Selection for the Pan Masters Athletics Games of this level in Sant Rashtriya in 2024.
ಗಂಗಾವತಿ: ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ದಿನಾಂಕ ೪ ಮತ್ತು ೫ ನವಂಬರ್ ೨೦೨೩ ರಂದು ಧಾರವಾಡದ ಆರ್.ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ಸ್ಟೇಟ್ ಓಪನ್ ನ್ಯಾಷನಲ್ ಮಾಸ್ರ‍್ಸ್ ಗೇಮ್ಸ್ ನಡೆಸಲಾಯಿತು.
ಇದರಲ್ಲಿ ಭಾಗವಹಿಸಿದ ರನ್ನರ್ಸ್ ಯುನಿಟಿ ಟೀಮ್ ಗಂಗಾವತಿಯ ಒಟ್ಟು ನಾಲ್ಕು ಸ್ಪರ್ದಾಳುಗಳು ಭಾಗವಹಿಸಿ ಮೂರು ಚಿನ್ನದ ಪದಕ, ಐದು ಬೆಳ್ಳಿ ಪದಕಗಳನ್ನು ಪಡೆದು ವಿಜೇತರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಮುಖ್ಯ ತರಬೇತಿದಾರರಾದ ಷಣ್ಮುಖಪ್ಪನವರು ತಿಳಿಸಿದ್ದಾರೆ.
೪೦ ವರ್ಷದ ವಯೋಮಿತಿಯ ಒಳಗಡೆ ಷಣ್ಮುಖಪ್ಪನವರು ೪೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ, ೮೦೦ ಮೀಟರ್ ಓಟದಲ್ಲಿ ಬಂಗಾರದ ಪದಕ, ೫೦೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಹಾಗೂ ೧೦, ೦೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಚಿರಂಜೀವಿ ಸಿದ್ದಾಪುರ ಅವರು ೩೫ ವರ್ಷದ ವಯಮಿತಿಯ ೫ ಕಿ.ಮೀ ಓಟದಲ್ಲಿ ಬೆಳ್ಳಿ ಪದಕ, ೪೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ, ಶಿವರಾಜ್ ಹೊಸಮನಿ (ಬೇವಿನಾಳ) ಕಾರಟಗಿ ೩೦ ವರ್ಷದ ವಯೋಮಿತಿಯ ಒಳಗಡೆ ೫ ಕಿ.ಮೀ ಓಟದಲ್ಲಿ ಬಂಗಾರದ ಪದಕ ಹಾಗೂ ೧೦ ಕಿ.ಮೀ ನಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದಾರೆ ಹಾಗೂ ಅಂತಿಮವಾಗಿ ಪ್ರವೀಣ್ ಕುಮಾರ್ ಚಳ್ಳಮರದ ೪೦ ವರ್ಷದ ವಯೋಮಿತಿಯ ಒಳಗಡೆ ೫ ಕಿಲೋಮೀಟರ್ ವಲ್ಕ್ ರೇಸ್‌ನಲ್ಲಿ ನೂರು ಮೀಟರ್ ಓಟ ಹಾಗೂ ೬೦ ಮೀಟರ್ ಓಟದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದುಕೊಂಡರೆ, ಸಾಧನೆಗೈದ ಎಲ್ಲಾ ಕ್ರೀಡಾಪಟುಗಳಿಗೆ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಹ ಪಾಠಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.