Farmers Cooperative Development Panel is sure of victory:- Vinayak Bagadi and Praveen Naika Bisham
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಚುನಾವಣೆಯ ಪ್ರಚಾರ ಭರ್ಜರಿ ಸಾಗಿದ್ದು ಎಲ್ಲ ಕಡೆ ಜನ ಬೆಂಬಲವಿದೆ ನಮ್ಮ ಗೆಲವು ಖಚಿತ ರೈತ ಸಹಕಾರ ವಿಕಾಸ ಪ್ಯಾನಲ್ ಅಧಿಕಾರ ಹಿಡಿಯುವುದು ಖಚಿತ ಎಂದು ಪ್ಯಾನಲ್ ಮುಖಂಡ ವಿನಾಯಕ್ ಬಾಗಡಿ ಹಾಗೂ ಪ್ರವೀಣ ನಾಯಿಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮದಭಾವಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಅಭ್ಯರ್ಥಿಗಳ ಪ್ರಚಾರ ಬ್ಯಾಲೆಟ್ ಪತ್ರಿಕೆ ಪೂಜೆ ನೆರವೇರಿಸಿ ಮತದಾರ ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಗವಾಡ ಮತಕ್ಷೇತ್ರದ ಶಾಸಕರಾದ ರಾಜು ಕಾಗೆ ಅಥಣಿ ಮತಕ್ಷೇತ್ರದ ಲಕ್ಷ್ಮಣ ಸವದಿ ಇಬ್ಬರು ಶಾಸಕರು ಅಭಿವೃದ್ಧಿ ಮಾಡಿದ್ದಾರೆ ಜನರ ಬೆಂಬಲ ನಿಂತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರಿಗಾಗಿ ಹಲವಾರು ಯೋಜನೆಗಳನ್ನು ತಂದು ರೈತರ ಕೈ ಬಲ ಪಡಿಸಿದ್ದಾರೆ.
ಮೊದಲನೇ ಸುತ್ತಿನ ಪ್ರಚಾರಕ್ಕೆ ಅಪಾರ ಜನ ಬೆಂಬಲ ವ್ಯಕ್ತ ವಾಗಿದೆ ಚುನಾವಣೆ ಡಿಸೇಂಬರ್ 24 ರಂದು ನಡೆಯಲಿದ್ದು ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿಗಳಾದ ಅರ್ಜುನ ಇಬ್ರಾಹಿಂ ಪೂರ (ಬ್ಯಾಟರಿ), ಅಶೋಕ ಪೂಜಾರಿ (ಟೆಲಿಫೋನ್), ನಿಜಗುಣಿ ಮಗದುಮ್ಮ (ಆಟೋ ರಿಕ್ಷಾ ), ಭೀಮಗೌಡ ನಾಯಿಕ (ಕಪ್ಪ ಬಸಿ ), ಭೀಮು ಚೌಗಲಾ (ದ್ರಾಕ್ಷಿ ), ಪ್ರಮೀಳಾ ಮೆಂಡಿಗೇರಿ (ಆಟೋ ರಿಕ್ಷಾ ), ಭಾಗ್ಯಶ್ರೀ ಸೂರ್ಯವಂಶಿ (ದ್ರಾಕ್ಷಿ), ಮಲ್ಲಪ್ಪಾ ಅಪ್ಪರಾಯ ದೇವಕತ್ತೆ/ಐನಾಪುರೆ (ಆಟೋ ರಿಕ್ಷಾ ),ಮನೋಹರ ಪೂಜಾರಿ (ಆಟೋ ರಿಕ್ಷಾ), ವಿಠ್ಠಲ ಅವಳೆ (ಆಟೋ ರಿಕ್ಷಾ ), ಸಿದರಾಯ ಪತಂಗಿ (ಆಟೋ ರಿಕ್ಷಾ), ಅಣ್ಣಪ್ಪಾ ನಿವಲಗಿ (ಆಟೋ ರಿಕ್ಷಾ ) ಚಿನ್ಹೆ ಪಡೆದು ಕಣದಲ್ಲಿದ್ದಾರೆ ಒಬ್ಬ ಮತದಾರ 11 ಜನರಿಗೆ ಮತ ಚಲಾಯಿಸಬೇಕು ಎಂದು ಮನವರಿಕೆ ಮಾಡಿದರು.
ಬಾಬು ಮೆಂಡಿಗೇರಿ, ಸಿದರಾಯ ತೋಡಕರ, ಕಾಮಗೌಡ ಪಾಟೀಲ ಅಸಲಾಂ ಮುಲ್ಲಾ, ಅಶೋಕ ಸೂರ್ಯವಂಶಿ, ಸಂಜಯ ಅಡಾಟೆ, ಪ್ರವೀಣ ಭಂಡಾರೆ, ತಾತ್ಯಾಸಾಬ ನಾಯಿಕ, ಶಿವಾನಂದ ಮಗದುಮ್ಮ, ಸೋಮಲಿಂಗ ಮಗದುಮ್ಮ, ಉದಯ ಪವಾರ, ಅಪ್ಪು ಚೌಗಲಾ,ಸಂತೋಷ ನಾಯಿಕ, ಅಶೋಕ ಪಾಟೀಲ, ಗಿರಮಲ್ಲ ಇಬ್ರಾಹಿಂಪೂರ,ಪರಗೊಂಡ ಮುದೋಳ,ಅಣ್ಣಪ್ಪಾ ಪಾಟೀಲ, ಸತ್ಯಪ್ಪ ಕೆಂಪವಾಡೆ, ಬಸ್ಸು ಮಗದುಮ್ಮ,ಸಿದರಾಯ ಕಾಳೇಲಿ, ಸುನೀಲ ಮಾನೆ, ಆದರ್ಶ ಪವಾರ,ವಿಜಯ ಭಂಡಾರೆ, ಲಕ್ಷ್ಮಣ ಅವಳೆ,ರಾವಸಾಬ ಮುದೋಳ ಸೇರಿದಂತೆ ಮುಂತಾದ ಉಪಸ್ಥಿತರಿದ್ದರು