೈತ ಮಹಿಳೆಯರು ಅಲ್ಲದೆ ಬ್ಯಾಂಕಿನ ಕ್ಷೇತ್ರ ಅಧಿಕಾರಿಗಳಾದ ಮಂಜುನಾಥ್ ,ದಾಮೋದರ್, ಅನೂಪ್, ಅಶ್ವಿನಿ ,ನೀಲಾ, ಶೃತಿ ಮತ್ತು ನಾರಾಯಣ, ಬದರಿ, ಹಾಸನ್, ಬ್ಯಾಂಕ್ ಸಿಬ್ಬಂದಿಗಳು ಮತ್ತು ಅನೇಕ ಗ್ರಾಹಕರು ಉಪಸ್ಥಿತರಿದ್ದರು.
🍀🌻☘️🌷🌿🎋🌳🌴

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.