Breaking News

ಮಣ್ಣಿನರಕ್ಷಣೆನಮ್ಮೆಲ್ಲರಹೊಣೆಯಾಗಿದೆ : ಪ್ರೊ|| ಥಿಯೋಡರ್ ಲೂಥರ್

Protection of soil is our responsibility : Prof Theodore Luther

ಜಾಹೀರಾತು


ಚಾಮರಾಜನಗರ: ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ಕುದೇರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಮಣ್ಣಿನ ದಿನ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಸಿ ಮಾತನಾಡಿದ ಅವರು, ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಹೆಚ್ಚಿನ ವರ್ಗಗಳ ಜನ ವ್ಯವಸಾಯವನ್ನೇ ಕುಲಕಸುಬನ್ನಾಗಿಸಿಕೊಂಡಿದ್ದಾರೆ. ಶೇ60% ಕುಟುಂಬಗಳು ಕೃಷಿ ಅವಲಂಬಿತರು. ಇತ್ತೀಚೆಗೆ ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಈ ಪ್ರಮಾಣ ಇಳಿಯುತ್ತಿದೆ. ಸಾಂಪ್ರದಾಯಿಕ ಬೇಸಾಯ ಪದ್ಧತಿಗಳು ಕ್ರಮೇಣ ಬದಿಗೆ ಸರಿಯುತ್ತಿವೆ. ಇಂದು ರಾಸಯನಿಕ ಗೊಬ್ಬರಗಳ ಅತಿಯಾದ ಬಳಕೆ, ಪ್ಲಾಸ್ಟಿಕ್ ಬಳಕೆ ಸೇರಿದಂತೆ ಇತ್ಯಾದಿ ಮಾಲಿನ್ಯದ ಕಾರಣದಿಂದಾಗಿ ಮಣ್ಣಿನ ಫಲವತ್ತತೆಯು ಕ್ಷೀಣಿಸುತ್ತಿದೆ. ಅಷ್ಟು ಮಾತ್ರವಲ್ಲದೆ ಕಾಡುಗಳ ನಾಶದಿಂದಾಗಿ ಪ್ರವಾಹ, ಭಾರಿ ಮಳೆಯ ಸಂದರ್ಭದಲ್ಲಿ ಮಣ್ಣಿನ ಸವೆತವೂ ಹೆಚ್ಚಾಗುತ್ತಿದೆ. ಮಣ್ಣು ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಮಣ್ಣಿನ ಸಂರಕ್ಷಣೆಗೆ ಗಮನ ಕೊಡುವುದು ಮುಖ್ಯ. ಹೀಗಾಗಿ ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅವಶ್ಯಕ ಎಂಬುದನ್ನು ನಾವು ಮನಗಾಣಬೇಕಿದೆ. ಮಣ್ಣಿನ ರಕ್ಷಣೆಯನ್ನು ಪ್ರತಿಯೊಬ್ಬರೂ ಮಾಡ್ಬೇಕು. ಮಣ್ಣಿನ ರಕ್ಷಣೆಯನ್ನು ನಾನಾ ವಿಧಗಳಲ್ಲಿ ಮಾಡಬೇಕಾಗುತ್ತದೆ. ಅರಣ್ಯ ನಾಶವನ್ನು ತಪ್ಪಿಸಬೇಕು. ಗಿಡಗಳನ್ನು ಬೆಳೆಸಲು ವಿಶೇಷ ಒತ್ತು ನೀಡಬೇಕು. ಇಳಿಜಾರಿನ ಭೂಮಿಯಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ಮಣ್ಣಿನ ಸವೆತವನ್ನು ತಡೆಯಬೇಕು, ನಿರ್ಮಾಣ ಮತ್ತು ಗಣಿಗಾರಿಕೆ ಚಟುವಟಿಕೆಗಳಲ್ಲಿ ಮಣ್ಣಿನ ಸವೆತ ತಪ್ಪಿಸಲು ಒತ್ತು ನೀಡಬೇಕು. ಹೊಲಗಳಲ್ಲಿ ಇಳಿಜಾರಿಗೆ ಎದುರಾಗಿ ಉಳುಮೆ ಮಾಡಬೇಕು. ತಾರಸಿ ಕೃಷಿಗೆ ಒತ್ತು ನೀಡಬೇಕು. ಇದು ಮಣ್ಣು ಕೊಚ್ಚಿಕೊಂಡು ಹೋಗುವುದನ್ನು ತಪ್ಪಿಸುತ್ತದೆ. ಮಾಲಿನ್ಯ, ಕಾಡುಗಳ ನಾಶ, ಕೃಷಿಗೆ ಅತಿಯಾದ ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಇಂದು ಮಣ್ಣು ಕ್ಷೀಣಿಸುತ್ತಿದೆ, ಮಣ್ಣಿನ ಸವಕಳಿಯ ಸಮಸ್ಯೆಯೂ ಹೆಚ್ಚುತ್ತಿದೆ. ಹೀಗಿರುವಾಗ ಆಹಾರ ಭದ್ರತೆ ಮತ್ತು ನಮ್ಮ ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಮಣ್ಣಿನ ಸಂರಕ್ಷಣೆಯನ್ನು ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಮಣ್ಣಿನ ಸವೆತವನ್ನು ಕಡಿಮೆ ಮಾಡಲು, ಫಲವತ್ತಾದ ಮಣ್ಣು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಮಾತನಾಡಿ, ಮಣ್ಣು ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಮಣ್ಣಿನ ಸಂರಕ್ಷಣೆಗೆ ಗಮನ ಕೊಡುವುದು ಮುಖ್ಯ. ಇಂದು ರಾಸಯನಿಕ ಗೊಬ್ಬರಗಳ ಅತಿಯಾದ ಬಳಕೆ, ಪ್ಲಾಸ್ಟಿಕ್ ಬಳಕೆ ಸೇರಿದಂತೆ ಇತ್ಯಾದಿ ಮಾಲಿನ್ಯದ ಕಾರಣದಿಂದಾಗಿ ಮಣ್ಣಿನ ಫಲವತ್ತತೆಯು ಕ್ಷೀಣಿಸುತ್ತಿದೆ. ಅಷ್ಟು ಮಾತ್ರವಲ್ಲದೆ ಕಾಡುಗಳ ನಾಶದಿಂದಾಗಿ ಪ್ರವಾಹ, ಭಾರಿ ಮಳೆಯ ಸಂದರ್ಭದಲ್ಲಿ ಮಣ್ಣಿನ ಸವೆತವೂ ಹೆಚ್ಚಾಗುತ್ತಿದೆ. ಹೀಗಾಗಿ ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಧುಸೂದನ, ಮಮತಾ, ಬಸವಣ್ಣ, ಮಹೇಂದ್ರ, ಕವಿತಾ, ಮಲ್ಲಿಕಾರ್ಜುನ, ಬಸವಣ್ಣ ಎಂ, ಭಾಗ್ಯಶ್ರೀ, ಇತರೆ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.