At Krishnapura Anganwadi Center, parents walk towards the Anganwadi
ಗಂಗಾವತಿ: ಶಾಲಾಪೂರ್ವ ಕಾರ್ಯಚಟುವಟಿಕೆಗಳ ಮೂಲಕ ಶಿಶುಗಳನ್ನು ಪ್ರಾಥಮಿಕ ಶಾಲಾ ಹಂತಕ್ಕೆ ಹೋಗಲು ಅಂಗನವಾಡಿ ಕೇಂದ್ರಗಳು ಸಿದ್ಧಗೊಳಿಸುತ್ತವೆ. ಮಕ್ಕಳ ದೈಹಿಕ, ಮಾನಸೀಕ ಆರೋಗ್ಯಕ್ಕೆ ಸರಕಾರ ಅಂಗನವಾಡಿಗಳ ಮೂಲಕ ಅನೇಕ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಪೋಷಕರ ನಡೆ ಅಂಗನವಾಡಿ ಕಡೆ ಎನ್ನುವ ಕಾರ್ಯಕ್ರಮದ ಮೂಲಕ ಅಂಗನವಾಡಿ ಕಾರ್ಯಗಳನ್ನು ಪೋಷಕರಿಗೆ ತಿಳಿಸಲಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆ ಕವಿತಾ ಡೊಳ್ಳಿನ್ ಹೇಳಿದರು.
ಅವರು ತಾಲೂಕಿನ ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೋಷಕರು ಮಕ್ಕಳು ಮತ್ತು ಗರ್ಭಿಣಿ, ಬಾಣಂತಿಯರಲ್ಲಿ ಪೌಷ್ಠಿಕತೆ ಕೊರತೆಯಾಗದಂತೆ ಎಚರಿಕೆ ವಹಿಸಬೇಕು. ಆರೋಗ್ಯ ತಪಾಸಣೆ ಹಾಗೂ ಅಂಗನವಾಡಿಗಳಲ್ಲಿ ಕೊಡುವ ಆಹಾರ ಸೇವನೆ ಮೂಲಕ ದೈಹಿಕ ಆರೋಗ್ಯ ಆರೋಗ್ಯ ಕಾಪಾಡಿಕೊಳ್ಳಬೇಕು. ಸರಕಾರದ ಯೋಜನೆಗಳನ್ನು ಸದುಪಯೋಗದ ಮೂಲಕ ಮಕ್ಕಳನ್ನು ಆರೋಗ್ಯವಂತರು. ಶಿಕ್ಷಣವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ರಂಜಿತಾ ತಾಯಂದಿರಾದ ಚಂದ್ರಿಕಾ, ವೆಂಕಟಲಕ್ಷಿö್ಮ, ಹನುಮಮ್ಮ ಸಹಾಯಕಿ ಹೊಳಿಯಮ್ಮ ಸೇರಿ ಅನೇಕರಿದ್ದರು.