20,36,465/- collected in Undi of Sri Anjaneyadevastha at Anjanadri hill.
ಗಂಗಾವತಿ,14: ಆನೆಗುಂದಿ (ಚಿಕ್ಕರಾಂಪುರ) ಅಂಜನಾದ್ರಿ ಬೆಟ್ಟ ದ ಶ್ರೀ ಆಂಜನೇಯ ದೇವಸ್ಥಾನ
ಇಂದು ದಿ. 14/12/2023 ರಂದು ಮಾನ್ಯ ಶ್ರೀ ವಿಶ್ವನಾಥ ಮೂರಡಿ ಗ್ರೇಡ್ -1 ತಹಶೀಲ್ದಾರರು ಗಂಗಾವತಿ ಇವರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ. 04-11-2023 ರಿಂದ 14-12-2023 ರವರೆಗೆ ಒಟ್ಟು 41 ದಿನಗಳ ಅವಧಿಯಲ್ಲಿ) ಒಟ್ಟು ರೂ.20,36,465/- ರೂ ಗಳು ಸಂಗ್ರಹವಾಗಿರುತ್ತದೆ. ಒಂದು ವಿದೇಶಿ ನೋಟು (ನೇಪಾಳ) ಮತ್ತು ಐದು ವಿದೇಶಿ ನಾಣ್ಯ ಹುಂಡಿಯಲ್ಲಿ ಸಂಗ್ರಹವಾಗಿರುತ್ತದೆ.
ಈ ಸಂದರ್ಭದಲ್ಲಿ ಮಹಾಂತಗೌಡ ಗೌಡರ ಗ್ರೇಡ್-2 ತಹಶೀಲ್ದಾರರು, ಶಿರಸ್ತೇದಾರಾದ ರವಿಕುಮಾರ ನಾಯಕವಾಡಿ,
ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್ ,ಮಹೇಶ್ ದಲಾಲ, ಹಾಲೇಶ್, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ ,ಮಂಜುನಾಥ , ಸುಧಾ, ಶ್ರಿರಾಮ ಜೋಷಿ ದ್ವಿ.ದ.ಸ, ಹನುಮೇಶ ಪೂಜಾರ ಗ್ರಾಮ ಆಡಳಿತ ಅಧಿಕಾರಿ,ಮತ್ತು ಗಂಗಾವತಿ,ವೆಂಕಟಗಿರಿ ,ಮರಳಿ ಗ್ರಾಮ ಆಡಳಿತ ಅಧಿಕಾರಿಗಳು , ಗ್ರಾಮ ಸಹಾಯಕರು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಸುನಿಲ್ , ರಾಜಶೇಖರ್, ಪೋಲಿಸ್ ಸಿಬ್ಬಂದಿ , ಹಾಗೂ ಹರಿಶ್ರಿನಿವಾಸ ಮಹಿಳಾ ಸೇವಾ ಮಂಡಳಿ ಪಗಡದಿನ್ನಿ ಕ್ಯಾಂಪ್, ಮತ್ತು ಪ್ರವಾಸಿ ಮಿತ್ರ ಹನುಮಂತಪ್ಪ, ಬೇನಾಳಪ್ಪ ಸಿಬ್ಬಂದಿಗಳು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಹಾಜರಿದ್ದರು.
ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು
ಕಳೆದ ಬಾರಿ ದಿ .03/11/2023 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ ರೂ.27,16,086./- ಸಂಗ್ರಹವಾಗಿತ್ತು.