Electronic Voting Awareness Program
ತಿಪಟೂರು : ಕಿಬ್ಬನಹಳ್ಳಿ ಹೋಬಳಿ, ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ, ಭಾರತ ಚುನಾವಣಾ ಆಯೋಗ ಮತ್ತು ತುಮಕೂರು ಜಿಲ್ಲಾಡಳಿತ ಹಾಗೂ ತಿಪಟೂರು SVEEP ಸಮಿತಿ ವತಿಯಿಂದ 2024ನೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿದ್ಯುನ್ಮಾನ ಮತ ಯಂತ್ರ ಗಳ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮತದಾರರಿಗೆ ಒಂದು ದಿನದ ತರಬೇತಿ ಹಾಗು ಪ್ರಾತ್ಯಕ್ಷಿಕೆಯನ್ನು ವಿವಿ ಪ್ಯಾಟ್ ಸತ್ಯದ ಕೈಗನ್ನಡಿ ಯಾಗಿ ಯಂತ್ರಗಳು ಕಾರ್ಯನಿರ್ವಹಿಸುವುದನ್ನು ಬಿಳಿಗೆರೆ ಗ್ರಾ ಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದಶರಥ್ ರವರು ಸಂಪೂರ್ಣ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕುಪ್ಪಾಳು ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಸನ್ನಾತ್ಮ ಕಾರ್ಯದರ್ಶಿ ಬಸವಯ್ಯ, ರೈತಕವಿ ಡಾ.ಪಿ ಶಂಕ್ರಪ್ಪ ಬಳ್ಳೇಕಟ್ಟೆ, ಬಿಲ್ ಕಲೆಕ್ಟರ್ ಮಹಾಲಿಂಗಯ್ಯ ,ನೀರು ವಿತರಕ ಚಂದ್ರಶೇಖರ್ ಹಾಗೂ ಕುಪ್ಪಾಳು ಗ್ರಾಮಸ್ಥರು ಉಪಸ್ಥಿತರಿದ್ದರು.