Protest of Karnataka Farmers Association demanding withdrawal of Agrarian Amendment Acts

ಕೊಪ್ಪಳ: ಸಂಯುಕ್ತ ಹೋರಾಟ-ಕರ್ನಾಟಕ ನೇತೃತ್ವದಲ್ಲಿ ನವಂಬರ 26,27,28-1023 ರಂದು ಬೆಂಗಳೂರಿನ ಪ್ರಿಡಂ ಪಾರ್ಕ್ ನಲ್ಲಿ ಮಹಾ ಧರಣೆ ಸಿದ್ಧತೆಯ ಭಾಗವಾಗಿ ಕೊಪ್ಪಳ ನಗರದ ಅಶೋಕ ಸರ್ಕಲ್ ನಲ್ಲಿ ಪ್ರಚಾರಾಂದೋಲನ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರೈತ ಸಂಘದ (AIKKS) ರಾಜ್ಯಾಧ್ಯಕ್ಷರಾದ ಡಿ.ಹೆಚ್.ಪೂಜಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದೇಶಕ್ಕೆ ಮರಣ ಶಾಸನವಾಗಲಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ ಪಡೆಯಲು ಒತ್ತಾಯಿಸಿ ದೆಹಲಿಯ ಸಿಂಗು, ತಿಕರಿ ಬಾರ್ಡರ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಎರಡು ವರ್ಷಗಳ ಹಿಂದೆ ರೈತರು ಸತತ 13 ತಿಂಗಳ ಹೋರಾಟ ನಡೆಸಿದ್ದರು. ಈ ಧೀರೋದಾತ್ತ ಹೋರಾಟದಲ್ಲಿ 750 ಕ್ಕೂ ಹೆಚ್ಚಿನ ರೈತರು ತಮ್ಮ ಪ್ರಾಣ ತ್ಯಾಗ ಮಾಡಿದರು.
ಮಹಾನ್ ಚಳುವಳಿ ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ಭಾರಿ ಪ್ರಭಾವವನುಂಟು ಮಾಡಿತ್ತು.ಕೊನೆಗೂ ಒತ್ತಡಕ್ಕೆ ಬಗ್ಗಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ಕಾಯ್ದೆಗನ್ನು ವಾಪಸ ಪಡೆಯಿತು.ಆ ಸಂದರ್ಭ ಮಾತುಕತೆಯಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪಿಸುವ ಮತ್ತು ವಿದ್ಯುತ್ತ ಕ್ಷೇತ್ರವನ್ನು ಖಾಸಗೀಕರಿಸುವ ತಿದ್ದುಪಡಿ ಮಸೂದೆ ವಾಪಸ್ ರದ್ದುಗೊಳಿಸುವ ಲಿಖಿತ ಒಪ್ಪಂದವಾಗಿತ್ತು.
ಎರಡು ವರ್ಷ ಕಳೆದರೂ ಮೋದಿ ಸರ್ಕಾರ ಕೊಟ್ಟ ಮಾತನ್ಧು ಉಳಿಸಿಕೊಳ್ಳದೆ ದೇಶದ ಜನರಿಗೆ ವಂಚನೆ ಮಾಡಿದೆ.ಈ ಹಿನ್ನೆಯಲ್ಲಿ ಸಂಯುಕ್ತ ಕಿಸಾನ ಮೋರ್ಚಾ ದೇಶಾದ್ಯಂತ ರಾಜ ಭವನ ಚಲೋ ಕಾರ್ಯಕ್ರಮಕ್ಕೆ ಕರೆ ಕೊಟ್ಟಿದೆ.ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೂರು ದಿನಗಳವರಿಗೆ ಮಹಾ ಧರಣೆ ಹಮ್ಮಿಕೊಳ್ಳಲಾಗಿದೆ.
TUCI ರಾಜ್ಯ ಕಾರ್ಯದರ್ಶಿಯಾದ K.B.ಗೋನಾಳ ಮಾತನಾಡಿ, ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ ಪಡೆದುಕೊಂಡ ರೀತಿಯಲ್ಲಿ ಹಿಂದಿನ ಬಿಜೆಪಿಯ ಸರ್ಕಾರ ಕೂಡ ಕಾಯ್ದೆಗಳನ್ನು ವಾಪಸ ಪಡೆಯಬೇಕಾಗಿತ್ತು. ಕಾರ್ಪೋರೇಟ ಕಂಪನಿಗಳ ಹಿತಾಸಕ್ತಿಗಾಗಿ ಕಾಯ್ದೆಗಳನ್ನು ವಾಪಸ ಪಡೆಯಲಿಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಎಕರೆ ಭೂಮಿಯು ಕಾರ್ಪೋರೇಟ ಕಂಪನಿಗಳ ಕೈ ವಶವಾಗಿದೆ.
ಎಪಿಎಂಸಿ ಗಳು ಆದಾಯವಿಲ್ಲದೆ ದಿವಾಳಿಯಾಗಿವೆ. ರಾಜ್ಯ ರೈತ ಸಂಘದ ಭೀಮಸೇನ ಕಲಿಕೇರಿ ಮತನಾಡಿದರು
ಈ ಹಿನ್ನೆಲೆಯಲ್ಲಿಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತ,ಕಾರ್ಮಿಕ, ದಲಿತ ವಿರೋಧಿ ಕಾಯ್ದೆಗಳನ್ನು ವಾಪಸ ಪಡೆಯಬೇಕು.ಪ್ರಗತಿಪರ ಸಂಘಟನೆಗಳ ಒಕ್ಕೂಟದ ಬಸವರಾಜ ಶೀಲವಂತರ ಮಾತನಾಡಿ, ದೇಶದ ರೈತರ ಭೂಮಿ ಯನ್ನು ಅದಾನಿ ಇತರೆ ಕಾರ್ಪೋರೇಟ ಕಂಪನಿಗಳಿಗೆ ಮಾರಾಟ ಮಾಡುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಹೋರಾಡಲು ಕರೆ ಕೊಟ್ಟರು.ರಾಜ್ಯದಲ್ಲಿ ತೀವ್ರ ಬರದಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಸರ್ಕಾರ ಉದ್ಯೋಗ ಕಾಮಗಾರಿ, ಬರಪರಿಹಾರ ಮತ್ತು ಬೆಳೆ ಪರಿಹಾರ ನೀಡಿ ಜನರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.
ಭೂಮಿ ವಸತಿ ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಳೆದ 7 ವರ್ಷಗಳಿಂದ ಭೂ ಮಂಜಾರಾತಿಗಾಗಿ ನಿರಂತರ ಚಳುವಳಿ ನಡೆದಿದೆ ಸರ್ಕಾರ ಭೂ ಮಂಜಾರಾತಿ ಕೊಡಬೇಕು.. *ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ದಿನಾಂಕ 16-11-2023 ರಂದ ಈ ಕುರಿತು ಚರ್ಚಿಸಲು ಅನೇಕ ಬಾರಿ ಸಭೆ ಕರೆದು ಮುಂದೂಡಿರುವುದು ಸರಿಯಲ್ಲ.
ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಯಾದ ಬಸವರಾಜ ನರೆಗಲ, ಕಾಶಪ್ಪ ಚಲುವಾದಿ, ಸಂಜಯ ದಾಸ್, ಲಿಂಗರಾಜ ಬೆಣಕಲ್, ಇತರರು ಭಾಗವಹಿಸಿದ್ದರು.