Karnataka Rajyotsava Golden Jubilee Celebration at Gangavati Boys Government Pre-Graduation College
ಗಂಗಾವತಿ: ಇಂದು ದಿನಾಂಕ 17.11.2023 ರಂದು ಕಾಲೇಜಿನ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ ರಾಜ್ಯೋತ್ಸವ ಕಾರ್ಯಕ್ರಮ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಭೂತಿ ಗುಂಡಪ್ಪನವರುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ಹಗಲುವೇಷ ಅನ್ನುವಂತ ಕಲೆ ಬದುಕನ್ನು ಹೇಗೆ ರೂಪಿಸಿತು ಅನ್ನೋದನ್ನು ವಿವರಿಸಿದರು.
ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಮುಖ್ಯ ಭಾಷಣಕಾರರಾಗಿ ಡಾ. ಲಿಂಗಣ್ಣ ಜಂಗಮರಳ್ಳಿ ಮಾತನಾಡುತ್ತಾ, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಹೊಸ ಚಳುವಳಿ ಅಗತ್ಯವಾಗಿದೆ, ಆ ಚಳುವಳಿ ಪಂಪ ಬಸವಣ್ಣ ಕುವೆಂಪು ಮಾದರಿಯ ಚಳುವಳಿಯಾಗಬೇಕು ಎಂದರು. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಇವತ್ತು ಕುತ್ತು ಬಂದಿರುವುದು ವಾಸ್ತವವಾದರೂ ಕನ್ನಡಿಗರು ತಮ್ಮ ಕನ್ನಡದ ಸತ್ವ ಮತ್ತು ಶಕ್ತಿ ಅರ್ಥ ಮಾಡಿಕೊಳ್ಳುವಲ್ಲಿ. ವಿಫಲರಾಗಿರುವುದು ಇದಕ್ಕೆ ಕಾರಣವಾಗಿದೆ. ಕನ್ನಡಿಗರು ಕೇವಲ ರಾಜ್ಯೋತ್ಸವವನ್ನು ಆಚರಣೆಗೆ ಸೀಮಿತ ಮಾಡದೆ ಕನ್ನಡದ ಮಾದರಿಗಳನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಪ್ರಾಚಾರ್ಯರಾದ ಶ್ರೀ ಬಸಪ್ಪ ನಾಗೋಲಿ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕಾಗಿದೆ. ಇಂಥ ಕಾರ್ಯಕ್ರಮಗಳು ವಿದ್ಯಾರ್ಜನೆಗೆ ಹೆಚ್ಚು ಅನುಕೂಲಕರವಾಗಿರುತ್ತವೆ ಎಂದು ಹೇಳಿದರು. ಕಾರ್ಯಕ್ರಮದ ಪ್ರಸ್ತಾವಿಕ ಮಾತುಗಳನ್ನು ನುಡಿದ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸೋಮಶೇಖರ ಗೌಡ, ಜನಕವಿ ರಮೇಶ ಗಬ್ಬೂರ್, ಲಲಿತಾ ಕಂದಗಲ್, ರಮಾ, ಕುಮಾರಸ್ವಾಮಿ, ನಾಗಪ್ಪ, ಚಿದಾನಂದ
ಮೇಟಿ ಇತರೆ ಎಲ್ಲಾ ಉಪನ್ಯಾಸಕರು ಸಿಬ್ಬಂದಿ ವರ್ಗ ಹಾಜರಿದ್ದರು.
ಈ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಪ್ರಬಂಧ, ರಸಪ್ರಶ್ನೆ, ಆಶುಭಾಷಣ, ಏಕಪಾತ್ರಾಭಿನಯ, ನೃತ್ಯ, ಮತ್ತು ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು ಎಂದು ರಮೇಶ ಗಬ್ಬೂರ್ ತಿಳಿದಿದ್ದಾರೆ.