Inter State Level Organic Farming Conference
ಸಂತರ ನಡೆ ಸಾವಯವ ಕೃಷಿ ಕಡೆ
ಹುಮನಾಬಾದ್: ಸಂತರ ನಡೆ ಸಾವಯವ ಕೃಷಿ ಕಡೆಗೆ ಎನ್ನುವ ಘೋಷವಾಕ್ಯವನ್ನು ಜಾರಿಗೆ ತರಲು ಅಂತಾರಾಜ್ಯ ಮಟ್ಟದ ಸಾವಯವ ಕೃಷಿ ಸಮಾವೇಶ ದಿ. 12,13 ಜನೆವರಿ 2024 ರಂದು ಕನ್ನೇರಿ ಮಠದಲ್ಲಿ
ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಸಾವಯವ ಕೃಷಿ ಪರಿವಾರದ ರಾಜ್ಯ ನಿರ್ದೇಶಕರಾದ ಸತೀಶ್ ನನ್ನೊರೆ,ಶಿವರುದ್ರಪ್ಪ ತಾಟೆ ತಿಳಿಸಿದ್ದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಠಗಳಲ್ಲಿ ದಾಸೋಹ ವ್ಯವಸ್ಥೆ ಇದೆ. ಆ ದಾಸೋಹದಲ್ಲಿ ಸಂಪೂರ್ಣವಾಗಿ ಸಾವಯವ ಆಹಾರ ಪದ್ಧತಿ ತರಲು ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲೆಯ ರೈತರು ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಸಮಾವೇಶ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಸಾವಯವ
ಕೃಷಿ ಪರಿವಾರದ ಜಿಲ್ಲಾ ಪ್ರದಾನ ಕಾರ್ಯದರ್ಶಿ
ಸಂಗಮೇಶ ಎನ್ ಜವಾದಿ ಮಾತನಾಡಿ ಸಾವಯವ ಕೃಷಿಯ ಕಡೆಗೆ ಮಠಾಧೀಶರ ಒಲವು ಇರಲಿ, ಈ ಮೂಲಕ ಮಠಾಧೀಶರು ಹೆಚ್ಚಿನ ರೀತಿಯಲ್ಲಿ ಸಾವಯವ ಕೃಷಿಗೆ ಬೆಂಬಲ ನೀಡಬೇಕು. ಸಾವಯವ ಕೃಷಿ ಪದ್ಧತಿ ಸರ್ವರೂ ಅಳವಡಿಸಿಕೊಂಡು ಆರೋಗ್ಯಯುತ ಜೀವನ ಸಾಗಿಸಬೇಕು. ಈ ಸಾವಯವ ಕೃಷಿ ಸಮಾವೇಶವು ದೇಶಕ್ಕೆ ಮಾದರಿಯಾಗವ ಸಮಾವೇಶ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಿಂದ ಅತಿ ಹೆಚ್ಚಿನ ರೈತ ಬಾಂಧವರು ಭಾಗವಹಿಸಬೇಕೆಂದು ವಿನಂತಿಸಿದರು.
ಜಿಲ್ಲಾ ನಿರ್ದೇಶಕ ಹಣಮಂತರಾವ ಪಾಟೀಲ ಮಾತನಾಡಿ ಸಾವಯವ ದೇಶಿ ಪದ್ಧತಿ ಎಲ್ಲಾ ರೈತರು ಅಳವಡಿಸಿಕೊಂಡು ಮಾದರಿ ರೈತರಿಗಾಗಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ,
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಜಿಲ್ಲಾ ಸಾವಯವ ಕೃಷಿ ಪರಿವಾರದ ಅಧ್ಯಕ್ಷರು ಗುರುಲಿಂಗಪ್ಪ ಮೆಲದೊಡ್ಡಿ ಸಮಾರಂಭದ ಕುರಿತು ಮಾತನಾಡಿದರು.
ಈ ಸುದ್ದಿ ಗೋಷ್ಠಿಯಲ್ಲಿ ಸಾವಯವ ಕೃಷಿ ಪರಿವಾರದ ಪದಾಧಿಕಾರಿಗಳಾದ ಸಿದ್ದಣ್ಣಾ ಗಡವಂತಿ, ಪ್ರಭುರಾವ ಪಾಟೀಲ, ಕಲ್ಯಾಣರಾವ ಮದರಗಾಂವ,ರಾಮಣ್ಣ ಚೀನಕೇನ, ಶಿವಕುಮಾರ ಹುಣಚಗೇರಾ,
ಕಂಠಯ್ಯಾ ಸ್ವಾಮಿ, ಸತೀಶ ಮುಸ್ತಾಪೂರೆ,ರವಿ ನಿಂಗಣ್ಣಿ, ಸುಮಂತ್ ಬೀದರ,
ನರಸಿಂಗ್, ರಾಜಶೇಖರ ಬಸವಕಲ್ಯಾಣ, ಅನಿಲಕುಮಾರ ತಾಂಬೊಲೆ, ರವೀಂದ್ರ ಸಂಭಾಜಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಹಾಜರಿದ್ದರು.