Free health screening program for lawyers

ಗಂಗಾವತಿ: ಕೇವಾ ಆಯುರ್ವೇದ ಕಂಪನಿ ಮತ್ತು ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಇವುಗಳ ಸಂಯುಕ್ತ ಅಶ್ರಯದಲ್ಲಿ ಸೋಮವಾರ ಮತ್ತು ಮಂಗಳವಾರ ಗಂಗಾವತಿ ನಗರದ ವಕೀಲರ ಸಂಘದ ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
ಹೆಲ್ತ್ ಅನಲೈಜರ್ ಯಂತ್ರದ ಮೂಲಕ ಆರೋಗ್ಯ ತಪಾಸಣೆ ನಡೆಸಲಾಯಿತು.ಈ ಸಂಧರ್ಭದಲ್ಲಿ ಅನೇಕ ವಕೀಲರು ತಮ್ಮ ಆರೋಗ್ಯದ ತಪಾಸಣೆಗೆ ಒಳಗಾದರು.ಕೇವಾ ಆಯುರ್ವೇದ ಕಂಪನಿಯ ನಿರ್ದೇಶಕರಾದ ವಿಜಯ ಕುಮಾರ್, ಅಜಯ ಕುಮಾರ್ ಆರೋಗ್ಯ ತಪಾಸಣೆ ನಡೆಸಿದರು.
ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ನ್ಯಾಯವಾದಿ ಅಶೋಕಸ್ವಾಮಿ ಹೇರೂರ ಇತರರು ಉಪಸ್ಥಿತರಿದ್ದರು.ಔಷಧ ವ್ಯಾಪಾರಿಗಳಾದ ಸಿ.ಚಿದಾನಂದ, ಸುರೇಶ ಡಣಾಪೂರ ಮತ್ತು ಮಲ್ಲಯ್ಯ ಹೇರೂರ ಹಾಜರಿದ್ದರು.