Meeting on crop damage and drought relief under the chairmanship of district in-charge minister
ಗಂಗಾವತಿ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಬೆಳೆ ಹಾನಿ ಮತ್ತು ಬರ ಪರಿಹಾರ ಕುರಿತು ಸಭೆ ನಡೆಯಿತು.
ಕುಡಿವ ನೀರು ಸೌಲಭ್ಯ, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಪ್ರಗತಿ ಚರ್ಚೆ ನಡೆಯಿತು.
ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ, ಎಡಿಸಿ ಶ್ರೀಮತಿ ಸಾವಿತ್ರಿ ಬಿ.ಕಡಿ,
ಎಸಿ ಶ್ರೀ ಕ್ಯಾಪ್ಟನ್ ಮಹೇಶ, ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಕು. ಕಾವ್ಯರಾಣಿ ಕೆ.ವಿ., ಜಿಪಂ ಎಎಸ್ ಶಿವಪ್ಪ, ತಹಸೀಲ್ದಾರರಾದ ಮಂಜುನಾಥ ಭೋಗಾವತಿ,
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮೀದೇವಿ, ತಾಪಂ ಸಹಾಯಕ ನಿರ್ದೇಶಕರು, ವ್ಯವಸ್ಥಾಪಕರು, ಕಂದಾಯ ಇಲಾಖೆ, ಪಿಆರ್ ಡಿ, ಕೃಷಿ ಇಲಾಖೆ ಸೇರಿ ಇತರೆ ಅನುಷ್ಠಾನ ಇಲಾಖೆ ಅಧಿಕಾರಿಗಳು ಇದ್ದರು.