Vikasita Bharat Sankalpa Yatra from November 23 – Information Program on Govt
ಗಂಗಾವತಿ:ಸರಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ದೊರೆತು ಸಮಾಜದಲ್ಲಿ ಬದಲಾವಣೆ ಕಾಣುವ ನಿಟ್ಟಿನಲ್ಲಿ ಜನರಿಗೆ ಮಾಹಿತಿ ಒದಗಿಸುವ ಜಾಗೃತಿ ಕಾರ್ಯಕ್ರಮದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದು ಬೆಂಗಳೂರು ನಬಾರ್ಡ್ ಅಧಿಕಾರಿಗಳಾದ ಟಿ. ಸುರೇಶ ರವರು ಇಂದು ಹೊಸಕೇರಾ ಗ್ರಾಮದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು
ಗ್ರಾಮೀಣ ಭಾಗದಲ್ಲಿ ಇನ್ನೂ ಮಾಹಿತಿ ಕೊರೆತೆಯಿಂದ ಸರಕಾರದ ಅನೇಕ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಲ್ಲ. ಆದುದರಿಂದ ಇಂಥ ಅರಿವು ಜಾಗೃತಿ ಕಾರ್ಯಕ್ರಮ ಗಳ ಮೂಲಕ ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಎಲ್ಲಾ ನಾಗರಿಕರಿಗೂ ಸೌಲಭ್ಯಗಳನ್ನು ದೊರಕಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಗಂಗಾವತಿ ಆರ್ಥಿಕ ಸಾಕ್ಷಾರತಾ ಸಲಹೆಗಾರರಾದ ಟಿ. ಅಂಜನೇಯ ರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಕೆ. ಎಮ್. ವೀರೇಂದ್ರಕುಮಾರ ರವರು ದೇಶದ ಪ್ರತಿ ಗ್ರಾಮಗಳಲ್ಲಿ ಇಂದಿನಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಪ್ರಾರಂಭವಾಗಿದ್ದು, ಪ್ರತಿ ಗ್ರಾಮಗಳಲ್ಲಿ ಗ್ರಾಮಾಭಿವೃದ್ಧಿಗೆ ಸರಕಾರದ ಯೋಜನೆಗಳ ಮಾಹಿತಿ ತಿಳಿಸುವದು ಅತಿ ಅವಶ್ಯವಾಗಿದೆ. ಗ್ರಾಮಾಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಮತ್ತು ಪ್ರಗತಿ ಕಾಣುತ್ತದೆ.
ಆ ದಿಸೆಯಲ್ಲಿ ಸರಕಾರದ ವಿವಿಧ ಯೋಜನೆಗಳ ಮಾಹಿತಿ /ಜಾಗೃತಿ /ಅರಿವು ನೀಡುವ ಉದ್ದೇಶದಿಂದ ಪ್ರತಿ ಗ್ರಾಮಗಳಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕರೆ ನೀಡಿದರು.
ಮರಳಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ರವಿ ರವವರು ಸಾಮಾಜಿಕ ಭದ್ರತೆ ಯೋಜನೆಗಳ ಮಾಹಿತಿ ನೀಡಿದರು.
ಕೊಪ್ಪಳ ವೆಡ್ಸ್ ಸಂಸ್ಥೆಯ ಚಕ್ರಪಾಣಿ ರವರು ಮಹಿಳೆಯರಿಗೆ ನಬಾರ್ಡ್ ಬ್ಯಾಂಕ್ ದಿಂದ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಲಕ್ಷ್ಮೀದೇವಿ ಗೊಟೂರ್ ರವರು ಉಪಯುಕ್ತ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಮತ್ತು ಸರಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಲು ಮಹಿಳೆಯರಿಗೆ ಕರೆ ನೀಡಿದರು
ಆರ್. ಸಿ. ಎಫ್. ಪುಟ್ಟೇಶ್ ರವರು ಕೃಷಿಗೆ ಉಪಯುಕ್ತ ವಾಗುವ ಗೊಬ್ಬರ ಮತ್ತು ರಾಸಾಯನಿಕ ಔಷದಗಳ ವಿವರಣೆ ನೀಡಿದರು.
ಪ್ರಾರಂಭದಲ್ಲಿ ಶ್ರೀಮತಿ ರೇಣುಕಾ ಟೀಚರ್ ಪ್ರಾಥಿಸಿದರು. ಶ್ರೀಮತಿ ಲಕ್ಷ್ಮೀದೇವಿ ರವರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ವಿಕಸಿತ ಸಂಕಲ್ಪ ಯಾತ್ರೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು
ಈ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಮಹಿಳೆಯರು ಇತರರು ಉಪಸ್ಥಿತರಿದ್ದರು
🌸🍀🌹🪷🌺🌼🌸🌷🌸🌸🌺