The depression on the Gangavati Nagar road will be closed and then Singapore will do it – Myagalamani
ಗಂಗಾವತಿ: ಹಲವು ವರ್ಷಗಳಿಂದ ನಿವೇಶನ ಹಾಗು ಮನೆಗಳಿಲ್ಲದೆ ಗುಡಾರದಲ್ಲಿ ಜೀವನ ಸಾಗಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ಸೂಕ್ತ ನಿವೇಶನ ಮನೆ ಒದಗಿಸಿ ವಾಸಯೋಗ್ಯಕ್ಕೆ ಅನುಕೂಲ ಕಲ್ಪಿಸಬೇಕೆಂದು ಶಾಸಕ ಗಾಲಿ ಜನಾರ್ದನರೆಡ್ಡಿ ಅವರಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ್ ಮ್ಯಾಗಳ ಮನಿ ಒತ್ತಾಯಿಸಿದರು.
ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಳೆದ ಅಗಷ್ಟ್ ೧೫ ಶಾಸಕ ಜನಾರ್ದನರೆಡ್ಡಿಯವರಿಗೆ ಈ ಕುರಿತು ಮನವಿ ಸಲ್ಲಿಸಲಾಗಿತ್ತು, ಅಲ್ಲದೆ ಅಲಮಾರಿ ಜನಾಂಗದ ಬವಣೆ ವೀಕ್ಷಿಸಿ ಶೀಘ್ರ ಅನುಕೂಲ ಕಲ್ಪಿಸುವಂತೆಯೂ ಅಗ್ರಹಿಸಲಾಗಿತ್ತು. ಆದರೆ ಅಂದು ಶಾಸಕರು ನಮ್ಮ ಮನವಿಗೆ ಸ್ಪಂದಿಸದೆ ನಿರ್ಲಕ್ಷö್ಯ ತೋರಿದರು. ಬೆಳಗಾವಿಯಲ್ಲಿ ನಡೆಯುವ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿ ಸರಕಾರದ ಗಮನಸೆಳೆದು ವಿಷೇಶ ಆದ್ಯತೆ ಮೇರೆಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು ಇಲ್ಲದಿದ್ದಲ್ಲಿ ಶಾಸಕರಿಗೆ ಮುತ್ತಿಗೆ ಹಾಕಿ ಕಾರ್ಯಕ್ರಮಕ್ಕೆ ನಡೆಯುವ ಸ್ಥಳಕ್ಕೆ ತೆರಳಿ ವಿರೋಧಿ ಘೋಷಣೆ ಕೂಗಲಾಗುವುದು ಎಂದು ಹೇಳಿದರು.
ಗಂಗಾವತಿ ಸಿಂಗಾಪುರ ಮಾಡುವುದಾಗಿ ತಿಳಿಸುವ ಶಾಸಕರು ಸಂಗಾಪುರ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಹನುಮಮಾಲಾಧಾರಿಗಳಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಿ, ನಗರದಲ್ಲಿಯೂ ಅಲ್ಲಲ್ಲಿ ರಸ್ತೆಗಳು ಹಾಳಾಗಿದ್ದು ಶಾಸಕರು ತ್ವರಿತ ಕಾರ್ಯಪ್ರವೃತ್ತರಾಬೇಕಿದೆ, ಸರಕಾರಿ ಇಲಾಖೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪಾಳು ಬಿದ್ದಿರುವ ತಹಶೀಲ್ ಕಚೇರಿ ಇತರೆಡೆಗೆ ಸ್ಥಳಾಂತರಿಸಿ ಸರಕಾರಕ್ಕೆ ಆಗುತ್ತಿರುವ ಬೊಕ್ಕಸ ನಷ್ಟ ತಡೆಯಬೇಕಿದೆ, ಅಬಕಾರಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜೆಜೆಎಮ್ ಗಾಗಿ ಇವುಗಳನ್ನು ಸರಕಾರಿ ಕಟ್ಟಡಗಳಿಗೆ ವರ್ಗಾಯಿಸಿ ಅರಕಾರಕ್ಕೆ ಆಗುತ್ತಿರುವ ಆರ್ಥಿಕ ನಷ್ಟ ತಡೆಯಬೇಕಿದೆ, ಶಾಸಕರು ಎರಡು ರಾಷ್ಟಿçÃಯ ಪಕ್ಷಗಳ ಅಭ್ಯರ್ಥಿಗಳಿಗೆ ನೀರುಣಿಸಿ ಗೆಲುವು ಸಾಧಿಸಿದ್ದು, ಸರಕಾರದ ಅನುದಾನದಿಂಗಾಗಲಿ ತಮ್ಮ ಸ್ವಂತ ಹಣದಿಂದ ಅಭಿವೃದ್ಧಿ ಮಾಡುತ್ತಾರೆ ಎನ್ನುವ ಭರವಸೆಯಿಂದಾಗಿ ಮತ ನೀಡಿದ್ದು, ಜನರ ವಿಶ್ವಾಸಕ್ಕೆ ಚ್ಯತಿ ಬರದಂತೆ ನಡೆದುಕೊಳ್ಳಬೇಕಿದೆ ಜನರ ಕೈಗೆ ಸಿಗುವ ಮೂಲಕ ಅವರ ನೋವು ನಲಿವಿಗೆ ಶಾಸಕರು ಸ್ಪಂದಿಸಿ ಅಭಿವೃದ್ದಿ ಪಡಿಸಬೇಕೆಂದು ಮ್ಯಾಗಳಮನಿ ತಿಳಿಸಿದರು.
ಈ ಸಂದರ್ಭದಲ್ಲಿ ಜಡೆಪ್ಪ ಹಂಚಿನಾಳ, ಪಂಪಣ್ಣ ಕುರಿ, ಆರತಿ ಮಂಜು ಹಾಗು ದುರುಗೇಶ್ ಕೊಪ್ಪಳ ಹಾಗು ಕೃಷ್ಣ ಸಿದ್ದಾಪುರ ಇತರರಿದ್ದರು.