A stone god is not a god
ಕಲ್ಲು ದೇವರು ದೇವರಲ್ಲ
ಮಣ್ಣು ದೇವರು ದೇವರಲ್ಲ
ಮರದೇವರು ದೇವರಲ್ಲ
ಪಂಚಲೋಹದಿಂದ ಮಾಡಿದ ದೇವರು ದೇವರ ದೇವರಲ್ಲ
ಸೇತು ಬಂದ ರಾಮೇಶ್ವರ ಗೋಕರ್ಣ ಕಾಶಿ ದಾರ ಮೊದಲಾದ ಅಷ್ಟ ಸೃಷ್ಟಿ ಪುಣ್ಯತೀರ್ಥ ಪುಣ್ಯಕ್ಷೇತ್ರದಲ್ಲಿರುವ ದೇವರು ದೇವರಲ್ಲ
ಕಲ್ಲು ದೇವರು ದೇವರಲ್ಲ
ಅನ್ನುವುದನ್ನು 12 ನೆಯ ಶತಮಾನದಲ್ಲಿ ಬಸವಣ್ಣನವರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ನಮ್ಮ ಜನ ಮೌಡ್ಯಗಳಿಂದ ಹೊರ ಬರಬೇಕಾದರೆ ಭಯಪಡುತ್ತಿದ್ದಾರೆ. ಏಕೆಂದರೆ ನಮಲ್ಲಿರುವ ವಿಪ್ರರು ಕಲ್ಲಿನ ಮೂರ್ತಿಯನ್ನು ತೋರಿಸಿ ಅದು ದೇವರು ಎಂದು ಜನರನ್ನು ನಂಬಿಸಿಬಿಟ್ಟಿದ್ದಾರೆ. ಇಂತಹ ವೇದ ಪಂಡಿತರನ್ನು ಕಡೆಗಣಿಸಿ ಬಸವಣ್ಣನವರ ವಚನಗಳನ್ನು ಓದಿ ನಮ್ಮ ಜೀವನದಲ್ಲಿ ಅನುಕರಣೆ ಮಾಡಿಕೊಂಡಾಗ ಸುಂದರ ಬಾಳು ನಮ್ಮದಾಗುತ್ತದೆ.
ಮಣ್ಣು ದೇವರು ದೇವರಲ್ಲ
ಫಲವತ್ತಾದ ಮಣ್ಣಿನಲ್ಲಿ ಒಳ್ಳೆಯ ಫಸಲನ್ನು ಬೆಳೆಯಬೇಕು. ಗಿಡ ಮರಗಳಿಗೆ ಒಳ್ಳೆಯ ಫಲವತ್ತಾದ ಮಣ್ಣು ಅವಶ್ಯಕವಾಗಿ
ಬೇಕಾಗುತ್ತದೆ. ಇಂತಹ ಮಣ್ಣನ್ನು ಪೂಜೆ ಮಾಡುವುದರ ಬದಲಿಗೆ ಸಮಯ ವ್ಯರ್ಥ. ನಮ್ಮ ದೇಶಕ್ಕೆ ಬೆನ್ನೆಲುಬು ಆಗಿ ನಿಂತಿರುವ ರೈತ ಮೌಢ್ಯಗಳಿಂದ ಹೊರಬಂದು ಒಳ್ಳೆ ಬೆಳೆದಾಗ ದೇಶದಲ್ಲಿರುವ ಎಲ್ಲಾ ಜನರ ಹಸಿವನ್ನು ನೀಗಿಸಲು ಸಾಧ್ಯವಾಗುತ್ತದೆ.
ಮರ ದೇವರು ದೇವರಲ್ಲ
ದೇವಸ್ಥಾನದ ಮುಂದೆ ಅರಳಿಮರ ಸುತ್ತಿದರೆ ನಮಗೆ ಬಹಳ ಒಳ್ಳೆಯದಾಗುತ್ತದೆ
ಮಕ್ಕಳಾಗದಿರುವವರು ಬನ್ನಿಯ ಮರಸುತ್ತಿದ್ರೆ ಮಕ್ಕಳಾಗುತ್ತವೆ ಎಂದು ನಂಬಿದ್ದಾರೆ .
ನವರಾತ್ರಿಯ ಸಮಯದಲ್ಲಿ 9 ದಿನಗಳ ಕಾಲ ಬನ್ನಿಯ ಮರ ಸುತ್ತುವುದರಿಂದ ಸಾಕ್ಷಾತ್ ದೇವಿಯೇ ನಮ್ಮ ಮನೆಗೆ ಪ್ರವೇಶಿಸುತ್ತಾಳೆ ಎಂದು ವೇದ ಆಗಮ ಪುರಾಣ ಶಾಸ್ತ್ರಗಳನ್ನು ಓದಿಕೊಂಡವರ ಮಾತನ್ನು ನಂಬಿ ನಮ್ಮ ನಾಡಿನ ಕೆಲವು ಮಹಿಳೆಯರು ಮರ ಸುತ್ತುತ್ತಿದ್ದಾರೆ. ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇಂತಹ ವೈಜ್ಞಾನಿಕ ಯುಗದಲ್ಲಿ ಇದನ್ನೆಲ್ಲಾ ನಂಬುವುದು ಎಷ್ಟು ಸರಿ ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ನಾವು ಮೌಢ್ಯಗಳ ದಾಸರಾಗಿದ್ದೇವೆ. ಈ ಮೌಢ್ಯಗಳ ನಂಬುವ ಎಲ್ಲಾ ತಾಯಂದಿರರಲ್ಲಿ ನನ್ನದೊಂದು ಮನವಿ.
ಮರ ಸುತ್ತಿ ಸುತ್ತಿ ಸಮಯ ವ್ಯರ್ಥ ಮಾಡುವ ಬದಲು ಅದೇ ಸಮಯವನ್ನು ಮನೆಗೊಂದು ಮಗು. ಮಗುವಿಗೊಂದು ಮರ ಎಂಬುವಂತೆ ಪ್ರತಿಯೊಬ್ಬರೂ ಮರ-ಗಿಡಗಳನ್ನು ಬೆಳೆಸಿ ಇದರಿಂದ ನಮ್ಮ ನಾಡಿನಲ್ಲಿ ಆವರಿಸಿರುವ ಬರಗಾಲವನ್ನು ಓಡಿಸಿ ವಾತಾವರಣವನ್ನು ಹಸಿರುಮಯವಾಗಿಸಿ.
ಇದರಿಂದ ಕಾಲಕಾಲಕ್ಕೆ ಮಳೆಯಾಗುತ್ತದೆ. ರೈತರ ಬಾಳು ಹಸನಾಗುತ್ತದೆ ನಾನು ಒಬ್ಬ ರೈತ ಮಹಿಳೆಯಾಗಿ ಕಳಕಳಿಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ. ರೈತ ದೇಶದ ಬೆನ್ನೆಲುಬು. ಆ ರೈತನಲ್ಲಿ ನೀವು ದೇವರನ್ನು ಕಾಣಿ. ಕನ್ನಡ ನಾಡಿನ ಎಲ್ಲಾ ತಾಯಂದಿರರಲ್ಲಿ ನನ್ನದೊಂದು ಮನವಿ ನಾವೆಲ್ಲ ಮರ ಸುತ್ತುವ ಮಹಿಳೆಯರಾಗಬಾರದು ಅದರ ಹೊರತಾಗಿ ಮರ-ಗಿಡಗಳನ್ನು ಬೆಳೆಸಿ ತಾಯಿ ಸಾಲುಮರದ ತಿಮ್ಮಕ್ಕಳ ಮಕ್ಕಳಾಗಿ ಬಾಳೋಣ.
ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ
ತಾಮ್ರಾ ಹಿತ್ತಾಳೆ ಕಂಚು ಇತ್ಯಾದಿಗಳಿಂದ ಮೂರ್ತಿಗಳನ್ನು ಮಾಡಿ ಅವುಗಳನ್ನು ಪೀತಾಂಬರ ಹಾಕಿ ತಿಕ್ಕಿ ತಿಕ್ಕಿ ಮನೆಯ ಜಗಲಿಯ ಮೇಲೆ ಇಟ್ಟು ಪೂಜೆ ವ್ರತ ನೇಮ ಇತ್ಯಾದಿಗಳನ್ನು ಮಾಡುತ್ತಾರೆ. ಇದರ ಹೊರತಾಗಿ ಹೆತ್ತ ತಂದೆ ತಾಯಿಯ ಪಾದ ಪೂಜೆ ಮಾಡಿ ವೃದ್ಯಾಪದಲ್ಲಿ ವೃದ್ಧಾಶ್ರಮಗಳಿಗೆ ಕಳಿಸುವುದನ್ನು ಬಿಟ್ಟು ವೃದ್ಧಾಪ್ಯದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಂಡರೆ ಸಾಕು ನಮಗೆ ನಿಜವಾದ ದೇವರು ಸಿಗಲು ಸಾಧ್ಯ.
ಸೇತುಬಂಧ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಮೊದಲಾದ ಪುಣ್ಯಕ್ಷೇತ್ರದಲ್ಲಿರುವ ದೇವರು ದೇವರಲ್ಲ
ವೇದ ಆಗಮ ಪುರಾಣ ಪುಣ್ಯ ಕಥೆಗಳನ್ನು ಓದಿಕೊಂಡ ವಿಪ್ರರು ಕಾಶಿ ಕೇದಾರ ಗೋಕರ್ಣ ಯು ಪುಣ್ಯಕ್ಷೇತ್ರಗಳೆಂದು ನಂಬಿಸಿ ಬಿಟ್ಟಿದ್ದಾರೆ. ಹೀಗಾಗಿ ಅನೇಕರು ಕಾಶಿ ಕೇದಾರ ದರ್ಶನ ಪಡೆಯಲು ತಾ ಮುಂದು ನಾ ಮುಂದು ಎಂದು ತಮ್ಮ ಜೀವದ ಹಂಗನ್ನು ತೊರೆದು ಹೊರಟಿದ್ದಾರೆ.
ಉದಾಹರಣೆಗೆ :
ಮೊನ್ನೆ ಅಷ್ಟೇ ಹಾಸನಾಂಬೆಯ ಬಾಗಿಲು ವರ್ಷಕೊಮ್ಮೆ ತೆಗೆಯುತ್ತದೆ ಎಂದು ತಿಳಿದ ಜನ ದೇವಿಯ ದರ್ಶನ ಪಡೆಯಲು ನಾ ಮುಂದು ತಾ ಮುಂದು ಎಂದು ಓಡೋಡಿ ಬಂದು ದೇವಿಯ ದರ್ಶನ ಪಡೆದಿದ್ದಾರೆ. ಹಾಗಂತ ಜೀವನದಲ್ಲಿ ನಮಗೆ ಬರುವ ಸಾವು ನೋವುಗಳನ್ನು ತಡೆಯಲು ಸಾಧ್ಯವೇ ? ಜನ ಮರಳು ಜಾತ್ರೆ ಮರಳು ಎಂಬುವ ಮಾತು ಸತ್ಯವೆನ್ನಿಸುತ್ತದೆ.

ರಕ್ಷಿತಾ ಅರವಿಂದರೆಡ್ಡಿ ಮುಡಬೂಳ