Forced to relocate Gangavati BJP office: Ravikumar Basapatna

ಗಂಗಾವತಿ: ನಗರದ ಭಾಜಪ ಪಕ್ಷದ ಕಾರ್ಯಾಲಯ ಮಾಜಿ ಶಾಸಕರ ಮನೆಯಲ್ಲಿದ್ದು, ಅದನ್ನು ಕೂಡಲೇ ಸ್ಥಳಾಂತರಿಸಬೇಕೆAದು ಪಕ್ಷದ ಜಿಲ್ಲಾ ಓ.ಬಿ.ಸಿ ಮೋರ್ಚಾ ಉಪಾಧ್ಯಕ್ಷರಾದ ರವಿಕುಮಾರ ಬಸಾಪಟ್ಟಣ ಪಕ್ಷದ ಜಿಲ್ಲಾ ವರಿಷ್ಠರಿಗೆ ಒತ್ತಾಯಿಸಿದ್ದಾರೆ.
ಪ್ರಧಾನಮಂತ್ರಿ ಮೋದಿಯವರಿಂದ ದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಜಯಭೇರಿ ಕಾಣುತ್ತಿದೆ. ಆದರೆ ಗಂಗಾವತಿಯಲ್ಲಿ ಮಾತ್ರ ಕೋಮಾ ಸ್ಥಿತಿಗೆ ತಲುಪಿದೆ. ಯಾವುದೇ ಒಂದು ಪಕ್ಷ ಸದೃಢವಾಗಬೇಕಾದರೆ ಅದರ ಕಾರ್ಯಾಲಯ ಒಬ್ಬ ನಾಯಕನಿಗೆ ಸೀಮಿತವಾಗಬಾರದು ಅಥವಾ ಅವರ ಸುಪರ್ಧಿಯಲ್ಲಿರಬಾರದು. ಪಕ್ಷದ ಕಾರ್ಯಾಲಯದಲ್ಲಿ ನಿಷ್ಠಾವಂತ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಇತಿಹಾಸ ಗಮನಿಸಿದರೆ ಗಂಗಾವತಿಯಲ್ಲಿ ಭಾಜಪ ಕಾರ್ಯಾಲಯ ಸ್ವತಂತ್ರವಾಗಿದ್ದಾಗ ಪಕ್ಷ ಚುನಾವಣೆಯಲ್ಲಿ ಜಯಭೇರಿ ಗಳಿಸಿದೆ. ಆದರೆ ಪ್ರಸ್ತುತ ಭಾಜಪ ಕಾರ್ಯಾಲಯ ಮಾಜಿ ಶಾಸಕರ ಮನೆಯಲ್ಲಿರುವುದು ಪಕ್ಷದ ಕೆಲವು ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅಸಮಾಧನವನ್ನುಂಟು ಮಾಡಿದೆ. ಪಕ್ಷದ ಕಾರ್ಯಾಲಯ ಸ್ಥಳಾಂತರ ಕುರಿತು ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರಿಗೆ ಹಾಗೂ ಮುಖಂಡರಿಗೆ ಮನವಿ ಸಲ್ಲಿಸಲಾಗಿದೆ. ಆದ್ದರಿಂದ ಪಕ್ಷದ ಜಿಲ್ಲಾ ವರಿಷ್ಠರು ಕೂಡಲೇ ಗಂಗಾವತಿಯ ಭಾಜಪ ಪಕ್ಷದ ಕಾರ್ಯಾಲಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
Kalyanasiri Kannada News Live 24×7 | News Karnataka
