Over 300 hearing aid screening programs

ಗಂಗಾವತಿ.16 ಗಂಗಾವತಿ ಉಪವಿಭಾಗ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಲ್ಲಿ ರಾಷ್ಟ್ರೀಯ ಶ್ರವಣ ದೋಷ ನಿವಾರಣೆ ಮತ್ತು ನಿಯಂತ್ರಣ ಕಾರ್ಯಕ್ರಮ ನಡೆಯಿತು.
ಗಂಗಾವತಿ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಶಿ.ಸವಡಿ,ಕಿವಿ ಮೂಗು ತಜ್ಞರಾದ ಡಾ.ಅಭಿನಾಶ್ 300 ಕ್ಕೂ ಹೆಚ್ಚು ಕಿವಿಗೆ ಸಂಬಂಧಿಸಿದ ದೋಷದ ಬಗ್ಗೆ ಪರೀಕ್ಷಿಸಿ ಚಿಕಿತ್ಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪವಿಭಾಗ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಸವಡಿ ಅವರು ಗಂಗಾವತಿ ತಾಲೂಕು ಆದ್ಯಂತ ಸುಮಾರು 300 ಕ್ಕೂ ಹೆಚ್ಚು ಶ್ರವಷ ದೋಷದ ರೋಗಿಗಳು ಬಂದು ಚಿಕಿತ್ಸೆಯನ್ನು ಪಡದಿದ್ದಾರೆ,ಕಿವಿ ಮೂಗು ತಜ್ಞರಾದ ಡಾ.ಅಭಿನಾಶ್ ಇವರ ಸಲಹೆಯನ್ನು ಪಡೆದುಕೊಂಡ ನಿಮ್ಮ ಕವಿಯ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು.
ಉದ್ಘಾಟಿಸಿ ಮಾತನಾಡಿದ ಡಾ.ಅಭಿನಾಶ ಒಬ್ಬ ವ್ಯಕ್ತಿಯಾಗಿ ಕಾಳಜಿವಹಿಸಬೇಕಾದ ಕೆಲವು ಲಕ್ಷಣಗಳು ಅಳವಡಿಸಿಕೊಳ್ಳಬೇಕಾದ ಯಾವುದೇ ವಸ್ತುವನ್ನು ಕಿವಿಯೊಳಗೆ ಹಾಕಬಾರದು ಗದ್ದಲದ ಸ್ಥಳಗಳಲ್ಲಿ ಕವಿಕವಚವನ್ನು ಬಳಸಬೇಕು ಕಿವಿಯಲ್ಲಿ ತೊಂದರೆ ಕಂಡುಬಂದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ನೀವು ತೆಗೆದುಕೊಳ್ಳುವ ಔಷಧಿಗಳು ನಮ್ಮ ಕಿವಿಯ ಮೇಲೆ ಪರಿಣಾಮ ಬೀಳುವುದೇ ಎಂದು ವೈದ್ಯರಿಂದ ತಿಳಿದುಕೊಳ್ಳಿ ಹಾಗೂ ನೀವು ಕಿವಿಯ ಪರೀಕ್ಷೆಯನ್ನು ನಿಯತವಾಗಿ ಚಿಕಿತ್ಸೆಯನ್ನು ಮಾಡಿಸಿಕೊಳ್ಳಿ ವೈದ್ಯರು ಸೂಚಿಸಿದ ಶ್ರವಣಯಂತ್ರಗಳನ್ನೇ ಬಳಸಬೇಕೆಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಗೌರಿಶಂಕರ್,ಡಾ.ರವಿದ್ರಾನಾಥ,ಡಾ.ಪದ್ಮ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯ ಪ್ರಸಾದ್,ಡಾ.ರಾಧಿಕಾ,ಮಲೇರಿಯಾ ಲಿಂಕ ವರ್ಕರ,ಸುರೇಶ ಹೆಚ್,ರಮೇಶ ಹಾಲಮನಿ,ಸಿಬ್ಬಂದಿಗಳಾದ ಕೆ.ಹನುಮೇಶ,ಗುರುಪ್ರಸಾದ್,ಸೇರಿದಂತೆ ಇತರರು ಇದ್ದರು
Kalyanasiri Kannada News Live 24×7 | News Karnataka
