The farmers’ organizations requested the authorities to solve many problems.
ವರದಿ : ಬಂಗಾರಪ್ಪ ಸಿ .
ಹನೂರು : ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸಲು ರೈತ ಸಂಘಟನೆಯಿಂದ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಜಿಲ್ಲಾಧ್ಯಕ್ಷ ಶಾಂತ ಮಲ್ಲಪ್ಪ ತಿಳಿಸಿದರು
ಹನೂರು ತಾಲೂಕಿನ ಮಾಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಟ್ಟು ಕಾಡು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ನೂತನ ಗ್ರಾಮ ಘಟಕ ಉದ್ಘಾಟನೆ ಮಾಡಿ ನಂತರ ಅವರು ಮಾತನಾಡಿದರು
ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಇಲ್ಲಿನ ಜನಪ್ರತಿನಿಧಿಗಳು ಅಧಿಕಾರಿಗಳು ಗಮನಹರಿಸದೆ ಸಮಸ್ಯೆಗಳಾಗಿ ಉಳಿದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಬರವಸೆ ನೀಡಿದರು
ಜಿಲ್ಲಾ ಉಪಾಧ್ಯಕ್ಷ ಗೌಡೆ ಗೌಡ ಮಾತನಾಡಿ ಕಿರಪತಿ ಮಾಟಳ್ಳಿ ಸರ್ವೆ ನಂಬರ್ ನ 18ರಲ್ಲಿ 1700 ಎಕ್ಟರ್ ಆರ್‌ಟಿಸಿಯಲ್ಲಿ ಬರುತ್ತಿರುವುದರಿಂದ ಕೊಡಿ ಮುಕ್ತಗೊಳಿಸದೆ ರೈತರಿಗೆ ಬ್ಯಾಂಕ್ ಗಳಿಂದ ಸಾಲ ಪಡೆಯಲು ಪಿಎಂ ಮೋದಿ ಕಿಶನ್ ಸೌಲತ್ತು ಪಡೆಯಲು ಹಾಗೂ ಸರ್ಕಾರಿ ವಿವಿಧ ಸೌಲತ್ತು ಪಡೆಯಲು ಆರ್ಟಿಸಿಗಳು ಸಿಗದೇ ಕೊಡಿ ಮುಕ್ತಗೊಳಿಸದೆ ಅಧಿಕಾರಿಗಳು ಇಲ್ಲಿನ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಈ ಭಾಗದ ರೈತರಿಗೆ ಸಂಕಷ್ಟ ಪಡುವಂತಾಗಿದೆ ಕರ್ನಾಟಕ ರಾಜ್ಯ ರೈತ ಸಂಘ ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಗಮನಕ್ಕೆ ತಂದು ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಜೊತೆಗೆ ಇಲ್ಲಿನ ರೈತರ ಆರ್ ಟಿ ಸಿ ಯಲ್ಲಿ ಲೋಕದೋಷ ಪೋಡಿ ಮುಕ್ತಗೊಳಿಸದೆ ಇರುವುದರಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಸಂಘಟನೆ ಸದಾ ನಿಮ್ಮ ಜೊತೆಯಲ್ಲಿ ಇರುತ್ತದೆ ಹೀಗಾಗಿ ಮುಂದಿನ ದಿನಗಳಲ್ಲಿ ಅಂತಹ ಹಂತವಾಗಿ ಅಧಿಕಾರಿಗಳಿಗೆ ಸಮಸ್ಯೆಯನ್ನು ತೆರೆದಿಟ್ಟು ಕ್ರಮ ಕೈಗೊಳ್ಳಲು ಸಂಘಟನೆ ಬದ್ಧವಾಗಿದೆ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಅನುರು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಮಹಿಳಾ ತಾಲೂಕು ಘಟಕದ ಅಧ್ಯಕ್ಷ ರಾಜಾಮಣಿ ತಾಲೂಕು ಗೌರವಾಧ್ಯಕ್ಷ ರಾಜಣ್ಣ ಏಳು ಸ್ವಾಮಿ ಅರ್ಪಿದರಾಜ್ ಪಳನಿ ಶೆಟ್ಟಿ ಕಾಶಿ ಗೌಡ ಈರಣ್ಣ ಇನ್ನಿತರ ರೈತ ಮುಖಂಡರು ಉಪಸಿತರಿದ್ದರು