Urge to start Indira canteen near bus stand : Yamanur Bhatt
ಗಂಗಾವತಿ: ನಗರವು ಅಭಿವೃದ್ಧಿಯಲ್ಲಿ ಮುನ್ನಡೆಯನ್ನು ಸಾಧಿಸುತ್ತಿದ್ದು, ಅದೇರೀತಿ ನಗರದ ಜನಸಂಖ್ಯೆ ಹೆಚ್ಚುತ್ತಿರುವುದಲ್ಲದೇ ನಗರಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ನಗರದ ಬಸ್ ನಿಲ್ದಾಣದ ಹತ್ತಿರವಿರುವ ನೆಹರುಪಾರ್ಕ್ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಪೌರಾಯುಕ್ತರಿಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಪೌರಾಯುಕ್ತರಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು, ಗಂಗಾವತಿ ನಗರ ಪ್ರದೇಶದ ಬಡವರು ಹಾಗೂ ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ ಉಪಹಾರ ಒದಗಿಸುವ ಉದ್ದೇಶದಿಂದ ಮಾನ್ಯ ಶ್ರೀ ಸಿದ್ದರಾಮಯ್ಯನವರು ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಚಾಲನೆ ನೀಡಿದ್ದು, ಈ ಬಾರಿಯ ಬಜೆಟ್ ನಲ್ಲಿ 100 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಗಂಗಾವತಿ ನಗರದ ಗುಂಡಮ್ಮಕ್ಯಾಂಪ್‌ನಲ್ಲಿ ಈಗಾಗಲೇ ಇಂದಿರಾ ಕ್ಯಾಂಟೀನ್ ಇದ್ದು, ಆದರೆ ಸದರಿ ಇಂದಿರಾ ಕ್ಯಾಂಟೀನ್ ಇರುವ ಪ್ರದೇಶವು ಜನಜಂಗುಳಿಯಿಂದ ಕೂಡಿರುವುದಿಲ್ಲ ಹಾಗೂ ಬಡವರಿಗೆ ಹಾಗೂ ಶ್ರಮಿಕರಿಗೆ ಅಷ್ಟೊಂದು ಉಪಯುಕ್ತವಾಗಿರುವುದಿಲ್ಲ. ಆದ್ದರಿಂದ ಸದರಿ ಇಂದಿರಾ ಕ್ಯಾಂಟೀನ್ ಜೊತೆಗೆ ಇನ್ನೂ ಎರಡು ಇಂದಿರಾ ಕ್ಯಾಂಟೀನ್ಗಳನ್ನು ಪ್ರಾರಂಭಿಸಿದಲ್ಲಿ ನಗರದ ಕೂಲಿಕಾರ್ಮಿಕರಿಗೆ, ಬಡವರಿಗೆ ಹಾಗೂ ಶ್ರಮಿಕರಿಗೆ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟವನ್ನು ನೀಡಿದಂತಾಗುತ್ತದೆ. ಬಸ್ ನಿಲ್ದಾಣದ ಸುತ್ತಮುತ್ತ ಇಂದಿರಾ ಕ್ಯಾಂಟೀನ್ ಸ್ಥಾಪಿಸಿದಲ್ಲಿ ನಗರಕ್ಕೆ ಬರುವ ಕೂಲಿಕಾರ್ಮಿಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪ್ರವಾಸಿಗರಿಗೆ ಅನುಕೂಲವಾಗಲಿದೆ. ಪ್ರಸ್ತುತ ಬಸ್ ನಿಲ್ದಾಣದ ಹತ್ತಿರ ಇರುವ ಹೋಟಲ್‌ಗಳಲ್ಲಿ ದುಬಾರಿ ಹಣ ಪಾವತಿಸಿ ಉಪಹಾರ ಹಾಗೂ ಊಟ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ತುಂಬಾ ಆರ್ಥಿಕ ನಷ್ಟವುಂಟಾಗುತ್ತಿದೆ. ಕೂಡಲೇ ಯಾವುದೇ ಒತ್ತಡಕ್ಕೆ ಹಾಗೂ ರಾಜಕೀಯಕ್ಕೆ ಮಣಿಯದೇ ಬಸ್ ನಿಲ್ದಾಣದ ಹತ್ತಿರ ಇಂದಿರಾ ಕ್ಯಾಂಟೀನ್ ಸ್ಥಾಪಿಸಬೇಕೆಂದು ಕರವೇ ಶಿವರಾಮೇಗೌಡ್ರು ಬಣದಿಂದ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಪವನ್ ಕುಮಾರ್ ಗಡ್ಡಿ, ನಗರ ಘಟಕ ಅಧ್ಯಕ್ಷರಾದ ಹನುಮೇಶ್ ಕುರುಬರು, ಉಪಾಧ್ಯಕ್ಷರಾದ ಅಂಬಾಸ್, ತಾಲೂಕು ಯುವ ಘಟಕ ಅಧ್ಯಕ್ಷರಾದ ಸುನಿಲ್ ಕುಮಾರ್ ಕುಲಕರ್ಣಿ, ತಾಲೂಕು ಯುವ ಘಟಕದ ಉಪಾಧ್ಯಕ್ಷರಾದ ಹನುಮೇಶ್ ಚಲವಾದಿ, ತಾಲೂಕು ಸಂಚಾಲಕರಾದ ಸುರೇಶ್ ಚನ್ನಳ್ಳಿ, ತಾಲೂಕು ಉಪಾಧ್ಯಕ್ಷರಾದ ನಹೀಮ್ ಪಾಷಾ, ರಮೇಶ ಕುಮಾರ, ತಾಲೂಕು ಕಾರ್ಯದರ್ಶಿ ಹುಲುಗಪ್ಪ ಹಾರೆಗಾರ, ಮುತ್ತುರಾಜ್ ಕುಷ್ಟಗಿ, ನಯೂಮ್ ಪಾಷಾ, ಬಸವರಾಜ್ ಬೀದಿಬಾವಿ, ಆನಂದ ರಮೇಶ್ ಕುಂಬಾರ್, ಮೊಹಮ್ಮದ್ ಗೌಸ್, ನಾಗರಾಜ ಚಲುವಾದಿ, ಅನಿಲ್ ಕುಮಾರ್. ನಿಂಗಪ್ಪ ಹೊಸಳ್ಳಿ, ವಿಜಯಕುಮಾರ ಸಮಗಾರ ಹಾಗೂ ರಕ್ಷಣಾ ವೇದಿಕೆಯ ಇನ್ನಿತರ ಪದಾಧಿಕಾರಿಗಳು ಭಾಗಿಯಾಗಿದ್ದರು.