Breaking News

SSLC ಮಕ್ಕಳಿಗಾಗಿ ಗ್ರಾಮೀಣ ಭಾರತಿ 90. 4ಎಫ್.ಎಮ್‌. ನಲ್ಲಿ ರೇಡಿಯೋ ಪಾಠಗಳ ಯಶಸ್ವಿ ಪ್ರಸಾರ; ಶಾಲಾ ಮಕ್ಕಳಿಂದ ಉತ್ತಮ ಪ್ರತಿಕಿಯೆ

Grameen Bharati for SSLC Children 90. 4F.M. Successful broadcast of radio lessons in; Good feedback from school children

ಜಾಹೀರಾತು
WhatsApp Image 2023 11 06 At 6.12.37 PM 300x130

ಗಂಗಾವತಿ ಫೆ. 06:ಇಂದು ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 10ನೇ ತರಗತಿಯ ಫಲಿತಾಂಶ ಸುಧಾರಣೆ ಕಾರ್ಯಾಗಾರದಲ್ಲಿ ರೇಡಿಯೋ ಪಾಠ ಕಾರ್ಯಕ್ರಮವನ್ನು ಗ್ರಾಮೀಣ ಭಾರತಿ 90.4ಎಫ್ಎಂ ನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು ಇಂದು ಕನ್ನಡ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಜಯಶ್ರೀ ಹಕ್ಕಂಡಿ, ಕರೇಗೌಡ ಬಿಳೆ ಮತ್ತು ಬಸವರಾಜ್ ಶಿಕ್ಷಕರು ಕನ್ನಡ ವಿಷಯದ ಪಾಠ ಮತ್ತು ವಿದ್ಯಾರ್ಥಿಗಳ ಸುಮಾರು 30ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಮೂಲಕ ವಿಷಯದಲ್ಲಿನ ಗೊಂದಲಗಳನ್ನು ಪರಿಹರಿಸಿದರು.
ನಮ್ಮೂರಿನ ರೇಡಿಯೋದಲ್ಲಿ ಪ್ರಸಾರವಾದ ಮೊದಲ ರೇಡಿಯೋ ಪಾಠದ ನೇರ ಫೋನಿನ್ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದದ್ದು, ಅಚ್ಚುಕಟ್ಟಾಗಿ ಕಾರ್ಯಕ್ರಮ ಪ್ರಸಾರವಾಯಿತು..
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ ರಾಮಚಂದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರೇಡಿಯೋ ಪಾಠಗಳ ಸದುಪಯೋಗವನ್ನು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಸೂಚಿಸಿದರು.
ಇದೆ ವೇಳೆ ರೇಡಿಯೋ ನಿಲಯದ ವ್ಯವಸ್ಥಾಪಕಿ ಲಾವಣ್ಯ ಅಂಚಕಟ್ಲು ಮಾತನಾಡಿ, ಗುಣಾತ್ಮಕ ಶಿಕ್ಷಣದ ಗುರಿ ಸಾಧನೆಯೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಗಂಗಾವತಿ ಹಾಗೂ ಗ್ರಾಮೀಣ ಭಾರತಿ ರೇಡಿಯೋ ಸಹಯೋಗದೊಂದಿಗೆ ರೇಡಿಯೋ ಪಾಠಗಳನ್ನು ಭಿತ್ತರಿಸಲಾಗುತ್ತದೆ, ಮೊದಲ ಪ್ರಯತ್ನವಾಗಿ ಎಸ್‌ ಎಸ್‌ ಎಲ್‌ ಸಿ ಮಕ್ಕಳಿಗಾಗಿ ಪರೀಕ್ಷಾ ಪೂರ್ವ ಸಿದ್ದತಾ ಕ್ರಮವಾಗಿ ರೆಡಿಯೋ ಪಾಠಗಳನ್ನು ದಿನಕ್ಕೆ ಒಂದು ವಿಷಯದಂತೆ ಪ್ರಸಾರ ಮಾಡಲಾಗುವುದು.
ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ಸಂಬಂಧ ಪ್ರತಿದಿನ ರೇಡಿಯೋ ಪಾಠಗಳು ಪ್ರಸಾರವಾಗಲಿವೆ, ಇಂದು 3ಗಂಟೆಯಿಂದ 5ಗಂಟೆವರೆಗೆ ಕನ್ನಡ ವಿಷಯದ ಪಾಠ, ಪ್ರಶ್ನೊತ್ತರಗಳು ನೇರ ಪ್ರಸಾರವಾದವು.
ಶಾಲಾ ಮಕ್ಕಳಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಯಿತು. ಅಖಂಡ ಗಂಗಾವತಿ ತಾಲೂಕಿನ ಸುಮಾರು ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳಿ ಸಂಪನ್ಮೂಲ ಶಿಕ್ಷಕರಿಂದ ಉತ್ತರ ಪಡೆದರು. ಮೊದಲ ಸಂಚಿಕೆ ಅಭೂತಪೂರ್ವ ಯಶಸ್ಸು ಕಂಡಿದ್ದಕ್ಕೆ ಹರ್ಶ ವ್ಯಕ್ತಪಡಿಸಿದರು.
ಕರೆ ಮಾಡಿ ಪ್ರಶ್ನೆಗಳನ್ನು ಕೇಳಿದ ಮುದ್ದು ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಹೇಳಿದರು.
07-11-23ರಂದು ಗಣಿತ ವಿಷಯದ ಪಾಠ ಪ್ರಸಾರವಾಗಲಿದೆ. ಇಂದಿನಂತೆ ಎಲ್ಲರೂ ಸಹಕರಿಸುವಂತೆ ಕೋರಿದರು.
ನಿಲಯ ನಿರ್ದೇಶಕರು ರಾಘವೇಂದ್ರ ತೂನ ಅವರು ತಾಂತ್ರಿಕ ನೆರವು ಒದಗಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ನೆರವಾದರು.
ಇದೇ ವೇಳೆ, ಕನ್ನಡ ಭಾಷಾ ವೇದಿಕೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಸಿಎಂ ಬಸವರಾಜ ಅವರು ಹಾಗೂ ಕಚೇರಿ ಶಿಕ್ಷಣ ಸಂಯೋಜಕರು ರಾಘವೇಂದ್ರ ಪಿಸಿ, ಸಂಪನ್ಮೂಲ ಶಿಕ್ಷಕರಾದ ಜಯಶ್ರಿ ಹಕ್ಕಂಡಿ, ಹನುಮಂತಪ್ಪ, ಕರೇಗೌಡ ಎನ್.ಬಿ, ಎಸ್.ಜಿ.ಗುರಿಕಾರ, ಬಸವರಾಜ ಎಸ್‌, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಪನ್ಮೂಲ ಶಿಕ್ಷಕರೊಂದಿಗೆ ರೇಡಿಯೋ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾತನಾಡಲು ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ ಹೆಸರು ನೊಂದಾಯಿಸಲು ಕೋರಲಾಗಿದೆ. ಮೊ.ಸಂ: 9449015757, 9513326661, ದೂ.ಸಂ. 08533466722

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.