North Karnataka Theater and Silver Screen Minister Shivraj Thangadigi
ಗಂಗಾವತಿ 18 ರಂಗಭೂಮಿ ಸೇರಿದಂತೆ ಬೆಳ್ಳಿತೆರೆಗೆ ಉತ್ತರ ಕರ್ನಾಟಕದ ಭಾಗದ ಜನತೆಯ ಕೊಡುಗೆ ಅನನ್ಯವಾಗಿದ್ದು ಬಹುತೇಕ ಈ ಭಾಗವು ಹೆಬ್ಬಾಗಿಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಕಲ್ಯಾಣ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಿಗಿ ಅಭಿಪ್ರಾಯಪಟ್ಟರು ಅವರು ರವಿವಾರದಂದು ಜಗಜೀವನ್ ರಾವ್ ಸರ್ಕಲ್ ವೃತ್ತದ ಬಳಿ ಶ್ರೀ ಮಾತಾ ಕಂಬೈನ್ಸ್ ಆಯೋಜಿಸಿದ ಸತ್ಯಂ ಕನ್ನಡ ಚಲನಚಿತ್ರದ ಧ್ವನಿ ಸುರುಳಿಯನ್ನು ಹಾಗೂ ಟೀಸರ್ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದರು ಉತ್ತರ ಕರ್ನಾಟಕ ಹಲವು ದಶಕಗಳಿಂದ ಅದಂಗಭೂಮಿಗೆ ಸುಮಾರು 120ಕ್ಕೂ ಅಧಿಕ ನಾಟಕ ಕಂಪನಿಗಳ ಮೂಲಕ ರಂಗ ಕಲಿಯಲು ಜೀವಂತವಾಗಿ ಉಳಿಸುವಲ್ಲಿ ಶ್ರಮಿಸುತ್ತಾ ಬರಲಾಗಿದೆ ಬಹುತೇಕ ಈ ಭಾಗದ ಹಲವು ಕಲಾವಿದರು ಬೆಳ್ಳಿತೆರೆಯಲ್ಲಿ ಅದ್ಭುತ ಸಾಧನೆಗೈದಿದ್ದು ನಾವು ಕಾಣಬಹುದಾಗಿದೆ ಈ ಹಿನ್ನೆಲೆಯಲ್ಲಿ ಈ ಭಾಗದವರೇ ಆದ ಮಹಾಂತೇಶ್ ವಿಕೆ ನಿರ್ಮಾಣದಲ್ಲಿ ಸತ್ಯಂ ಕನ್ನಡ ಚಿತ್ರ ಬೆಳ್ಳಿತರಿಗೆ ಆಗಮಿಸಲಿದ್ದು ಶತದಿನೋತ್ಸವ ಆಚರಿಸಲಿ ಕನ್ನಡ ಚಿತ್ರವನ್ನು ಪ್ರತಿಯೊಬ್ಬರು ಚಿತ್ರಮಂದಿರಿಗೆ ಹೋಗಿ ವೀಕ್ಷಣೆ ಮಾಡುವುದರ ಮೂಲಕ ಚಿತ್ರರಂಗದ ಅಭಿವೃದ್ಧಿಗೆ ಮುಂದಾಗುವಂತೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಸಮಾಜ ಸೇವಕ ಎಸ್ ಆರ್ ನವಲಿ ಹಿರೇಮಠ ಉಳಿಸಿ ಮಾತನಾಡಿ ಮೂಲತಃ ಶಿವರಾಜ್ ತಂಗಡಿ ಅವರು ನಮ್ಮ ಗ್ರಾಮದವರಿಗೆ ಅವರಿಗೆ ಅದೃಷ್ಟದ ಲಕ್ಷ್ಮಿ ಒಲಿದು ಬಂದಿದ್ದಾಳೆ ಸರಕಾರ ರಚನೆ ಹೇಗೆ ಮಾಡಬೇಕು ಯಾವ ಸಂದರ್ಭದಲ್ಲಿ ಸರ್ಕಾರ ಉಳಿಸಬೇಕೆಂಬ ಚಾಣಾಕ್ಷತ ಬುದ್ಧಿವಂತಿಕೆ ಹೊಂದಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಿಗೆ ಅವರ ರಾಜಕೀಯ ನಡೆ ಕುರಿತು ಮಾತನಾಡಿದರು ದಿವ್ಯ ಸಾನಿಧ್ಯವನ್ನು ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರು ವಹಿಸಿದ್ದರು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾಜಿ ಸಂಸದ ಶಿವರಾಂ ಗೌಡ್ರು ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಲ್ಲಿಕಾರ್ಜುನ್ ನಾಗಪ್ಪ ರಾಘವೇಂದ್ರ ಶೆಟ್ಟಿ ಅಶೋಕ್ ಸ್ವಾಮಿ ವಕೀಲರು ಎಚ್ ಎಮ್ ಸಿದ್ರಾಮಯ್ಯ ಸ್ವಾಮಿ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ನಾಯಕ ನಟ ಸಂತೋಷ್ ಬಾಲ್ರಾಜ್ ನಟಿ ರಂಜಿನಿ ರಾಘವನ್ ನಿರ್ದೇಶಕ ಅಶೋಕ್ ಕಡಬ ಇತರರು ಉಪಸ್ಥಿತರಿದ್ದರು ಎಂಕೆ ಮೇಲೋಡಿಸ್ ಕೊಪ್ಪಳ ಅವರಿಂದ ಸಂಗೀತ ಮಿಮಿಕ್ರಿ ಹಾಸ್ಯ ಕಾರ್ಯಕ್ರಮ ಜರುಗಿದವು