Breaking News

ಹೈದರಾಬಾದ್ ಚಲೋ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಎ.ಬಿ.ಸಿ.ಡಿ. ವರ್ಗಿಕರಣ ಮತ್ತು ರಾಜ್ಯದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ

āyōga varadi jārige ottāyaA.B.C.D. in Hyderabad Chalo Big Convention Program. Forced implementation of Ny.A.J.Sadashiva commission report on gender and state

ಜಾಹೀರಾತು

ತಿಪಟೂರು: ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಘಟಕದ ವತಿಯಿಂದ ನಗರದ ಕೌಸ್ತುಭ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು.

ಹೈದರಾಬಾದ್ ನ ಮಾದಿಗರ ವಿಶ್ವರೂಪ ಬೃಹತ್ ಸಮಾವೇಶ ಕಾರ್ಯಕ್ರಮದ ಅಂಗವಾಗಿ ಹೈದರಾಬಾದ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಎ.ಬಿ.ಸಿ.ಡಿ. ವರ್ಗಿಕರಣ ಮತ್ತು ರಾಜ್ಯದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿಲಾಯಿತು ಎಂದು ಮಾದಿಗ ದಂಡೋರ ಮೀಸಲಾತಿ ಸಮಿತಿ ತಾಲ್ಲೂಕು ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನವೆಂಬರ್ 11ರಂದು ಮಾದಿಗರ ರಾಷ್ಟ್ರ ನಾಯಕರಾದ ಮಂದಕೃಷ್ಣ ಮಾದಿಗ ಅವರ ನಾಯಕತ್ವದಲ್ಲಿ ಹೈದರಾಬಾದ್ ನ ಸಿಕಂದರಾಬಾದ್ ಪೊಲೀಸ್ ಗ್ರೌಂಡ್ ನಲ್ಲಿ ದೇಶದಾದ್ಯಂತ ಸುಮಾರು 25 ಲಕ್ಷ ಮಾದಿಗ ಬಂಧುಗಳು ಸಮಾವೇಶಗೊಂಡು ನ್ಯಾಯಯುತ ಬೇಡಿಕೆಗಾಗಿ ಒತ್ತಾಯಿಸಿದರು. ಆಳಂಪುರದಿಂದ ಹೈದರಾಬಾದ್ ಗೆ ಸುಮಾರು 250 ಕಿಲೋ ಮೀಟರ್ ವರೆಗೆ ರಾಷ್ಟ್ರ ನಾಯಕ ಮಂದಕೃಷ್ಣ ಮಾದಿಗ ಕಾಲ್ನಡಿಗೆ ಜಾತ ನಡೆಸಿ ದೇಶದ ಗಮನ ಸೆಳೆಯುವ ಜೊತೆಗೆ ಪೊಲೀಸ್ ಪೇರೆಂಟ್ ಗ್ರೌಂಡ್ ನಲ್ಲಿ ಲಕ್ಷಾಂತರ ಜನರ ಸಮಾವೇಶ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ತಮ್ಮ ಬೇಡಿಕೆ ಈಡೇರಿಸಲು ಒತ್ತಾಯ ಮಾಡಿದ್ದು ಒಂದು ಹೊಸ ಇತಿಹಾಸ ನಿರ್ಮಾಣವಾಗಿದೆ. ಹಲವು ದಶಕಗಳ ಕಾಲದ ಶೋಷಿತ ದಲಿತ ಸಮುದಾಯದ ಸಾಮಾಜಿಕ ಹೋರಾಟಕ್ಕೆ ಈ ಸಮಾವೇಶ ಸಾಕ್ಷಿಯಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮಾವೇಶದಲ್ಲಿ ಭಾಗವಹಿಸಿ,ಮಾದಿಗ ಸಮುದಾಯದ ಹಲವು ವರ್ಷಗಳ ಬೇಡಿಕೆ,ಹೋರಾಟ,ಇತರೆ ಕುಂದು ಕೊರತೆಗಳನ್ನು ಆಲಿಸಿ, ಮಾದಿಗ ಒಳ ಮೀಸಲು ಬೇಡಿಕೆ ಅಧ್ಯಯನಕ್ಕೆ ರಾಷ್ಟ್ರಮಟ್ಟದ ಸಮಿತಿ ರಚಿಸಿ, ಆದಷ್ಟು ಬೇಗ ನ್ಯಾಯ ನೀಡುವುದಾಗಿ ಭರವಸೆ ನೀಡಿದರು.ಮಾದಿಗರ ನಾಯಕರಾದ ಮಂದಕೃಷ್ಣ ಮಾದಿಗರನ್ನು ವೇದಿಕೆಯಲ್ಲಿ ಬಿಗಿದಪ್ಪಿ, ಮುಂದಿನ ದಿನಗಳಲ್ಲಿ ಮಾದಿಗರ ಪರವಾಗಿ ತಾವು ಇರುವುದಾಗಿ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಕೇಂದ್ರ ಸಚಿವರಾದ
ಎ. ನಾರಾಯಣಸ್ವಾಮಿ, ರಾಜ್ಯ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕೇಂದ್ರ ಸಚಿವರು ಇತರೆ ರಾಜ್ಯಗಳ ಸಚಿವರು ರಾಜ್ಯದ ಮಾದಿಗ ದಂಡೋರ ರಾಷ್ಟ್ರ ಅಧ್ಯಕ್ಷ ನರಸಪ್ಪ ಮಾದಿಗ ಹಾಗೂ ಇತರೆ ಮಾದಿಗ ಸಮುದಾಯದ ಮುಖಂಡರ ಸಮ್ಮುಖದಲ್ಲಿ ದೇಶದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಾದಿಗ ಸಮುದಾಯಕ್ಕೆ ವಿಶೇಷ ಆದ್ಯತೆ ಮತ್ತು ಮೀಸಲು ನೀಡುವಂತೆ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಮುಖಂಡರು ತಿಳಿಸಿದರು.
ಬೆಳಗಾವಿ ಅಧಿವೇಶನಕ್ಕೂ ಮುನ್ನ
ರಾಜ್ಯದ ಎಲ್ಲಾ ಶಾಸಕರನ್ನು ಭೇಟಿಯಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿ ಮಾಡಲು ಒತ್ತಾಯಿಸುತ್ತೇವೆಂದು ಶಾಂತಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಾಂತಪ್ಪ, ಚಂದ್ರಶೇಖರ್ ಬೆಳಗೆರೆ,ಬಸವರಾಜು, ರಂಗಸ್ವಾಮಿ,ಲಿಂಗದೇವರು,ಗ್ರಾಮ ಪಂಚಾಯತಿ ಸದಸ್ಯರಾದ ರಾಘು ಯಗಚೀಕಟ್ಟೆ ಉಪಸ್ಥಿತರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.