BEO Ningappa KT visits background of high school sanction to Urdu primary school

ಯಲಬುರ್ಗಾ: ಪಟ್ಟಣದ ಜಾಮಿಯಾ ಮಸ್ಜಿದ್ ಹತ್ತಿರ ಇರುವ ಉರ್ದು ಪ್ರಾಥಮಿಕ ಶಾಲೆಗೆ ಹೈಸ್ಕೂಲ್ ಮಂಜೂರಾತಿ ಹಿನ್ನಲೆ ಬಿಇಒ ನಿಂಗಪ್ಪ ಕೆ.ಟಿ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಈ ಕುರಿತಂತೆ ಮಾತನಾಡಿ ತಕ್ಷಣ ಉರ್ದು ಹೈಸ್ಕೂಲ್ ಗೆ ಸೇರುವ ವಿದ್ಯಾರ್ಥಿಗಳ ದಾಖಲು ಮಾಡಿಕೊಳ್ಳುವ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಇನ್ನೂ ಅಲ್ಲಿಯೇ ಉಪಸ್ಥಿತರಿದ್ದ ಮುಸ್ಲಿಮ್ ಸಮಾಜ ಮುಖಂಡರಾದ ಅಕ್ತರಸಾಬ ಖಾಜಿ ಮತ್ತು ಪಪಂ ಸದಸ್ಯ ರಿಯಾಜ್ ಖಾಜಿ ಅವರು ಉರ್ದು ಶಾಲೆಗೆ ಹೈಸ್ಕೂಲ್ ದಾಖಲಾತಿ ಪಡೆಯಲು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಲ್ಲಿ ಇಂತಿಷ್ಟು ಸ್ಥಾನಗಳ ನೀಡುವ ಕ್ರಮ ಕೈಗೊಂಡಾಗ ಮಾತ್ರ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಹೈಸ್ಕೂಲ್ ಗೆ ಸೇರುವರು ಕಾರಣ ಈ ಕುರಿತು ವಸತಿ ನಿಲಯಗಳ ಗಮನಕ್ಕೆ ತರುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಬಿಇಒ ಅವರ ಗಮನಕ್ಕೆ ತಂದರು. ಶಾಲೆಗೆ ಹೈಸ್ಕೂಲ್ ವಿದ್ಯಾರ್ಥಿಗಳ ದಾಖಲು ಪಡೆಯಲು ಪ್ರತಿಯೊಬ್ಬರು ಹೆಚ್ಚು ಗಮನ ಹರಿಸಬೇಕಿದೆ ಎಂದ ಅವರು ಉರ್ದು ಶಾಲೆಯ ಹೈಸ್ಕೂಲ್ ಪ್ರಾರಂಭ ಕಾರ್ಯಕ್ರಮಕ್ಕೆ ಶಾಸಕರಾದ ಬಸವರಾಜ ರಾಯರಡ್ಡಿ ಆಗಮಿಸುವರು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಬುಡನಸಾಬ ದಫೆದಾರ, ಪಾಷಾಸಾಬ ಕನಕಗಿರಿ, ಬಾಬುಸಾಬ ಮಂಡಲಗಿರಿ, ಎಮ್ ಎಫ್ ನದಾಫ್, ಖಾಜಾಸಾಬ ಅಮರಾವತಿ ಸೇರಿ ಶಿಕ್ಷಕರು ಪ್ರಮುಖರು ಉಪಸ್ಥಿತರಿದ್ದರು.