S. K. N. World AIDS Day Program at G Govt First Class College
ಗಂಗಾವತಿ: ಎಸ್. ಕೆ. ಎನ್. ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿಯ ರೆಡ್ ರಿಬ್ಬನ್ ಕ್ಲಬ್ ಮತ್ತು ಎನ್ಎಸ್ಎಸ್ ಹಾಗೂ ಕಾಲೇಜಿನ ಆಂತರಿಕ ಭರವಸೆ ಕೋಶ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿ ಮತ್ತು ಉದ್ಘಾಟಕರಾಗಿ ಆಗಮಿಸಿದ ಶಿವಾನಂದ ನಾಯಕ ಆಪ್ತ ಸಮಾಲೋಚಕರು ಉಪ ವಿಭಾಗ ಆಸ್ಪತ್ರೆ, ಗಂಗಾವತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಚರಣೆ ತೊರಿಕೆಯಾಗದೆ ಅದರ ವಿಶ್ವ ಏಡ್ಸ್ ದಿನದ ಮೂಲ ಉದ್ದೇಶ ಹಾಗೂ ಕಾರ್ಯಕ್ರಮ ಪರಿಚಯದಂತೆ ಮುನ್ನೆಡೆಯಬೇಕು ಮತ್ತು ಸರ್ಕಾರದ ಯೋಜನೆಗೆ ಸಂಬಂಧಿಸಿದಂತೆ ಏಡ್ಸ್ ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎನ್ನುವ ಕನಸನ್ನು ವಿದ್ಯಾರ್ಥಿಗಳು ಕೈಗೊಳ್ಳಬೇಕು ಎಂದು ತಮ್ಮ ಉದ್ಘಾಟಣ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಜಾಜಿ ದೇವೇಂದ್ರಪ್ಪ ರವರು ತಮ್ಮ ಅಧ್ಯಕ್ಷತೆ ನುಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಏಡ್ಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಕನಸನ್ನು ನನಸು ಮಾಡಲು ಪ್ರತಿಜ್ಞ ವಿಧಿಯೊಂದಿಗೆ ಆರೋಗ್ಯದ ಸ್ಥಿತಿಯನ್ನು ಎಲ್ಲರೂ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಕಾಲೇಜಿನ ಹಿರಿಯ ಪ್ರಾದ್ಯಪಕರಾದ ಶ್ರೀಮತಿ ಜಗದೇವಿ ಕಲಶೆಟ್ಟಿ ರವರ ಪ್ರಾಸ್ತಾವಿಕ ನುಡಿಯಲ್ಲಿ ವಿಶ್ವ ಏಡ್ಸ್ ದಿನದ ಮೂಲ ಉದ್ದೇಶ ಮತ್ತು ಇತಿಹಾಸವನ್ನು ಪರಿಚಯಿಸಿದರು. ವೇದಿಕೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ.ವೈ.ಎಸ್,ವಗ್ಗಿ ಆಂತರಿಕ ಭರವಸೆ ಕೋಶ ಸಂಚಾಲಕರು ತಮ್ಮ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ ತಮ್ಮ ಪದವಿಯನ್ನು ಮುಗಿಸಬೇಕು ಎಂದು ವಿದ್ಯಾರ್ಥಿಗಳ ಜೀವನ ಯಶಸ್ವಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಡಾ. ರವಿಕಿರಣ್ ಎನ್ಎಸ್ಎಸ್ ಘಟಕದ ಸಂಯೋಜಕರು ವಂದನಾರ್ಪಣೆ ಮಾಡಿದರು.ವಿದ್ಯಾರ್ಥಿನಿ ಪುಷ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಡಾ. ಸೆಲ್ವರಾಜ್ ಸಿ, ಶ್ರೀ ಶಿವಕುಮಾರ, ಇತರ ಪ್ರಾದ್ಯಾಪಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.